Cheating Case: ಬಹುಕೋಟಿ ವಂಚನೆ ಪ್ರಕರಣದ ಆರೋಪಿ ಯುವರಾಜ್ ಸ್ವಾಮಿಯಿಂದ ಮತ್ತೊಂದು ಬೃಹತ್ ವಂಚನೆ!

ಉನ್ನತ ಹುದ್ದೆ ಕೊಡಿಸುವ ಆಮಿಷವೊಡ್ಡಿ ನೂರಾರು ಕೋಟಿ ರೂಪಾಯಿ ವಂಚನೆ ಎಸಗಿದ ಕೇಸ್ ನಲ್ಲಿ ಈ ಹಿಂದೆ ಜೈಲಿಗೆ ಹೋಗಿದ್ದ ಯುವರಾಜ್ ವಿರುದ್ಧ ಮತ್ತೆ ವಂಚನೆ ಆರೋಪ ಕೇಸ್ ದಾಖಲಾಗಿದೆ.

Another cheating case has been registered against Yuvraj Swamy   gow

ಬೆಂಗಳೂರು (ಮೇ.2): ಒಂದು ಟೈಮ್ ನಲ್ಲಿ ಸಖತ್ ಸುದ್ದಿಯಾಗಿದ್ದ ಯುವರಾಜ್ ಸ್ವಾಮಿ ವಿರುದ್ಧ ಮತ್ತೆ ಕೇಸು ದಾಖಲಾಗಿದೆ. ಉನ್ನತ ಹುದ್ದೆ ಕೊಡಿಸುವ ಆಮಿಷವೊಡ್ಡಿ ನೂರಾರು ಕೋಟಿ ರೂಪಾಯಿ ವಂಚನೆ ಎಸಗಿದ ಕೇಸ್ ನಲ್ಲಿ ಈ ಹಿಂದೆ ಜೈಲಿಗೆ ಹೋಗಿದ್ದ ಯುವರಾಜ್ ಸ್ವಾಮಿ ವಿರುದ್ದ ಮತ್ತೊಂದು ವಂಚನೆ ಪ್ರಕರಣ ದಾಖಲಾಗಿದೆ.  ಗೋವಿಂದಯ್ಯ ಎಂಬುವವರು ಯುವರಾಜ್ ಸ್ವಾಮಿ ವಿರುದ್ಧ ಸದಾಶಿವನಗರ ಠಾಣೆಯಲ್ಲಿ 30ಲಕ್ಷ ಚೀಟೀಂಗ್ ಕೇಸ್ ದಾಖಲಿಸಿದ್ದಾರೆ.

ಗೋವಿಂದಯ್ಯ ಅಳಿಯನಿಗೆ ಕೆಲಸ ಕೊಡಿಸ್ತೀನಿ ಎಂದು ನಂಬಿಸಿ ಯುವರಾಜ್ ಸ್ವಾಮಿ  30ಲಕ್ಷ ತೆಗೆದುಕೊಂಡಿದ್ದ. ಆದ್ರೆ ಇತ್ತ ಕೆಲಸವೂ ಕೊಡಿಸದೆ ಅತ್ತ ಹಣವೂ ಕೊಡದೆ ವಂಚಿಸಿದ್ದ. ಈ ಸಂಬಂಧ ಜ್ಞಾನಭಾರತಿ ಠಾಣೆಯಲ್ಲಿ ಯುವರಾಜ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಅಲ್ಲದೇ ಈ ಪ್ರಕರಣ ನ್ಯಾಯಾಯದಲ್ಲಿ ವಿಚಾರಣೆ ಹಂತದಲ್ಲಿದೆ.

Bengaluru: ಮಧ್ಯರಾತ್ರಿ ಮಹಿಳೆ-ಮಕ್ಕಳಿದ್ದ ಮನೆ ನುಗ್ಗಿದ ಆರೋಪ, ಇನ್ಸ್ಪೆಕ್ಟರ್ ವಿರುದ್ದ ಪೊಲೀಸ್

