Asianet Suvarna News Asianet Suvarna News

ಬಾಯ್‌ಫ್ರೆಂಡ್‌ ನೋಡಲು ದುಬೈನಿಂದ ಬಂದಿದ್ದ ಗಗನಸಖಿ ಸೂಸೈಡ್‌, ರೂಮ್‌ಅಲ್ಲಿ ಆಗಿದ್ದೇನು?

Archana Dhiman Death: ಬೆಂಗಳೂರಿನ ಕೋರಮಂಗಲದಲ್ಲಿ ಅಪಾರ್ಟ್‌ಮೆಂಟ್‌ ಮೇಲಿಂದ ಬಿದ್ದು ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಶರಣಾದ ಯುವತಿ ಹಿಮಾಚಲ ಪ್ರದೇಶ ಮೂಲದವಳು ಎಂದು ಹೇಳಲಾಗಿದೆ.

Archana Dhiman Death air hostess who came to see boyfriend committed suicide san
Author
First Published Mar 11, 2023, 5:35 PM IST

ಬೆಂಗಳೂರು (ಮಾ.11): ತನ್ನ ಪ್ರಿಯಕರನನ್ನು ನೋಡುವ ಆಸೆಗಾಗಿ ದೂರದ ದುಬೈನಿಂದ ಬೆಂಗಳೂರಿಗೆ ಬಂದಿದ್ದ ಗಗನಸಖಿಯೊಬ್ಬರು ಅಪಾರ್ಟ್‌ಮೆಂಟ್‌ನಿಂದ ಬಿದ್ದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರತಿಷ್ಠಿತ ಅಂತಾರಾಷ್ಟ್ರೀಯ ಏರ್‌ಲೈನ್ಸ್‌ನಲ್ಲಿ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದ ಅರ್ಚನಾ ಧೀಮನ್‌ ಮೃತ ದುರ್ದೈವಿ. ಅರ್ಚನಾ ಧೀಮನ್‌ ಹಿಮಾಚಲ ಮೂಲದವರಾಗಿದ್ದು ಡೇಟಿಂಗ್‌ ಆಪ್‌ನ ಮೂಲಕ ಪರಿಚಯವಾಗಿದ್ದ ಕೇರಳ ಮೂಲದ ಟೆಕ್ಕಿ ಆದೇಶ್‌ ಎನ್ನುವವರನ್ನು ಪ್ರೀತಿ ಮಾಡುತ್ತಿದ್ದರು. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಆದೇಶ್‌ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದ. ವರ್ಷಗಳ ಹಿಂದೆ ಡೇಟಿಂಗ್‌ ಅಪ್ಲಿಕೇಶನ್‌ ಮೂಲಕ ಅರ್ಚನಾ ಹಾಗೂ ಆದೇಶ್‌ ಪರಿಚಯವಾಗಿದ್ದರು. ಮೊದಲಿಗೆ ಸ್ನೇಹಿತರಂತೆ ಮಾತನಾಡುತ್ತಿದ್ದ ಇವರಿಬ್ಬರ ಸಂಬಂಧ ಬಳಿಕ ಪ್ರೀತಿಗೆ ತಿರುಗಿತ್ತು. ಇತ್ತೀಚೆಗೆ ಪ್ರೇಮಿ ಆದೇಶ್‌ರನ್ನು ನೋಡುವ ಸಲುವಾಗಿ ಅರ್ಚನಾ,  ಆತ ನೆಲೆಸಿದ್ದ ಬೆಂಗಳೂರಿನ ಕೋರಮಂಗಲಕ್ಕೆ ಬಂದಿದ್ದಳು. ಕೆಲವು ವರ್ಷಗಳಿಂದ ಇಬ್ಬರು ಪ್ರೀತಿಸುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ನಿನ್ನೆ ಬೆಂಗಳೂರಿಗೆ ಗೆಳೆಯನ್ನ ಭೇಟಿ ಮಾಡಲು ಅರ್ಚನಾ ಧೀಮನ್ ಬಂದಿದ್ದರು. ಆದರೆ, ತಡರಾತ್ರಿ ಇಬ್ಬರ ನಡುವೆ ಏನಾಗಿದೆ ಎಂಬ ಬಗ್ಗೆ ಖಚಿತ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ.

