ಬಾಯ್ಫ್ರೆಂಡ್ಗೆ ಸಾಯುವ ಗಡುವು ನೀಡಿದ್ದ ವಿವಾಹಿತೆ: ರಿಪ್ಲೈ ಬಾರದ್ದಕ್ಕೆ ವಿಡಿಯೋ ಮಾಡಿ ಸಾವಿಗೆ ಶರಣು...
ವಿವಾಹಿತೆಯೊಬ್ಬಳು ಪ್ರಿಯಕರನಿಗೆ ಸಾಯುವ ಗಡುವು ನೀಡಿದ್ದರೂ ಆತ ರಿಪ್ಲೈ ಮಾಡದ್ದಕ್ಕೆ ಮನನೊಂದು ಸಾವಿಗೆ ಶರಣಾಗಿದ್ದಾಳೆ. ಆಗಿದ್ದೇನು?
ಇದೀಗ ಚಿಕ್ಕ ಪುಟ್ಟ ವಿಷಯಗಳಿಗೂ ಯುವಕ-ಯುವತಿಯರು ಆತ್ಮಹತ್ಯೆಯ ಹಾದಿ ತುಳಿಯುತ್ತಿದ್ದಾರೆ. ವಿವಾಹವಾಗಿದ್ದರೂ, ಕೆಲವೊಮ್ಮೆ ಅನೈತಿಕ ಸಂಬಂಧದಲ್ಲಿ ಸಿಲುಕಿ ಕೆಲವರು ಸಾವಿನ ಹಾದಿ ತುಳಿದರೆ, ಇನ್ನು ಕೆಲವರು ಮಾಡಬಾರದ ಎಡವಟ್ಟು ಮಾಡಿಕೊಂಡು ಕೊನೆಗೆ ಬದುಕನ್ನೇ ಕೊನೆಗೊಳಿಸಿಕೊಳ್ಳುತ್ತಿದ್ದಾರೆ. ಗುಜರಾತಿನ ಬನಸ್ಕಾಂತ ಜಿಲ್ಲೆಯಲ್ಲಿ 27 ವರ್ಷದ ವಿವಾಹಿತೆಯೊಬ್ಬಳು ಬಾಯ್ಫ್ರೆಂಡ್ಗೆ ಏಳು ಗಂಟೆಯ ಗಡುವು ನೀಡಿ, ಕೊನೆಗೆ ಪ್ರತಿಕ್ರಿಯೆ ಬಾರದ್ದಕ್ಕೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಮನೆಯಲ್ಲಿನ ಜಗಳದಿಂದ ಬೇಸತ್ತಿರುವುದಾಗಿ ತನ್ನ ಪ್ರಿಯಕರನ ಬಳಿ ಕ್ಷಮೆಯಾಚಿಸುವ ವಿಡಿಯೋ ಮಾಡಿದ್ದಾಳೆ. ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ರಾಧಾ ಠಾಕೂರ್ ಕೆಲ ವರ್ಷಗಳ ಹಿಂದೆ ಪತಿಯಿಂದ ಬೇರ್ಪಟ್ಟು ಪಾಲನ್‌ಪುರದಲ್ಲಿ ಸಹೋದರಿಯೊಂದಿಗೆ ವಾಸವಾಗಿದ್ದರು. ಇದೀಗ ಸಾವಿನ ಹಾದಿ ತುಳಿದಿದ್ದಾರೆ.
ಈ ಕುರಿತು ಮಾತನಾಡಿರುವ ಆಕೆಯ ಸಹೋದರಿ, 'ನನ್ನ ತಂಗಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದಳು, ಭಾನುವಾರ ರಾತ್ರಿ, ಅವಳು ಮನೆಗೆ ಹಿಂದಿರುಗಿದಳು. ಊಟ ಮಾಡಿ ನಂತರ ನಾವು ಮಲಗಲು ಹೋದೆವು. ಮರುದಿನ ಬೆಳಿಗ್ಗೆ ಅವಳು ಹೊರಗೆ ಬಾರದಾಗ ಒಳಗೆ ಹೋಗಿ ನೋಡಿದೆವು. ಅವಳು ಸತ್ತಿರುವುದು ಕಾಣಿಸಿತು. ಶಾಕ್ನಿಂದ ನಾವು ಆಕೆಯ ಫೋನ್ ಪರಿಶೀಲಿಸಿದಾಗ, ನಾವು ಅವಳು ರೆಕಾರ್ಡ್ ಮಾಡಿದ್ದು ಕಾಣಿಸಿತು. ಅದನ್ನು ಪೊಲೀಸರಿಗೆ ನೀಡಿದ್ದೇವೆ' ಎಂದು ರಾಧಾ ಅಕ್ಕ ಅಲ್ಕಾ ಹೇಳಿದ್ದಾರೆ. ಕುಟುಂಬದವರು ಅಪರಿಚಿತ ವ್ಯಕ್ತಿಯ ವಿರುದ್ಧ ದೂರು ದಾಖಲಿಸಿದ್ದು, ಆತನ ಪರಿಚಯವಿಲ್ಲ ತಮಗೆ ಇಲ್ಲ ಎಂದಿದ್ದಾರೆ.
