ಮದುವೆಯಾಗಿದ್ರೂ ಅಪ್ರಾಪ್ತೆ ವಿದ್ಯಾರ್ಥಿನಿಗೆ ತಾಳಿ ಕಟ್ಟಿದ ಟೀಚರ್: ಕಾಮುಕ ಶಿಕ್ಷಕನ ಬಂಧನ
ಮದುವೆಯಾದ ಬಳಿಕ, ವಿದ್ಯಾರ್ಥಿನಿ ಚಲಪತಿಯ ವರ್ತನೆಯಲ್ಲಿ ಬದಲಾವಣೆಯನ್ನು ಗಮನಿಸಿದ್ದಾಳೆ. ನಂತರ ಹುಡುಗಿ ತನ್ನ ಪೋಷಕರಿಗೆ ಸಂಪೂರ್ಣ ಘಟನೆಯ ಬಗ್ಗೆ ತಿಳಿಸಿದ್ದು, ಗುರುವಾರ ರಾತ್ರಿ ತನ್ನ ಹೆತ್ತವರೊಂದಿಗೆ ಬಾಲಕಿ ಗಂಗಾವರಂ ಪೊಲೀಸ್ ಠಾಣೆಗೆ ತಲುಪಿ ಎಫ್ಐಆರ್ ದಾಖಲಿಸಿದ್ದಾಳೆ ಎಂದೂ ಪೊಲೀಸರು ಹೇಳಿದರು.
ಚಿತ್ತೂರು, ಆಂಧ್ರಪ್ರದೇಶ (ಏಪ್ರಿಲ್ 2, 2023): ಅಪ್ರಾಪ್ತ ವಿದ್ಯಾರ್ಥಿನಿಯನ್ನು ವಂಚಿಸಿ ಮದುವೆಯಾದ ಆರೋಪದ ಮೇಲೆ ಶಿಕ್ಷಕನನ್ನು ಬಂಧಿಸಲಾಗಿದೆ ಎಂದು ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಗಂಗಾವರಂ ಮಂಡಲ್ ಪ್ರದೇಶದಲ್ಲಿ ಪೊಲೀಸರು ತಿಳಿಸಿದ್ದಾರೆ. ಆರೋಪಿ ಶಿಕ್ಷಕ ಚಲಪತಿ (33) ವಿರುದ್ಧ ಮಕ್ಕಳ ಲೈಂಗಿಕ ಅಪರಾಧಗಳ ರಕ್ಷಣೆ (ಪೋಕ್ಸೋ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಪಿಯು ಖಾಸಗಿ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದೂ ತಿಳಿದುಬಂದಿದೆ.
ಆರೋಪಿಗೆ ಈಗಾಗಲೇ ಮದುವೆಯಾಗಿದ್ದು, ಓರ್ವ ಮಗಳಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೂ, 12ನೇ ತರಗತಿಯಲ್ಲಿ ಓದುತ್ತಿರುವ 17 ವರ್ಷದ ಬಾಲಕಿಗೆ ವಂಚಿಸಿ ಮದುವೆಯಾಗಿದ್ದಾನೆ. ಬುಧವಾರ ವಿದ್ಯಾರ್ಥಿನಿಗೆ ಅಂತಿಮ ಪರೀಕ್ಷೆ ಇದ್ದು, ಪರೀಕ್ಷೆ ಮುಗಿದ ಬಳಿಕ ಆರೋಪಿ ಚಲಪತಿ ಸುಳ್ಳು ಹೇಳಿ ಆಕೆಯನ್ನು ತಿರುಪತಿಗೆ ಕರೆದುಕೊಂಡು ಹೋಗಿದ್ದ. ಅಲ್ಲಿ, ತಾನು ಪ್ರಾಮಾಣಿಕನಾಗಿದ್ದು, ತನ್ನನ್ನು ನಂಬುವಂತೆ ಆಕೆಯನ್ನು ಕೇಳಿಕೊಂಡಿದ್ದಾನೆ ಮತ್ತು ನಾನು ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಹೇಳಿ ಅವರಿಬ್ಬರೂ ಅಲ್ಲಿರುವ ದೇವಸ್ಥಾನವೊಂದರಲ್ಲಿ ಮದುವೆಯಾದರು ಎಂದು ಎಸ್‌ಐ ಸುಧಾಕರ್ ರೆಡ್ಡಿ ಎಎನ್‌ಐಗೆ ಮಾಹಿತಿ ನೀಡಿದ್ದಾರೆ.
