ತಿರುಪತಿ(ಜು.  28)   ಮದುವೆಯಾಗುತ್ತೇನೆ ಎಂದು ನಂಬಿಸಿ ಪುರುಷರಿಗೆ ಲಕ್ಷಾಂತರ ರೂ. ವಂಚನೆ ಮಾಡುತ್ತಿದ್ದ ಮಹಿಳೆ ಕೊನೆಗೂ ಬಲೆಗೆ ಬಿದ್ದಿದ್ದಾಳೆ.

ಆಂಧ್ರ ಪ್ರದೇಶ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ.   ತನ್ನ ಅಂಕಲ್ ಅನ್ನೇ ಮೊದಲು ಮದುವೆಯಾಗಿದ್ದ ಸ್ವಪ್ನ ಆತ ದೈಹಿಕವಾಗಿ ಶಕ್ತಿಯುತವಾಗಿಲ್ಲ ಎಂದು ತೊರೆದು ಬೇರೆ ಪುರುಷರಿಗೆ ಬಲೆ ಬೀಸಿದ್ದಳು.

ನಂತರ ಪ್ರಥ್ವಿರಾಜ್ ಎಂಬಾತನ ಮದುವೆಯಾದ ಸ್ವಪ್ನ ಆತನಿಗೆ ಶಾಕ್ ನೀಡುತ್ತಾಳೆ.  ಸುಖ ದಾಂಪತ್ಯದ ಕನಸು ಕಾಣುತ್ತಿದ್ದವನ ಮೇಲೆ ಪೊಲೀಸ್ ಕಂಪ್ಲೇಂಟ್ ನೀಡುತ್ತಾಳೆ. 25  ಲಕ್ಷ ರೂ. ಗೆ ಈ ಪ್ರಕರಣ ಸೆಟಲ್ ಮೆಂಟ್ ಆಗುತ್ತದೆ.

ಗರ್ಲ್ ಫ್ರೆಂಡ್ ಮಾತು ನಂಬಿ ವಿಡಯೋ ಕಾಲ್ ನಲ್ಲಿ ಬೆತ್ತಲಾಗಿ ಎಲ್ಲ ಕಳ್ಕೊಂಡ

ಇದಾದ ಮೇ ಲೆ ಅತ್ಮಾಕುರ್ ನ ಸುಧಾಕರ್ ಎಂಬಾತನ್ನು ಬಲೆಗೆ ಹಾಕಿಕೊಳ್ಳುತ್ತಾಳೆ.  ಜರ್ಮನಿಯಲ್ಲಿ ಕೆಲಸ ಮಾಡುತ್ತಿದ್ದ ಸುಧಾಕರ್ ನನ್ನು ಮ್ಯಾಟ್ರಿಮೋನಿ ಸೈಟ್ ಮೂಲಕ ಪರಿಚಯ ಮಾಡಿಕೊಳ್ಳುತ್ತಾಳೆ. ಸುಧಾಕರ್ ಗೆ ಕಿರುಕುಳ ನೀಡಲು ಶುರುವಿಟ್ಟುಕೊಂಡು ಮುಕ್ತಿ ಬೇಕೆಂದರೆ  5 ಲಕ್ಷ ರೂ. ನೀಡಬೇಕು ಎಂದು ಕೇಳುತ್ತಾಳೆ.

ಇಲ್ಲಿಂದ ಡೆನ್ಮಾರ್ಕ್ ನಲ್ಲಿ ಕೆಲಸ ಮಾಡುತ್ತಿದ್ದ ರಾಮಲಿಂಗರಾಜು ಬಲೆಗೆ ಬೀಳುತ್ತಾರೆ. ಮದುವೆಯಾದ ಮೇಲೆ ನಾಲ್ಕನೇ ಗಂಡ ರಾಮಲಿಂಗರಾಜುಗೆ ಅನುಮಾನ ಶುರುವಾಗುತ್ತದೆ. ಆಕೆಗೆ ಗೊತ್ತಿಲ್ಲದಂತೆ ರಾಜು ಡೆನ್ಮಾರ್ಕ್ ನಿಂದ ನಾಪತ್ತೆಯಾಗುತ್ತಾನೆ.

ರಾಮಲಿಂಗರಾಜು ಮೇಲೆಯೂ ದೂರು ನೀಡುತ್ತಾಳೆ. ತನಿಖೆ ಮಾಡಿದಾಗ ಮಹಿಳೆಯ ಬಣ್ಣ ಬಯಲಾಗುತ್ತದೆ. ತನ್ನ ಹೆಸರುಗಳನ್ನು, ಪ್ರೋಪೈಲ್ ಗಳನ್ನು ಮೇಲಿಂದ ಮೇಲೆ ಬದಲಾಯಿಸಿಕೊಳ್ಳುವ ಸ್ವಪ್ನ ಯುವಕರನ್ನು ಮದುವೆಯಾಗಿ ಅವರಿಗೆ ಬ್ಲಾಕ್ ಮೇಲೆ ಮಾಡುತ್ತಿದ್ದಳು. 

ಇಂಗ್ಲಿಷ್ ನಲ್ಲಿಯೂ ಓದಿ