ಈ ಕೇಸನ್ನು ವಾಪಸ್ ತೆಗೆದುಕೊಳ್ಳುವಂತೆ ಗೋವಿಂದಯ್ಯ ಅವರನ್ನು ಯುವರಾಜ್ ಸ್ವಾಮಿ ಭೇಟಿಯಾಗಿದ್ದ. ಬಳಿಕ ರಾಜಿ ಮಾಡಿಕೊಳ್ಳೋಣ, ನಿಮ್ಮ 30ಲಕ್ಷ ಹಣ ಹಿಂತಿರುಗಿಸುತ್ತೇನೆ.  ಕೇಸ್ ವಾಪಸ್ ಪಡೆಯುವಂತೆ ಹೇಳಿದ್ದ. ಕೋರ್ಟ್ ಬಳಿ 5 ಲಕ್ಷ ಮತ್ತು ಹತ್ತು ಲಕ್ಷದ ಎರಡುಚೆಕ್ ಕೊಟ್ಟು ಕೇಸ್ ವಾಪಸ್ ತೆಗೆದುಕೊಳ್ಳುವಂತೆ ಹೇಳಿದ್ದ. ಆದ್ರೆ ಕೆಲ ದಿನಗಳ ನಂತರ ಎರಡೂ ಚೆಕ್ ಬೌನ್ಸ್ ಆಗಿದೆ. ಈ ಮೂಲಕ ಮತ್ತೆ ಹಣ ಕೊಡದೆ ಯುವರಾಜ್ ಸ್ವಾಮಿ ಆಟ ಆಡಿಸ್ತಿದ್ದಾನೆ ಎಂದು ಗೋವಿಂದಯ್ಯ ಸದಾಶಿವನಗರ ಠಾಣೆಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿರುವ  ಸದಾಶಿವನಗರ ಪೊಲೀಸರು ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.

BENGALURU: ಪಾಳು ಬಿದ್ದ ಮನೆಯಲ್ಲಿತ್ತು 1.23 ಕೋಟಿಯ ಗಾಂಜಾ, ಆರೋಪಿ ಸಿಕ್ಕಿಬಿದ್ದಿದ್ದೇ ರೋಚಕ!

2021ರಲ್ಲಿ ನೂರಾರು ಕೋಟಿ ರೂಪಾಯಿ ವಂಚನೆ ಪ್ರಕರಣ:
ಈ ಹಿಂದೆ 2021ರಲ್ಲಿ ನೂರಾರು ಕೋಟಿ ರೂಪಾಯಿ ವಂಚನೆ ಪ್ರಕರಣ ಬೆಳಕಿಗೆ ಬಂದಿತ್ತು. ಇದು ದೇಶಮಟ್ಟದಲ್ಲಿ ಸುದ್ದಿಯಾಗಿತ್ತು. ಸಿಸಿಬಿ ಪೊಲೀಸರು ಯುವರಾಜ್ ಮನೆಯ ಮೇಲೆ ದಾಳಿ ನಡೆಸಿ ಬರೋಬ್ಬರಿ 89ಕ್ಕೂ ಹೆಚ್ಚು ದಾಖಲೆಗಳನ್ನು ವಶಕ್ಕೆ ಪಡೆದಿದ್ದರು. ಯುವರಾಜ್​ ಗೆ ಸಂಬಂಧಿಸಿದ ವೈಯಕ್ತಿಕ ದಾಖಲೆಗಳು ಹಾಗೂ ಬ್ಯಾಂಕ್, ಆಸ್ತಿ ದಾಖಲೆಗಳು ಸಿಕ್ಕಿದ್ದವು. ಅಲ್ಲದೆ ಇದೇ ಸಂದರ್ಭದಲ್ಲಿ ಅನೇಕ ಗಣ್ಯ ವ್ಯಕ್ತಿಗಳು, ರಾಜಕಾರೆಣಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಹ ಸಿಸಿಬಿ ವಶಕ್ಕೆ ಪಡೆದಿತ್ತು.   ಈ  ನೂರಾರು ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವರಾಜ್ ಸ್ವಾಮಿಯನ್ನು ಪರಪ್ಪನ ಅಗ್ರಹಾರಕ್ಕೆ ಕಳುಹಿಸಲಾಗಿತ್ತು. ಆರೋಗ್ಯದ ನೆಪವೊಡ್ಡಿ ಜೈಲಿನಿಂದ ಸ್ವಾಮಿ  ಹೊರಗಡೆ ಬಂದಿದ್ದ. ಬಳಿಕ 3 ತಿಂಗಳು ಚಿಕಿತ್ಸೆ ಪಡೆದು ಮತ್ತು ಜೈಲಿಗೆ ಹೋಗಿ ಶಿಕ್ಷೆ ಅನುಭವಿಸಿ ಹೊರಗಡೆ ಬಂದಿದ್ದ. ಈಗ ಮತ್ತೆ ತನ್ನ ಹಳೇ ಚಾಳಿ ಮುಂದುವರೆಸಿದ್ದಾನೆ.

Latest Videos
Follow Us:
Download App:
  • android
  • ios