ಇದನ್ನು ಓದಿ: AI ಬಗ್ಗೆ ಇರಲಿ ಎಚ್ಚರ: ಚಾಟ್‌ಜಿಪಿಟಿಯಂತಹ ಆ್ಯಪ್ ಗೀಳಿಗೆ ಆತ್ಮಹತ್ಯೆ ಮಾಡಿಕೊಂಡ ವಿವಾಹಿತ..!
ಮದುವೆಯಾದ ಬಳಿಕ, ವಿದ್ಯಾರ್ಥಿನಿ ಚಲಪತಿಯ ವರ್ತನೆಯಲ್ಲಿ ಬದಲಾವಣೆಯನ್ನು ಗಮನಿಸಿದ್ದಾಳೆ. ನಂತರ ಹುಡುಗಿ ತನ್ನ ಪೋಷಕರಿಗೆ ಸಂಪೂರ್ಣ ಘಟನೆಯ ಬಗ್ಗೆ ತಿಳಿಸಿದ್ದು, ಗುರುವಾರ ರಾತ್ರಿ ತನ್ನ ಹೆತ್ತವರೊಂದಿಗೆ ಬಾಲಕಿ ಗಂಗಾವರಂ ಪೊಲೀಸ್ ಠಾಣೆಗೆ ತಲುಪಿ ಎಫ್ಐಆರ್ ದಾಖಲಿಸಿದ್ದಾಳೆ ಎಂದೂ ಪೊಲೀಸರು ಹೇಳಿದರು. ಬಳಿಕ ಆರೋಪಿ ಶಿಕ್ಷಕನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದೂ ಪೊಲೀಸರು ತಿಳಿಸಿದ್ದಾರೆ.
ಅಸ್ಸಾಂನಲ್ಲಿ ಅಪ್ರಾಪ್ತೆ ಆತ್ಮಹತ್ಯೆ
ಈ ಮಧ್ಯೆ ಬಾಲ್ಯವಿವಾಹದ ಮತ್ತೊಂದು ಪ್ರಕರಣದಲ್ಲಿ, ಅಸ್ಸಾಂನ ಕ್ಯಾಚಾರ್ ಜಿಲ್ಲೆಯಲ್ಲಿ 17 ವರ್ಷದ ಅಪ್ರಾಪ್ತೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ. ಬಾಲ್ಯವಿವಾಹಗಳ ವಿರುದ್ಧ ಅಸ್ಸಾಂ ಸರ್ಕಾರದ ಶಿಸ್ತುಕ್ರಮ ತೆಗೆದುಕೊಳ್ಳುತ್ತಿರುವ ಹಿನ್ನೆಲೆ ತನ್ನ ಕುಟುಂಬ ಸದಸ್ಯರನ್ನು ಅರೆಸ್ಟ್ ಮಾಡ್ತಾರೆ ಎಂಬ ಭಯದಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವರದಿಯಾಗಿದೆ. ಆದರೆ, ಆಕೆಯ ಆತ್ಮಹತ್ಯೆಗೆ ಬೇರೆ ಕಾರಣಗಳಿರಬಹುದು ಎಂದು ಪೊಲೀಸರು ಮೃತ ಬಾಲಕಿಯ ತಾಯಿಯ ಹೇಳಿಕೆಯನ್ನು ನಿರಾಕರಿಸಿದ್ದಾರೆ.
ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ನಡೆಸಿ 7 ವರ್ಷದ ಬಾಲಕಿ ಹತ್ಯೆ ಮಾಡಿದ ನೆರೆಮನೆಯ ಕಾಮುಕ: ಗೋಣಿಚೀಲದಲ್ಲಿ ಶವ ಪತ್ತೆ
ಫೆಬ್ರವರಿ 4 ರಂದು ವಿದ್ಯಾರ್ಥಿನಿಯ ಮೃತದೇಹವನ್ನು ಆಕೆಯ ಮನೆಯ ಸಮೀಪವಿರುವ ಮರದಲ್ಲಿ ಪತ್ತೆಹಚ್ಚಲಾಗಿದೆ. ಈ ಘಟನೆ ಧೋಲೈನ ರಾಜ್ ನಗರದಲ್ಲಿ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Bengaluru: ಕಾರಿನ ಜಿಪಿಎಸ್‌ನಿಂದ ಬಯಲಾಯ್ತು ಪತ್ನಿಯ ಅನೈತಿಕ ಸಂಬಂಧ..!