Asianet Suvarna News Asianet Suvarna News

ಮಂಗಳೂರು ಏರ್‌ಪೋರ್ಟ್‌ಗೆ ಬಾಂಬ್‌ ಇರಿಸಿದ್ದ ಆದಿತ್ಯ ರಾವ್‌ ವಿರುದ್ಧ ಎಫ್‌ಐಆರ್‌!

ಮಂಗಳೂರು ಏರ್‌ಪೋರ್ಟ್‌ನಲ್ಲಿ ಬಾಂಬ್‌ ಇರಿಸಿದ್ದ ಪ್ರಕರಣದ ದೋಷಿ ಆದಿತ್ಯ ರಾವ್‌ ವಿರುದ್ಧ ಇನ್ನೊಂದು ಎಫ್‌ಐಆರ್‌ ದಾಖಲಾಗಿದೆ. ಹೊಸ ಎಫ್‌ಐಆರ್‌ ಶಿವಮೊಗ್ಗದಲ್ಲಿ ದಾಖಲಾಗಿದೆ.
 

Another FIR on engineer Aditya Rao who Planted bomb at Mangaluru airport san
Author
First Published Jun 2, 2023, 3:42 PM IST

ಶಿವಮೊಗ್ಗ (ಜೂ.2): ಮಂಗಳೂರು ವಿಮಾನ ಬಳಿ ಹುಸಿ ಬಾಂಬ್ ಬೆದರಿಕೆ ಪ್ರಕರಣದ ದೋಷಿಯಾಗಿದ್ದ ಆದಿತ್ಯರಾವ್ ವಿರುದ್ಧ ಶಿವಮೊಗ್ಗದಲ್ಲಿ ಎಫ್ಐಆರ್ ದಾಖಲಾಗಿದೆ. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಗಮನ ಗೇಟ್ ಬಳಿ ಸ್ಪೋಟಕ ಇಟ್ಟಿದ್ದ ಪ್ರಕರಣದಲ್ಲಿ ಕಳೆದ ವರ್ಷ ಸ್ಥಳೀಯ ಕೋರ್ಟ್‌ ಈತನನ್ನು ದೋಷಿ ಎಂದು ತೀರ್ಪು ನೀಡಿತ್ತು. ಪ್ರಕರಣದಲ್ಲಿ 20 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂಪಾಯಿ ದಂಡ ಶಿಕ್ಷೆಯನ್ನು ಪಡೆದುಕೊಂಡಿದ್ದಾರೆ. ಈಗ ಆತನ ವಿರುದ್ಧ ಮತ್ತೊಂದು ಪ್ರಕರಣವನ್ನು ಶಿವಮೊಗ್ಗದ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ದಾಖಲು ಮಾಡಲಾಗಿದೆ. ಮಂಗಳೂರಿನಲ್ಲಿ ಶಿಕ್ಷೆ ಪ್ರಕಟವಾದ ಬೆನ್ನಲ್ಲೇ ಆದಿತ್ಯ ರಾವ್‌ನನ್ನು ಶಿವಮೊಗ್ಗದ ಸೋಗಾನೆ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗಿತ್ತು. ಇದೀಗ ಆತನ ವಿರುದ್ಧ ಸಾರ್ವಜನಿಕ ಆಸ್ತಿ ನಾಶ ಮತ್ತು ಜೈಲು ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ ದಾಖಲಾಗಿದೆ.

ಗುರುವಾರ ಕಾರಾಗೃಹದಲ್ಲಿ ವಿ.ಸಿ.ಕೊಠಡಿ ಬಳಿ ಬಂದ ಆದಿತ್ಯ ರಾವ್ ಆತನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ದಿನಾಂಕ ಇದೆಯೇ ಎಂದು ವಿಚಾರಣೆ ಮಾಡುವ ಪ್ರಯತ್ನ ಮಾಡಿದ್ದಾನೆ. ಈ ವೇಳೆ ಕೊಠಡಿಯಲ್ಲಿದ್ದ ಸಿಬ್ಬಂದಿಗಳು ದಾಖಲಾತಿ ಪರಿಶೀಲಿಸಿ ಯಾವುದೇ ವಿಚಾರಣಾ ದಿನಾಂಕವಿಲ್ಲ ಎಂದಿದ್ದಾರೆ. ಸ್ವಲ್ಪ ದೂರ ಮುಂದೆ ಹೋಗಿ ಏಕಾಏಕಿ ತಿರುಗಿದ ಆದಿತ್ಯ ರಾವ್ ವಿ.ಸಿ.ಕೊಠಡಿ ಒಳಗೆ ನುಗ್ಗಿದ್ದಾನೆ.  ಚೂಪಾದ ಕಲ್ಲಿನಿಂದ ಹೊಡೆದು ಅಲ್ಲಿರುವ ಟಿವಿಯನ್ನ ಒಡೆದು ಹಾಕಿದ್ದಾನೆ. ತಕ್ಷಣವೇ ಅಲ್ಲಿದ್ದ ಸಿಬ್ಬಂದಿ ದೀಪಾ ನಿಂಬೋಜಿ ಮತ್ತು ಗೃಹರಕ್ಷಕ ದಳದ ಸಿಬ್ಬಂದಿ ಚಂದ್ರಪ್ಪ ಆದಿತ್ಯ ರಾವ್‌ನನ್ನು ಸೆರೆಹಿಡಿದಿದ್ದಾರೆ.

ಬಾಂಬರ್ ಆದಿತ್ಯ ರಾವ್‌ಗೆ ನಡೆಯಲಿದೆ ಮಂಪರು ಪರೀಕ್ಷೆ

ಸಿಬ್ಬಂದಿ ಆತನನ್ನು ಹಿಡಿದರೂ ಅವರನ್ನು ನೂಕಿ ಅಲ್ಲೇ ಇದ್ದ ಮತ್ತೊಂದು ಟಿವಿಯನ್ನ‌ ನಾಶಪಡಿಸಿದ್ದಾರೆ. ಎರಡು ಟಿವಿಯನ್ನ ನಾಶಪಡಿಸಿದ ಮತ್ತು ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಹಿನ್ನೆಲೆ  ಜೈಲಿನ ಸೂಪರಿಂಟೆಂಡೆಂಟ್ ಡಾ.ಅನಿತಾ ರಿಂದ ತುಂಗಾ ನಗರ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ.

ಮಂಗ್ಳೂರು ಏರ್‌ಪೋರ್ಟಲ್ಲಿ ಇಟ್ಟದ್ದು ನಿಜವಾದ ಬಾಂಬ್‌!

Follow Us:
Download App:
  • android
  • ios