Asianet Suvarna News Asianet Suvarna News

ಬಾಂಬರ್ ಆದಿತ್ಯ ರಾವ್‌ಗೆ ನಡೆಯಲಿದೆ ಮಂಪರು ಪರೀಕ್ಷೆ

ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟು ಅವಾಂತರ ಸೃಷ್ಟಿಸಿದ್ದ ಬಾಂಬರ್ ಆದಿತ್ಯ ರಾವ್ ಮಂಪರು ಪರೀಕ್ಷೆ ನಡೆಸಲಾಗುತ್ತಿದೆ.

Brain Mapping Test For Bomber Aditya Rao
Author
Bengaluru, First Published Sep 4, 2020, 8:11 AM IST
  • Facebook
  • Twitter
  • Whatsapp

ಮಂಗಳೂರು (ಸೆ.04) : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜ.20ರಂದು ಬಾಂಬ್‌ ಇರಿಸಿದ್ದ ಆರೋಪಿ ಆದಿತ್ಯ ರಾವ್‌(36)ನ ಮಂಪರು ಪರೀಕ್ಷೆ ಬೆಂಗಳೂರು ಮಡಿವಾಳದ ಫೋರೆನ್ಸಿಕ್‌ ಸೈನ್ಸ್ ಲ್ಯಾಬ್‌ನಲ್ಲಿ ಗುರುವಾರ ನಡೆದಿದ್ದು ಶುಕ್ರವಾರವೂ ಮುಂದುವರಿಯಲಿದೆ.

 ಪ್ರಕರಣದ ತನಿಖಾಧಿಕಾರಿ ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ಬೆಳ್ಳಿಯಪ್ಪ ಅವರ ನೇತೃತ್ವದ ಪೊಲೀಸ್‌ ತಂಡ ಮಂಗಳೂರು ಸಬ್‌ಜೈಲ್‌ನಲ್ಲಿದ್ದ ಆದಿತ್ಯ ರಾವ್‌ನನ್ನು ಬೆಂಗಳೂರಿಗೆ ಬುಧವಾರ ಕರೆದೊಯ್ದಿದ್ದರು. ಗುರುವಾರ ಬೆಳಗ್ಗಿನಿಂದ ಸಂಜೆವರೆಗೆ ಆತನಿಗೆ ಮಂಪರು ಪರೀಕ್ಷೆ ನಡೆಸಲಾಗಿದೆ. ಈ ಪ್ರಕರಣದ ತನಿಖೆಯ ಭಾಗವಾಗಿ ಆದಿತ್ಯ ರಾವ್‌ನ ಮಂಪರು ಪರೀಕ್ಷೆಗೆ ಪೊಲೀಸರು ಈ ಹಿಂದೆ ನ್ಯಾಯಾಲಯವನ್ನು ಕೋರಿದ್ದು, ಅನುಮತಿ ನೀಡಿದ ಮೇರೆಗೆ ಮಂಪರು ಪರೀಕ್ಷೆ ನಡೆಸಲಾಗಿದೆ. ಮೂರು ತಿಂಗಳ ಹಿಂದೆಯೇ ನಡೆಯಬೇಕಾಗಿದ್ದ ಮಂಪರು ಪರೀಕ್ಷೆ ಕೊರೋನಾ ಹಿನ್ನೆಲೆಯಲ್ಲಿ ವಿಳಂಬವಾಗಿತ್ತು.

ಮಂಗ್ಳೂರು ಏರ್‌ಪೋರ್ಟಲ್ಲಿ ಇಟ್ಟದ್ದು ನಿಜವಾದ ಬಾಂಬ್‌! .

ಪ್ರಸ್ತುತ ಮಂಗಳೂರು ಸಬ್‌ಜೈಲಿನಲ್ಲಿರುವ ಆರೋಪಿ ಆದಿತ್ಯ ರಾವ್‌ ವಿರುದ್ಧ ಜೂ.11ರಂದು ಮಂಗಳೂರು ನಗರ ಪೊಲೀಸರು ನ್ಯಾಯಾಲಯಕ್ಕೆ 700 ಪುಟಗಳ ಆರೋಪಪಟ್ಟಿಸಲ್ಲಿಸಿದ್ದರು. ಎಫ್‌ಎಸ್‌ಎಲ್‌ ವರದಿಯ ಪ್ರಕಾರ ವಿಮಾನ ನಿಲ್ದಾಣದಲ್ಲಿ ಇರಿಸಿದ್ದು ನೈಜ ಬಾಂಬ್‌ ಆಗಿತ್ತು ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿತ್ತು.

Follow Us:
Download App:
  • android
  • ios