Asianet Suvarna News Asianet Suvarna News

ಡ್ರೋನ್ ಪ್ರತಾಪ್ ಮೇಲೆ ಮತ್ತೊಂದು ಕೇಸ್: ಮಾಜಿ ಸಿಎಂ ಹೆಸರೇಳಿಕೊಂಡು ಜಿಪಂ ಟಿಕೆಟ್ ಕೊಡಿಸುವುದಾಗಿ ವಂಚನೆ

ಮಾಜಿ ಸಿಎಂ ಹೆಸರೇಳಿಕೊಂಡು ಜಿಪಂ ಟಿಕೆಟ್ ಕೊಡಿಸುವುದಾಗಿ ವಂಚನೆ ಮಾಡಿದ್ದಾರೆಂದು ಬಿಗ್‌ ಬಾಸ್ ರನ್ನರ್ ಅಪ್ ಡ್ರೋನ್ ಪ್ರತಾಪ್ ಮೇಲೆ ಮತ್ತೊಂದು ಕೇಸ್ ದಾಖಲಿಸಲಾಗಿದೆ.

Another Scam case file on Bigg Boss runner up Drone prathap about Zilla Panchayat Ticket sat
Author
First Published Feb 3, 2024, 4:17 PM IST

ಬೆಂಗಳೂರು (ಫೆ.03): ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಹೆಸರೇಳಿಕೊಂಡು ನಿಮಗೆ ಜಿಲ್ಲಾ ಪಂಚಾಯಿತಿ ಟಿಕೆಟ್ ಕೊಡಿಸುವುದಾಗಿ 2 ಲಕ್ಷ ರೂ. ಹಣವನ್ನು ಪಡೆದು ವಂಚನೆ ಮಾಡಿದ್ದಾನೆ ಎಂದು ಬಿಗ್ ಬಾಸ್ ಡ್ರೋನ್ ಪ್ರತಾಪ್ ಅವರ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ.

ಬಿಗ್ ಬಾಸ್ ರನ್ನರ್ ಅಪ್ ಡ್ರೋನ್ ಪ್ರತಾಪ್ ಅವರು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಹೆಸರನ್ನು ಹೇಳಿಕೊಂಡು ತಳಗವಾದಿ ಜಿಲ್ಲಾ ಪಂಚಾಯಿತಿ ಟಿಕೆಟ್‌ ಕೊಡಿಸುವುದಾಗಿ ನನಗೆ ವಂಚನೆ ಮಾಡಿದ್ದಾರೆ. ನನಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ರವರು ಪರಿಚಯವಿದ್ದು ಅವರ ಫಾರಂ ಹೌಸ್ ನಲ್ಲಿ ಆಗ್ಗಿಂದ್ದಾಗೆ ಭೇಟಿ ಮಾಡುವುದಾಗಿ ತಿಳಿಸಿದ್ದಾನೆ. ಜೊತೆಗೆ, ನನ್ನಿಂದ ಕಲರ್ಸ್ ಕನ್ನಡ ಬಿಗ್ ಬಾಸ್ ರಿಯಾಲಿಟಿ ಷೋ ಮನೆಗೆ ಆಯ್ಕೆ ಆಗಲು ಪ್ರಚಾರ ಬೇಕೆಂದು ನನ್ನ ಸಹಾಯ ಕೇಳಿರುತ್ತಾನೆ.

Bigg Boss Drone Prathap: ಮತ್ತೆ ಸಂಕಷ್ಟದಲ್ಲಿ 'ಡ್ರೋನ್': ಪ್ರತಾಪ್ ವಿರುದ್ಧ ದಾಖಲಾಯ್ತು ಹೊಸ ದೂರು!

ಆದ್ದರಿಂದ ನಾನು ಡ್ರೋನ್‌ ಪ್ರತಾಪ್‌ಗೆ ಬಿಗ್ ಬಾಸ್ ಮನೆಗೆ ಹೋಗಲು ನನ್ನ ಮನೆಯಲ್ಲಿ ಇರಿಸಿಕೊಂಡು ಸ್ಥಳೀಯವಾಗಿ ಅವನಿಗೆ ಡ್ರೋನ್ ಹಾರಿಸಲು ಸ್ಥಳೀಯರ ಸಹಕಾರ ಹಾಗೂ ಸಹಾಯ ಮಾಡಿರುತ್ತೇನೆ. ನಾನು ಸ್ವ-ಇಚ್ಛೆಯಿಂದ ಬಿಗ್‌ಬಾಸ್ ಮನೆಯಲ್ಲಿ ಅವನು ಗೆದ್ದು ಬರಲೆಂದು ಆಶಿಸಿ ಅವನ ಪರವಾಗಿ ಪ್ರಚಾರ ಮಾಡಿದ್ದೇನೆ. ಡ್ರೋನ್ ಪ್ರತಾಪನಿಗೆ ಮತ ಹಾಕಲು ವಿವಿಧ ಮಾಧ್ಯಮ ಮೂಲಕ ಹಾಗೂ ಸ್ನೇಹ ಬಳಗದಲ್ಲೂ ಬೇಡಿ ಕೊಂಡಿರುತ್ತೇನೆ. ಇದರಿಂದ ಬಿಗ್‌ಬಾಸ್ ಮನೆಯಿಂದ ರನ್ನರ್ ಅಪ್ ಸ್ಥಾನವನ್ನು ಪಡೆದು ಡ್ರೋನ್ ಪ್ರತಾಪ್ 10 ಲಕ್ಷ ರೂ. ಹಣವನ್ನು ಗೆದ್ದುಕೊಂಡು ಬಂದಿದ್ದಾನೆ.

