ವಾಸಿ ಶಿವಣ್ಣ ರಿಯಲ್‌ ಎಸ್ಟೇಟ್‌ ವ್ಯಾಪಾರದಲ್ಲಿ ನಷ್ಟ ಅನುಭವಿಸಿದ್ದನು. ಸುಲಭವಾಗಿ ಹಣ ಮಾಡಲು ಸಂಚು ರೂಪಿಸಿದ ಈತ, ಮುಳಬಾಗಿಲಿನ ಸ್ವಾಮೀಜಿಯೊಬ್ಬರ ಬಳಿ 2000 ಮೌಲ್ಯದ ಲಕ್ಷಾಂತರು ರು. ಕಪ್ಪು ಹಣವಿದೆ. 500 ಮುಖಬೆಲೆಯ ಒಂದು ಲಕ್ಷ ರು.ಗಳನ್ನು ನೀಡಿದರೆ 2000 ಸಾವಿರ ಮುಖಬೆಲೆ 1,20000 ನೀಡುವುದಾಗಿ ಶ್ರೀನಿವಾಸಪುರದ ರಿಯಾಜ್‌ ಖಾನ್‌ ಎಂಬುವರನ್ನು ನಂಬಿಸಿದ್ದನು. 

ಮುಳಬಾಗಿಲು(ಮೇ.06): ನಗರದ ರಿಯಲ್‌ ಎಸ್ಟೇಟ್‌ ವ್ಯಾಪಾರಿಯೊಬ್ಬರು ನೆರೆಯ ಆಂಧ್ರದ ವಿ.ಕೋಟಿಯಲ್ಲಿ ನಕಲಿ ಡಿವೈಎಸ್ಪಿ ವೇಷದಲ್ಲಿರುವಾಗ ಅಲ್ಲಿನ ಪೊಲೀಸರಿಗೆ ಸಿಕ್ಕಿಬಿದ್ದಿರುವ ಘಟನೆ ಶುಕ್ರವಾರ ನಡೆದಿದೆ. ಆರೋಪಿಯನ್ನು ಮುಳಬಾಗಿಲು ನಗರದ ವಾಸಿ ಶಿವಣ್ಣ ಎಂದು ಗುರುತಿಸಲಾಗಿದೆ. 

ಈತ ರಿಯಲ್‌ ಎಸ್ಟೇಟ್‌ ವ್ಯಾಪಾರದಲ್ಲಿ ನಷ್ಟ ಅನುಭವಿಸಿದ್ದನು ಎನ್ನಲಾಗಿದೆ. ಸುಲಭವಾಗಿ ಹಣ ಮಾಡಲು ಸಂಚು ರೂಪಿಸಿದ ಈತ, ಮುಳಬಾಗಿಲಿನ ಸ್ವಾಮೀಜಿಯೊಬ್ಬರ ಬಳಿ 2000 ಮೌಲ್ಯದ ಲಕ್ಷಾಂತರು ರು. ಕಪ್ಪುಹಣವಿದೆ. 500 ಮುಖಬೆಲೆಯ ಒಂದು ಲಕ್ಷ ರು.ಗಳನ್ನು ನೀಡಿದರೆ 2000 ಸಾವಿರ ಮುಖಬೆಲೆ 1,20000 ನೀಡುವುದಾಗಿ ಶ್ರೀನಿವಾಸಪುರದ ರಿಯಾಜ್‌ ಖಾನ್‌ ಎಂಬುವರನ್ನು ನಂಬಿಸಿದ್ದಾನೆ.

ಕೋಲಾರ: ಬಂಗಾರಪೇಟೆಯಲ್ಲಿ 2.50 ಕೋಟಿ ಹಣ ಪತ್ತೆ..!

ಇದನ್ನು ಖಾನ್‌ ಏಪ್ರಿಲ್‌ 28ರಂದು ಆಂಧ್ರಪ್ರದೇಶದ ಕುಪ್ಪಂ ಹೆದ್ದಾರಿಯ ಅಟ್ರಪಲ್ಲಿ ಕ್ರಾಸ್‌ ಬಳಿ ಐದು ಲಕ್ಷ ರು. ಹಣದೊಂದಿಗೆ ಬಂದಿದ್ದಾರೆ. ಆಗ ಸ್ಥಳಕ್ಕೆ ಡಿವೈಎಸ್ಪಿ ವೇಷದಲ್ಲಿ ತನ್ನ ಸಹಚರರೊಂದಿಗೆ ಆಗಮಿಸಿದ ಶಿವಣ್ಣ ಹಣವನ್ನು ಕಿತ್ತುಕೊಂಡು ಕಾರನಲ್ಲಿ ಪರಾರಿಯಾಗಿದ್ದಾರೆ. ಆದರೆ ಪಟ್ರಹಳ್ಳಿ ಬಳಿ ಚೆಕಿಂಗ್‌ ಪೋಸ್ಟ್‌ನಲ್ಲಿ ವಾಹನ ತಪಾಸಣೆ ಸಂದರ್ಭದಲ್ಲಿ ಹಣದ ಸಮೇತ ಶಿವಣ್ಮ ಹಾಗೂ ಆತನ ಸಹಚರರಾದ

ಡೇನಿಯಲ್‌. ಜಮೀರ್‌ಬಾಷ, ಇಮ್ರಾನ್‌. ವೆಂಕಟೇಶಯ್ಯ ಶೆಟ್ಟಿ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ವಿ.ಕೋಟ ಡಿವೈಎಸ್ಪಿ ಸುಧಾಕರ್‌ ತಿಳಿಸಿದ್ದಾರೆ.