*  60ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೇಕಿದ್ದ ಸವಂಚಕರ ಬಂಧಿಸಿದ ಸಿಇಎನ್‌ ಪೊಲೀಸರು*  ಎಸಿಬಿ ಅಧಿ​ಕಾರಿಗಳ ಹೆಸರಿನಲ್ಲಿ ಬೆದರಿಸಿ ಹಣಕ್ಕಾಗಿ ಬೇಡಿಕೆ ಇಟ್ಟ ಖದೀಮರು*  ನಕಲಿ ಎಸಿಬಿ ಅಧಿ​ಕಾರಿಗಳ ಬೆದರಿಕೆ ಕರೆಗಳ ಕುರಿತು ದೂರು 

ಬಾಗಲಕೋಟೆ(ಮೇ.29): ರಾಜ್ಯಾದ್ಯಂತ 60ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೇಕಾಗಿದ್ದ ನಕಲಿ ಎಸಿಬಿ ಅಧಿ​ಕಾರಿಗಳನ್ನು ಬಂ​ಧಿಸುವಲ್ಲಿ ಯಶಸ್ವಿಯಾಗಿರುವ ಬಾಗಲಕೋಟೆಯ ಸಿಇಎನ್‌ ಪೊಲೀಸರು ವಂಚಕರನ್ನು ಹಾಸನ ಜಿಲ್ಲೆಯಿಂದ ಬಂ​ಧಿಸಿ ಶನಿವಾರ ಕರೆತಂದಿದ್ದಾರೆ.

ಬಾಗಲಕೋಟೆಯ ಪಂಚಾಯತ್‌ ರಾಜ್‌ ಹಾಗೂ ಗ್ರಾಮೀಣಾಬಿವೃದ್ಧಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಈಶ್ವರ ಕುರುಬಗಟ್ಟಿ ಎಂಬ ಅಧಿ​ಕಾರಿಗೆ ಏ.29ರಂದು ಕರೆಮಾಡಿ ಎಸಿಬಿ ಅಧಿ​ಕಾರಿಗಳ ಹೆಸರಿನಲ್ಲಿ ಬೆದರಿಸಿ ಹಣಕ್ಕಾಗಿ ಬೇಡಿಕೆ ಇಟ್ಟ ನಂತರ ಅಧಿ​ಕಾರಿ ನೀಡಿದ ದೂರಿನ ಮೆರೆಗೆ ಬಾಗಲಕೋಟೆ ಜಿಲ್ಲಾ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಮುಂದಾಗಿದ್ದರ ಪರಿಣಾಮ ಇಬ್ಬರು ನಕಲಿ ವಂಚಕರನ್ನು ಬಂ​ಧಿಸಲು ಸಾಧ್ಯವಾಗಿದೆ.

ರಾಜ್ಯದ ವಿವಿಧೆಡೆ ನಕಲಿ ಎಸಿಬಿ ಅಧಿ​ಕಾರಿಗಳ ಸೋಗಿನಲ್ಲಿ ಅಧಿ​ಕಾರಿಗಳಿಗೆ ಕರೆ ಮಾಡಿ ಬೆದರಿಕೆ ಒಡ್ಡುತ್ತಿದ್ದ ಬೆಳಗಾವಿ ಜಿಲ್ಲೆಯ ಸದಲಗಾ ಗ್ರಾಮದ ಮುರುಗೇಶ ಕುಂಬಾರ ಹಾಗೂ ಹಾಸನ ಜಿಲ್ಲೆಯ ಮೂಗುಳಿ ಗ್ರಾಮದ ರಜನಿಕಾಂತ ಎಂಬುವರನ್ನು ಬಾಗಲಕೋಟೆ ಸಿಇಎನ್‌ ಪೊಲೀಸ್‌ ಅಧಿ​ಕಾರಿ ವಿಜಯ ಮುರುಗುಂಡಿ ನೇತೃತ್ವದ ತಂಡ ಹಾಸನದಲ್ಲಿ ಬಂ​ಧಿಸಿ ಬಾಗಲಕೋಟೆಗೆ ಕರೆತಂದಿದೆ.

ಹಾವೇರಿ ಮಹಿಳೆ ಮೇಲಿನ ಶೂಟೌಟ್‌ ಕೇಸ್‌: ಇಬ್ಬರ ಬಂಧನ

ಈ ಇಬ್ಬರ ವಿರುದ್ಧ ರಾಜ್ಯದ ವಿವಿಧೆಡೆ 60ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಇವರು ಕೆಲವೆಡೆ ಎಸಿಬಿ ಅಧಿ​ಕಾರಿಗಳೆಂದರೆ, ಇನ್ನೂ ಕೆಲವೆಡೆ ಲೋಕಾಯುಕ್ತರ ಹೆಸರಿನಲ್ಲಿ ವಂಚನೆ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಸ್ವತಃ ಎಸ್ಪಿ ಲೋಕೇಶ ಜಗಲಾಸರ ವಿಶೇಷ ಕಾಳಜಿ ವಹಿಸಿದ್ದರು.

ಏಪ್ರಿಲ್‌ 29ರಂದು ಬಾಗಲಕೋಟೆಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ನಕಲಿ ಎಸಿಬಿ ಅಧಿ​ಕಾರಿಗಳ ಬೆದರಿಕೆ ಕರೆಗಳ ಕುರಿತು ದೂರು ದಾಖಲಿಸಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿ, ವಿಶೇಷ ತಂಡ ರಚಿಸಿ ರಾಜ್ಯದ ಎಲ್ಲೆಡೆ ತನಿಖೆ ನಡೆಸಿ, ಇದೀಗ ಇಬ್ಬರು ವಂಚಕರನ್ನು ಬಂಧಿ​ಸಲಾಗಿದೆ ಅಂತ ಬಾಗಲಕೋಟೆ ಜಿಲ್ಲಾ ಪೊಲೀಸ್‌ ವರಿಷ್ಠಾ​ಧಿಕಾರಿ ಲೋಕೇಶ ಜಗಲಾಸರ್‌ ತಿಳಿಸಿದ್ದಾರೆ.