ಮನೆಯಿಂದ ಹೊರಹೋಗುವಂತೆ ಪತ್ನಿ ಜೊತೆ ಜಗಳ; ಲೆದರ್ ಬೆಲ್ಟ್‌ನಿಂದ ಹಲ್ಲೆ ನಡೆಸಿದ ದುರುಳ
ಮನೆಯಿಂದ ಹೊರಹೋಗುವಂತೆ ಪತ್ನಿಗೆ ಬೆಲ್ಟ್‌ನಿಂದ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನೆಡದಿದೆ. ಕ್ಷುಲ್ಲಕ ಕಾರಣಕ್ಕೆ ಪ್ರತಿದಿನ ಪತ್ನಿಯೊಂದಿಗೆ ಜಗಳ ಮಾಡುತ್ತಿರುವ ಪತಿರಾಯ. ಮನೆಯಿಂದ ಹೊರಹೋಗುವಂತೆ ಜಗಳ ಶುರುಮಾಡುವ ಪತಿ. ತನ್ನನ್ನು ನಂಬಿ ಮದುವೆಯಾಗಿ ಬಂದಿರುವಾಗ ಹೊರಗೆ ಎಲ್ಲಿಗೆ ಹೋಗುವುದು? ಎಂದು ಪ್ರಶ್ನಿಸುವ ಪತ್ನಿಗೆ ಲೆದರ್ ಬೆಲ್ಟ್‌ನಿಂದ ಹೊಡೆದು ದೈಹಿಕ ಹಿಂಸೆ ನೀಡುತ್ತಿರುವ ಪಾಪಿ.
ಬೆಂಗಳೂರು (ಜ.11): ಮನೆಯಿಂದ ಹೊರಹೋಗುವಂತೆ ಪತ್ನಿಗೆ ಬೆಲ್ಟ್‌ನಿಂದ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನೆಡದಿದೆ.
ಕ್ಷುಲ್ಲಕ ಕಾರಣಕ್ಕೆ ಪ್ರತಿದಿನ ಪತ್ನಿಯೊಂದಿಗೆ ಜಗಳ ಮಾಡುತ್ತಿರುವ ಪತಿರಾಯ. ಮನೆಯಿಂದ ಹೊರಹೋಗುವಂತೆ ಜಗಳ ಶುರುಮಾಡುವ ಪತಿ. ತನ್ನನ್ನು ನಂಬಿ ಮದುವೆಯಾಗಿ ಬಂದಿರುವಾಗ ಹೊರಗೆ ಎಲ್ಲಿಗೆ ಹೋಗುವುದು? ಎಂದು ಪ್ರಶ್ನಿಸುವ ಪತ್ನಿಗೆ ಲೆದರ್ ಬೆಲ್ಟ್‌ನಿಂದ ಹೊಡೆದು ದೈಹಿಕ ಹಿಂಸೆ ನೀಡುತ್ತಿರುವ ಪಾಪಿ.
ಗಂಡನಿಂದ ಮಾನಸಿಕ, ದೈಹಿಕ ಹಿಂಸೆಗೆ ಬೇಸತ್ತ ಪತ್ನಿ ಪೊಲೀಸ್ ಠಾಣೆ ಮೊರೆ ಹೋಗಿದ್ದಾಳೆ. ಪತಿಯಿಂದ ಹಲ್ಲೆಗೊಳಗಾಗುತ್ತಿರುವ ದೃಶ್ಯ ಮೊಬೈಲ್ ವಿಡಿಯೋ ಸೆರೆಹಿಡಿದಿರುವ ಪತ್ನಿ ವಿಡಿಯೋ ನಗರ ಪೊಲೀಸ್ ಆಯುಕ್ತರಿಗೆ ಟ್ಯಾಗ್ ಮಾಡಿ ನ್ಯಾಯ ಕೊಡಿಸುವಂತೆ ಕೇಳಿಕೊಂಡಿದ್ದಾಳೆ.
