ಬಾಗಲಕೋಟೆ ಜಿಲ್ಲೆಯ ಗುಲಗಾಲಜಂಬಗಿ ಗ್ರಾಮದ ಅಂಗನವಾಡಿಯಲ್ಲಿ ಬಾಲಕಿಯೊಬ್ಬಳ ಮೇಲೆ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ. ಅನ್ನದ ಚಮಚದಿಂದ ಬಾಲಕಿಯ ಕೆನ್ನೆಗೆ ಬರೆ ಎಳೆದಿದ್ದು, ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.

ಬಾಗಲಕೋಟೆ (ಫೆ.5): ಕ್ಷುಲ್ಲಕ ಕಾರಣಕ್ಕೆ ಅಂಗನವಾಡಿ ಮಕ್ಕಳ ಮೇಲೆ ಸಿಬ್ಬಂದಿಯಿಂದ ಹಲ್ಲೆ ಪ್ರಕರಣಗಳು ದಿನೇದಿನೆ ಹೆಚ್ಚುತ್ತಿವೆ. ಒಂದೆಡೆ ಕಳಪೆ ಆಹಾರದಿಂದ ಮಕ್ಕಳ ಆರೋಗ್ಯದಲ್ಲಿ ಏರುಪೇರಾಗಿ ಮಕ್ಕಳು ಆಸ್ಪತ್ರೆಗೆ ದಾಖಲಾಗುತ್ತಿದ್ದರೆ, ಇನ್ನೊಂದೆಡೆ ಅಡುಗೆ ಸಿಬ್ಬಂದಿಯಿಂದ ಹಲ್ಲೆ ಪ್ರಕರಣಗಳು ಹೆಚ್ಚುತ್ತಿರುವುದು ಪೋಷಕರು ಆತಂಕಪಡುವಂತಾಗಿದೆ. ಇದೀಗ ಅಂಥದ್ದೇ ಪ್ರಕರಣ ಬಾಗಲಕೋಟೆಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಾಗಲಕೋಟೆ ಜಿಲ್ಲೆಯ ಗುಲಗಾಲಜಂಬಗಿ ಗ್ರಾಮದಲ್ಲಿನ ವಾರ್ಡ್ ಸಂಖ್ಯೆ 2ರ ಆರೋಗ್ಯ ಕೇಂದ್ರದ ಅಂಗನವಾಡಿ ಸಹಾಯಕಿ ಪುಟ್ಟ ಬಾಲಕಿಯ ಕೆನ್ನೆಮೇಲೆ ಅನ್ನದ ಚಮಚದಿಂದ ಅಮಾನುಷವಾಗಿ ಬರೆ ಎಳೆದ ಘಟನೆ ನಡೆದಿದೆ.

ಪ್ರೀತಿ, ಗಾಯಗೊಂಡಿರುವ ಬಾಲಕಿ. ಲೋಕಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಶೋಭಾ ಹೊಳೆಪ್ಪನವರ, ಸಹಾಯಕಿ ಶಾರವ್ವ ಪಂಚಗಾವಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.

ಇದನ್ನೂ ಓದಿ:ಮಂಡ್ಯದಲ್ಲಿ 8 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ

ತಾತ್ಕಾಲಿಕ ಅಮಾನತು:

ಬಾಲಕಿ ಎಂದಿನಂತೆ ಅಂಗನಾಡಿಗೆ ಬಂದಿದ್ದಾಳೆ. ಆದರೆ ಇಂದು ಕ್ಷುಲ್ಲಕ ಕಾರಣಕ್ಕೆ ಬಾಲಕಿಯೊಂದಿಗೆ ಅಮಾನವೀಯವಾಗಿ ವರ್ತಿಸಿ. ಅನ್ನದ ಚಮಚದಿಂದ ಬರೆ ಎಳೆದು ವಿಕೃತಿ ಮೆರೆದಿರುವ ಸಹಾಯಕಿ. ಘಟನೆ ಮಾಹಿತಿ ತಿಳಿದು ಸಿಡಿಪಿಒ ಕಾಶಿಬಾಯಿ ಕೋರೆಗೋಳ ಅವರು ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಶೋಭಾ ಹೊಳೆಪ್ಪನವರ, ಸಹಾಯಕಿ ಶಾರವ್ವ ಪಂಚಗಾವಿ ಇಬ್ಬರನ್ನೂ ತಾತ್ಕಾಲಿಕವಾಗಿ ಅಮಾನತುಗೊಳಿಸಿ, ಬೇರೆಯವರು ಕೆಲಸಕ್ಕೆ ಹಾಜರಾಗುವಂತೆ ಆದೇಶ ಹೊರಡಿಸಿದ್ದಾರೆ.

ಗ್ರಾಮಸ್ಥರಿಂದ ದೂರು ಬಂದ ಹಿನ್ನೆಲೆ ತಕ್ಷಣವೇ ಸ್ಥಳಕ್ಕೆ ಅಧಿಕಾರಿಗಳು ಪರಿಶೀಲನೆ ನಡೆಸಿ, ಬಾಲಕಿಗೆ ಬರೆ ಹಾಕಿರುವುದನ್ನು ಖಚಿತಪಡಿಸಿದರು. ಬಳಿಕ ಗಾಯಾಳು ಬಾಲಕಿಯನ್ನ ಲೋಕಾಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.