ಭೇಟಿಗೆ ಬಂದವಳೇ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆ ಗೆಳೆಯನ ಮೇಲೂ ಅನುಮಾನ ವ್ಯಕ್ತಪಡಿಸಿದ್ದಾರೆ. ಜಗಳ ನಡೆದು ಬಾಲ್ಕನಿಯಿಂದ ತಳ್ಳಿರುವ ಬಗ್ಗೆಯೂ ಶಂಕೆ ವ್ಯಕ್ತಪಡಿಸಲಾಗಿದೆ. ಸದ್ಯ ಸಿಸಿಟಿವಿ ದೃಶ್ಯಾವಳಿಗಳನ್ನು ಕೋರಮಂಗ ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ. ಕೋರಮಂಗಳದ 8ನೇ ಬ್ಲಾಕ್‌ನಲ್ಲಿರುವ ರೇಣುಕಾ ರೆಸಿಡೆನ್ಸಿಯ ನಾಲ್ಕನೇ ಮಹಡಿಯಿಂದ ಅರ್ಚನಾ ಧೀಮನ್‌ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ. ದುಬೈನಲ್ಲಿ ಕೆಲಸ ಮಾಡುತ್ತಿದ್ದ ಅರ್ಚನ ಗೆಳೆಯನ ಭೇಟಿ ಮಾಡಿ ಕೆಲ ದಿನಗಳನ್ನು ಕಳೆಯುವ ಸಲುವಾಗಿ ನಗರಕ್ಕೆ ಬಂದಿದ್ದರು.

ಕಡಿಮೆ ಕೂಲಿಗೆ ಮನೆಗೆಲಸಕ್ಕೆ ಸೇರಿದ ನೇಪಾಳಿ ಪೋರಿ: ಮಾಲೀಕನ ಮನೆಗೆ ಕನ್ನ ಹಾಕಿ ಪರಾರಿ

ಶುಕ್ರವಾತ ರಾತ್ರಿ 12 ಗಂಟೆಯ ವೇಳೆಗೆ ಅರ್ಚನಾ ಧೀಮನ್‌ ಕೆಳಗೆ ಬಿದ್ದಿದ್ದಾರೆ ಎನ್ನಲಾಗಿದೆ. ತಡರಾತ್ರಿಯವರೆಗೂ ಅರ್ಚನಾ ಹಾಗೂ ಆದೇಶ ತಮ್ಮ ಕೋಣೆಯಲ್ಲಿ ಪಾರ್ಟಿ ನಡೆಸಿದ್ದರು. ಈ ವೇಳೆ ಯಾವುದೋ ವಿಚಾರಕ್ಕೆ ಮಾತಿನ ಚಕಮಕಿ ನಡೆದಿದ್ದು, ಅ ಬಳಿಕ ಅರ್ಚನಾ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ವರದಿಯಿದೆ. ಇನ್ನೊಂದೆಡೆ ಆದೇಶ್‌ ಆಕೆಯನ್ನು ತಳ್ಳಿರಬಹುದು ಎಂದೂ ಹೇಳಲಾಗುತ್ತಿದ್ದು, ಇದರ ತನಿಖೆ ನಡೆಯುತ್ತಿದೆ. ಅರ್ಚನಾ ಧೀಮನ್‌ ಅವರ ಶವವನ್ನು ಸೇಂಟ್‌ ಜಾನ್ಸ್‌ ಅಸ್ಪತ್ರೆಯಲ್ಲಿ ಇರಿಸಲಾಗಿದ್ದು, ಅವರ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ.

ಟೆಕ್ಸ್‌ಟೈಲ್‌ ಮಿಲ್‌ ಕಳ್ಳತನ ಪ್ರಕರಣ: ಬರೋಬ್ಬರಿ 24 ಖದೀಮರು ಅರೆಸ್ಟ್!

ಶುಕ್ರವಾರ ಇವರಿಬ್ಬರೂ ಕೋರಮಂಗಲದ ಫೋರಂ ಮಾಲ್‌ನಲ್ಲಿ ಸಿನಿಮಾ ನೋಡಿ ಬಂದಿದ್ದಾರೆ. ಬಳಿಕ ಇಬ್ಬರೂ ತಡರಾತ್ರಿಯವರೆಗೂ ಪಾರ್ಟಿ ಮಾಡಿದ್ದು, ಆ ಬಳಿಕ ಇಬ್ಬರ ನಡುವೆ ಗಲಾಟೆ ಆಗಿರಬಹುದು ಎನ್ನುವ ಅನುಮಾನ ವ್ಯಕ್ತಪಡಿಸಿದ್ದಾರೆ. ಆದೇಶ್‌ನ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಪೊಲೀಸರು ಈಗಾಗಲೇ ಅವನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಅರ್ಚನಾ ಧೀಮನ್‌ ಅವರ ಪೋಷಕರು ಬಂದ ಬಳಿಕ ಅವರು ನೀಡಿದ ದೂರುನ ಆಧಾರದ  ಮೇಲೆ ಎಫ್‌ಐಆರ್‌ ದಾಖಲಿಸಲು ಕೋರಮಂಗಳ ಪೊಲೀಸರು ನಿರ್ಧರಿಸಿದ್ದಾರೆ.

Follow Us:
Download App:
  • android
  • ios