ಆ ವಿಡಿಯೋ ಅನ್ನು ಪೊಲೀಸರು ಪರಿಶೀಲಿಸಿದಾಗ, ಅದರಲ್ಲಿ ಆಕೆ ಪ್ರಿಯಕರನಿಗೆ ಕ್ಷಮೆ ಕೋರಿದ್ದನ್ನು ನೋಡಬಹುದಾಗಿದೆ. "ನನ್ನನ್ನು ಕ್ಷಮಿಸಿ, ನಾನು ನಿಮ್ಮನ್ನು ಕೇಳದೆ ತಪ್ಪು ಹೆಜ್ಜೆ ಇಡುತ್ತಿದ್ದೇನೆ, ದುಃಖಿಸಬೇಡಿ, ಸಂತೋಷವಾಗಿರಿ, ಜೀವನವನ್ನು ಆನಂದಿಸಿ ಮತ್ತು ಮದುವೆಯಾಗಿ. ನಾನು ಆತ್ಮಹತ್ಯೆಯಿಂದ ಸತ್ತಿದ್ದೇನೆ ಎಂದು ಭಾವಿಸಬೇಡಿ. ನಾನು ಕೈಮುಗಿದು ಕ್ಷಮೆಯಾಚಿಸುತ್ತೇನೆ. ನೀವು ಸಂತೋಷವಾಗಿದ್ದರೆ , ನನ್ನ ಆತ್ಮಕ್ಕೆ ಶಾಂತಿ ಸಿಗುತ್ತದೆ, ನಾನು ಕೆಲಸ ಮತ್ತು ಜೀವನದ ಬಗ್ಗೆ ಅಸಮಾಧಾನಗೊಂಡಿದ್ದೇನೆ. ಆದ್ದರಿಂದ ನಾನು ಈ ಹೆಜ್ಜೆ ಇಡುತ್ತಿದ್ದೇನೆ, ”ಎಂದು ಹೇಳಿದ್ದಾಳೆ.
ಇದಕ್ಕೂ ಮುನ್ನ ಆತನಿಗೆ ಕಳಿಸಿರುವ ಮೆಸೇಜ್ನಲ್ಲಿ ಆಕೆ ಯಾವುದೋ ಫೋಟೊ ನೀಡುವಂತೆ ಪ್ರಿಯಕರನಿಗೆ ಹೇಳಿದ್ದನ್ನು ನೋಡಬಹುದಾಗಿದೆ. ಅದು ಈಕೆಯ ಫೋಟೋನೋ ಅಥವಾ ಆತನ ಫೋಟೋನೋ ಎನ್ನುವುದು ಖಚಿತವಾಗಿಲ್ಲ. ಅಥವಾ ಇಬ್ಬರೂ ಒಟ್ಟಿಗೆ ಇರುವ ಫೋಟೋ ಇದ್ದಿರಲೂಬಹುದು ಎನ್ನುವುದು ತನಿಖೆಯಿಂದ ಗೊತ್ತಾಗಬೇಕಿದೆಷ್ಟೇ. ಏಳು ಗಂಟೆಯ ಗಡುವು ನೀಡುತ್ತಿದ್ದೇನೆ. ಅಷ್ಟರಲ್ಲಿ ನನಗೆ ಫೋಟೋ ಬೇಕು ಎಂದಿದ್ದಾಳೆ. ಆದರೆ ಆತನಿಂದ ಪ್ರತಿಕ್ರಿಯೆ ಬಂದಿಲ್ಲ ಎನ್ನಲಾಗಿದೆ. ಈ ತಿಂಗಳ ಆರಂಭದಲ್ಲಿ 34 ವರ್ಷದ ಟೆಕ್ಕಿ ಅತುಲ್ ಸುಭಾಷ್ ಅವರ ಸಾವಿನ ನಂತರ ಮಾನಸಿಕ ಆರೋಗ್ಯ ಸಮಸ್ಯೆಗಳು ಮತ್ತು ಆತ್ಮಹತ್ಯೆಯ ಕುರಿತು ರಾಷ್ಟ್ರವ್ಯಾಪಿ ಸಂಭಾಷಣೆಯ ಹಿನ್ನೆಲೆಯಲ್ಲಿ ಮಹಿಳೆಯ ಆತ್ಮಹತ್ಯೆಯ ಸಾವು ಸಂಭವಿಸಿರುವುದು ಮಾನಸಿಕ ಆರೋಗ್ಯದ ಬಗ್ಗೆ ಇನ್ನಷ್ಟು ಚರ್ಚೆ ಹುಟ್ಟುಹಾಕಿದೆ.
ಬೀಚ್ನಲ್ಲಿರೋ ನಿವೇದಿತಾ ಗೌಡ ವಿಡಿಯೋ ವೈರಲ್! ಪೂನಂ ಪಾಂಡೆಗೆ ಹೋಲಿಕೆ ಮಾಡೋದಾ ನೆಟ್ಟಿಗರು?