ಮನೆ ಖಾಲಿ ಮಾಡಿಸಲು ಕುಡಿವ ನೀರು, ವಿದ್ಯುತ್ ಸಂಪರ್ಕ ಕಡಿತ: ವೃದ್ಧ ದಂಪತಿ ಕತ್ತಲಲ್ಲಿ ಪರದಾಟ
ಕೋರ್ಟ್‌ನಿಂದ ಬಂಧನ ವಾರೆಂಟ್ ಜಾರಿ ಎಂದು ಬೆದರಿಸಿ ಹಣ ಸುಲಿಗೆ
ಬೆಂಗಳೂರು : ಮಹಿಳೆ ಕಿರುಕುಳ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಿಂದ ಬಂಧನ ವಾರೆಂಟ್ ಜಾರಿಯಾಗಿದೆ ಎಂದು ಬೆದರಿಸಿ ಮಹಿಳೆಯೊಬ್ಬರಿಂದ ₹6.70 ಲಕ್ಷ ವಸೂಲಿ ಮಾಡಿ ಸೈಬರ್ ವಂಚಕರು ವಂಚಿಸಿದ್ದಾರೆ. ಮೋಸ ಹೋಗಿರುವ ಕೋರಮಂಗಲ 4ನೇ ಹಂತದ ನಿವಾಸಿ ಮಹಿಳೆ ನೀಡಿದ ದೂರಿನ ಮೇರೆಗೆ ಅಪರಿಚಿತರ ವಿರುದ್ಧ ಕೇಂದ್ರ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಲ ದಿನಗಳ ಹಿಂದೆ ಸಂತ್ರಸ್ತೆಗೆ ಅಪರಿಚಿತ ನಂಬರ್‌ನಿಂದ ಬಂದ ಕರೆಯಲ್ಲಿ ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಗಿರುವ ಮೊಬೈಲ್‌ನಿಂದ ಮಹಿಳೆಗೆ ಕಿರುಕುಳ ಸಂದೇಶಗಳ ಬರುತ್ತಿರುವ ಬಗ್ಗೆ ಗೋವಂಡಿ (ಮುಂಬೈ) ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದರಲ್ಲಿ ಸುಪ್ರೀಂ ಕೋರ್ಟ್‌ನಿಂದ ಬಂಧನ ವಾರೆಂಟ್ ಜಾರಿಯಾಗಿದೆ ಎಂದಿದ್ದಾಳೆ.
'ಅಜ್ಜಿ ಟಿಕೆಟ್ ಕೊಡಿ' ಎಂದಿದ್ದಕ್ಕೆ ವಿದ್ಯಾರ್ಥಿನಿಗೆ ಕಪಾಳಮೋಕ್ಷ ಮಾಡಿದ ಮಹಿಳಾ ಕಂಡಕ್ಟರ್!
ಇದಾದ ನಂತರ ಮುಂಬೈ ಹಾಗೂ ಸಿಐಡಿ ಪೊಲೀಸರ ಹೆಸರಿನಲ್ಲಿ ಮತ್ತೆ ಅವರಿಗೆ ಕರೆಗಳು ಬಂದಿವೆ. ನಿಮ್ಮ ಬಂಧನ ವಾರೆಂಟ್‌ನ ಪರಿಶೀಲಿಸಬಹುದು. ಇದು ಸುಪ್ರೀಂಕೋರ್ಟ್ ವೆಬ್‌ಸೈಟ್ ಎಂದು ಲಿಂಕ್ ಕಳುಹಿಸಿದ್ದರು. ಅಲ್ಲದೆ ಅಕ್ರಮ ಹಣ ವರ್ಗಾವಣೆ ಪ್ರಕರಣ ಕೂಡ ದಾಖಲಿಸಲಾಗುತ್ತದೆ ಎಂದು ದೂರುದಾರರಿಗೆ ಹೆದರಿಸಿದ್ದರು. ಈ ಬ್ಲ್ಯಾಕ್‌ಮೇಲ್‌ಗೆ ಹೆದರಿದ ಅವರು, ಕೊನೆಗೆ ಅಪರಿಚಿತರು ಹೇಳಿದ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಹಣ ವರ್ಗಾಯಿಸಿದ್ದಾರೆ. ನಂತರ ಮಹಿಳೆಗೆ ತಾನು ವಂಚನೆಗೆ ಒಳಗಾಗಿರುವ ಸಂಗತಿ ಅರಿವಾಗಿದೆ ಎಂದು ತಿಳಿದು ಬಂದಿದೆ.