ಇಷ್ಟೆಲ್ಲಾ ನನ್ನನ್ನು ಉಪಯೋಗಿಸಿಕೊಂಡು ಬಿಗ್ ಬಾಸ್ ಮನೆಯಿಂದ ರನ್ನರ್ ಅಪ್ ಸ್ಥಾನ ಪಡೆದು ಬಂದಿರುವ ಡ್ರೋನ್ ಪ್ರತಾಪ್‌ಗೆ ಹಲವು ಬಾರಿ ಕರೆ ಮಾಡಿದರೂ, ಮೆಸೆಜ್ ಕಳುಹಿಸಿದರು ಸಹ ಉತ್ತರಿಸುತ್ತಿಲ್ಲ. ಇದರಿಂದ ಮನನೊಂದು ನನಗಾಗಿರುವ ಮೋಸ ಮತ್ತು ವಂಚನೆ ಮಾಡಿರುವ ಬಗ್ಗೆ ಸೂಕ್ತ ನ್ಯಾಯ ಒದಗಿಸಬೇಕಾಗಿ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಚಂದನ್‌ಕುಮಾರ್ ಗೌಡ ಡಿ.ಸಿ. ಎನ್ನುವವರು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

ಬಿಗ್​ಬಾಸ್​ ಖ್ಯಾತಿ ಬೆನ್ನಲ್ಲೇ ಗಿಚ್ಚಿ-ಗಿಲಿಗಿಲಿಗೆ ಡ್ರೋನ್​ ಭರ್ಜರಿ ಎಂಟ್ರಿ: ಡ್ಯಾನ್ಸ್​ನಿಂದ ಮೋಡಿ ಮಾಡಿದ ಪ್ರತಾಪ್​

ಡ್ರೋನ್ ಪ್ರತಾಪ್‌ ಮಾತನಾಡಿದ್ದು ಎನ್ನಲಾದ ಆಡಿಯೋ ಬಿಡುಗಡೆ: ಇನ್ನು ಡ್ರೋನ್ ಪ್ರತಾಪ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋವನ್ನು ಕೂಡ ರಿಲೀಸ್ ಮಾಡಲಾಗಿದೆ. ನನ್ನನ್ನು ಕಾಂಗ್ರೆಸ್‌ಗೆ ಬನ್ನಿ ಯೂತ್ ಕಾಂಗ್ರೆಸ್ ಪ್ರೆಸಿಡೆಂಟ್ ಮಾಡ್ತೀನಿ ಅಂದಿದ್ದರು. ಆಗ ನಾನು ಕುಮಾರಸ್ವಾಮಿಯವರ ಜೊತೆ ಓಡಾಡುತ್ತಿದ್ದೆನು. ಈಗಲೂ ಕುಮಾರಸ್ವಾಮಿಯವರನ್ನು ಭೇಟಿ ಮಾಡಲು ಹೋಗುತ್ತೇನೆ. ಆದರೆ, ಕುಮಾರಸ್ವಾಮಿಯವರ ಜೊತೆಗಿನ ಫೋಟೋ ಹಾಕಲ್ಲ. ನನ್ನ ಜೊತೆ ಕುಮಾರಸ್ವಾಮಿಯವರ ತೋಟದ ಮನೆಗೆ ಬಾ ಪರಿಚಯ ಮಾಡಿಸುತ್ತೇನೆ. ಅವರು ಕೆಟ್ಟ ಪದದಿಂದ ಬೈಯಬಹುದು, ಆದರೆ ತುಂಬಾ ಒಳ್ಳೆಯ ಮನುಷ್ಯ. ಡಿಸಿಎಂ ಡಿ.ಕೆ. ಶಿವಕುಮಾರ್ ತರ ಪೇಪರ್ ಎಸೆಯೋದು ಮಾಡಲ್ಲ. ಕುಮಾರಸ್ವಾಮಿ ಯಾರೇ ಹೋದ್ರು ದುಡ್ಡು ಕೊಡ್ತಾರೆ ಎಂದು ಹೇಳಿ ವಂಚನೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.

Follow Us:
Download App:
  • android
  • ios