Asianet Suvarna News

ಸ್ನೇಹಿತರೊಂದಿಗೆ ಪಾರ್ಟಿಗೆ ಹೋಗಿದ್ದ ಬಿಜೆಪಿ ನಾಯಕನ ಸೊಸೆ ನಿಗೂಢ ಸಾವು

ಸ್ನೇಹಿತರೊಂದಿಗೆ ಪಾರ್ಟಿಗೆ ತೆರಳಿದ್ದ ಬಿಜೆಪಿ ಅಧ್ಯಕ್ಷನ ಸೊಸೆ ನಿಗೂಢವಾಗಿ ಸಾವನ್ನಪ್ಪಿದ್ದಾಳೆ. 

Andhra Pradesh BJP president daughter in-law found dead
Author
Bengaluru, First Published May 29, 2020, 7:43 PM IST
  • Facebook
  • Twitter
  • Whatsapp

ಹೈದರಾಬಾದ್, (ಮೇ.29): ಆಂಧ್ರಪ್ರದೇಶದ ಬಿಜೆಪಿ ಅಧ್ಯಕ್ಷ ಕನ್ನಾ ಲಕ್ಷ್ಮಿ ನಾರಾಯಣ ಅವರ ಸೊಸೆ ನಿಗೂಢವಾಗಿ ಸಾವಿಗೀಡಾಗಿದ್ದಾರೆ. 

ಕನ್ನಾ ಲಕ್ಷ್ಮೀನಾರಾಯಣ ಅವರ ಎರಡನೇ ಪುತ್ರ ಫಣೀಂದ್ರ ಪತ್ನಿಯಾಗಿರುವ ಸುಹಾರಿಕಾ ರೆಡ್ಡಿ ಹೈದರಾಬಾದ್ ನ ರಾಯದುರ್ಗಂ ಪ್ರದೇಶದಲ್ಲಿ ಮೃತಪಟ್ಟಿದ್ದಾರೆ.

ರಾಜ್ಯ ಬಿಜೆಪಿಯಲ್ಲಿ ಅಸಮಾಧಾನದ ಕಿಡಿ, ರಾಮಮಂದಿರಕ್ಕೆ ಪಾಕ್ ಸಿಡಿಮಿಡಿ; ಮೇ.29ರ ಟಾಪ್ 10 ಸುದ್ದಿ! 

32 ವರ್ಷದ ಸುಹಾರಿಕಾ ರೆಡ್ಡಿ ನಿಗೂಢವಾಗಿ ಸಾವನ್ನಪ್ಪಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ. ಮಾಧುಪುರ್ ಪೊಲೀಸ್ ಠಾಣೆ ವ್ಯಾಪ್ತಿಯ ಮೀನಾಕ್ಷಿ ಟವರ್ ಅಪಾರ್ಟ್ ಮೆಂಟ್ ನಲ್ಲಿ ಸ್ನೇಹಿತರೊಂದಿಗೆ ಸುಹಾರಿಕಾ ಪಾರ್ಟಿ ಮಾಡಿದ್ದಾರೆ. 

ಪಾರ್ಟಿಯಲ್ಲಿ ಬಹು ಹೊತ್ತಿನವರೆಗೆ ಡ್ಯಾನ್ಸ್ ಮಾಡುತ್ತಿದ್ದ ವೇಳೆ ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

ಸುಹಾರಿಕಾ ಕೆಳಗೆ ಬಿದ್ದ ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಈ ವೇಳೆಗೆ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ.

Follow Us:
Download App:
  • android
  • ios