ಸಿಲಿಕಾನ್ ಸಿಟಿಯಲ್ಲಿ ಆಂಬ್ಯುಲೆನ್ಸ್ ಚಾಲಕನಿಂದ ಅಡ್ಡಾದಿಡ್ಡಿ ಆಂಬ್ಯುಲೆನ್ಸ್ ಚಾಲನೆ ಮಾಡಲಾಗಿದ್ದು, ವಿಲ್ಸನ್ ಗಾರ್ಡನ್ 10ನೇ ಕ್ರಾಸ್‌ನಲ್ಲಿ ಘಟನೆ ನಡೆದಿದೆ. ಸಾರ್ವಜನಿಕರ ಸಮಯ ಪ್ರಜ್ಞೆಯಿಂದ ಚಾಲಕನನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. 

ಬೆಂಗಳೂರು (ಸೆ.01): ಸಿಲಿಕಾನ್ ಸಿಟಿಯಲ್ಲಿ ಆಂಬ್ಯುಲೆನ್ಸ್ ಚಾಲಕನಿಂದ ಅಡ್ಡಾದಿಡ್ಡಿ ಆಂಬ್ಯುಲೆನ್ಸ್ ಚಾಲನೆ ಮಾಡಲಾಗಿದ್ದು, ವಿಲ್ಸನ್ ಗಾರ್ಡನ್ 10ನೇ ಕ್ರಾಸ್‌ನಲ್ಲಿ ಘಟನೆ ನಡೆದಿದೆ. ಸಾರ್ವಜನಿಕರ ಸಮಯ ಪ್ರಜ್ಞೆಯಿಂದ ಚಾಲಕನನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಸಂಜೀವ್ ಎಂಬಾತ ಕುಡಿದು ಆಂಬ್ಯುಲೆನ್ಸ್ ಚಾಲನೆ ಮಾಡಿದ್ದು, ಸದ್ಯ ವಿಲ್ಸನ್ ಗಾರ್ಡನ್ ಸಂಚಾರಿ ಪೊಲೀಸರು ಚಾಲಕನನ್ನ ವಶಕ್ಕೆ ಪಡೆದಿದ್ದಾರೆ. ಮಾತ್ರವಲ್ಲದೇ ಕುಡಿದು ಚಾಲನೆ ಮಾಡ್ತಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಸದ್ಯ ವಿಲ್ಸನ್ ಗಾರ್ಡನ್ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡ್ತಿದ್ದಾರೆ.

ಚಿನ್ನ ದೋಚಿದ ಸೆಕ್ಯೂರಿಟಿ ದಂಪತಿ: ಉಂಡ ಮನೆಗೆ ಕನ್ನ ಹಾಕಿದ ನೇಪಾಳ ಮೂಲದ ಸೆಕ್ಯುರಿಟಿ ಗಾರ್ಡ್‌, ತಾನು ಭದ್ರತೆಗೆ ನಿಯೋಜಿತವಾಗಿದ್ದ ರಿಯಲ್‌ ಎಸ್ಟೇಟ್‌ ಉದ್ಯಮಿಯೊಬ್ಬರ ಮನೆಯಲ್ಲಿ ವಜ್ರ ಹಾಗೂ ಚಿನ್ನಾಭರಣ ಸೇರಿ .70 ಲಕ್ಷ ಮೌಲ್ಯದ ವಸ್ತುಗಳನ್ನು ದೋಚಿರುವ ಘಟನೆ ಪುಟ್ಟೇನಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಜೆ.ಪಿ.ನಗರದ 4ನೇ ಹಂತದ ಡಾಲ​ರ್‍ಸ್ ಕಾಲೋನಿ ನಿವಾಸಿ ಪಿ.ಅಶೋಕ್‌ಕುಮಾರ್‌ ಮನೆಯಲ್ಲಿ ಕಳ್ಳತನವಾಗಿದ್ದು, ಕೃತ್ಯ ಎಸಗಿ ಪರಾರಿಯಾಗಿರುವ ನೇಪಾಳ ಮೂಲದ ಕರಣ್‌ ಹಾಗೂ ಆತನ ಪತ್ನಿ ಮನೀಷಾ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಇತ್ತೀಚೆಗೆ ಕೆಲಸದ ನಿಮಿತ್ತ ಕುಟುಂಬ ಸಮೇತ ಅಶೋಕ್‌ಕುಮಾರ್‌ ಹೈದಾರಾಬಾದ್‌ಗೆ ತೆರಳಿದ್ದಾಗ ಈ ಕೃತ್ಯ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ರೈಲ್ವೆ ಇಲಾಖೆಯ ನೌಕರ ಎಂದು ಗಾಂಜಾ ಸಾಗಾಟ ಮಾಡ್ತಿದ್ದ ಆರೋಪಿ ಬಂಧನ

3 ವಾರದ ಹಿಂದೆ ಕೆಲಸಕ್ಕೆ ಸೇರಿದ್ದ: ರಿಯಲ್‌ ಎಸ್ಟೇಟ್‌ ಉದ್ಯಮಿ ಅಶೋಕ್‌, ತಮ್ಮ ಪತ್ನಿ ಹಾಗೂ ಮಗಳ ಜತೆ ನೆಲೆಸಿದ್ದಾರೆ. ಮೂರು ವಾರದ ಹಿಂದೆ ತಮ್ಮ ಮನೆಗೆ ಮಾರುತಿ ಸೆಕ್ಯುರಿಟಿ ಏಜೆನ್ಸಿ ಮೂಲಕ ಕರಣ್‌ ಮತ್ತು ಅವರ ಪತ್ನಿ ಮನೀಷಾ ಅವರನ್ನು ಭದ್ರತೆ ಕೆಲಸಕ್ಕೆ ನೇಮಿಸಿಕೊಂಡಿದ್ದರು. ಆ.23ರಂದು ಕೆಲಸದ ನಿಮಿತ್ತ ಹೈದರಾಬಾದ್‌ಗೆ ಅಶೋಕ್‌ ತೆರಳಿದ್ದರು. ಆಗ ನೆರೆಮನೆಯ ತಮ್ಮ ಗೆಳೆಯ ಡಾ. ರಾಜೇಶ್‌ ಅವರಿಗೆ ಮನೆ ಕೀ ಹಾಗೂ ಅಲರಾಮ್‌ ರಿಮೋಟ್‌ ನೀಡಿ ಅವರು ತೆರಳಿದ್ದರು.

ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರಕ್ಕೆ ಮನಸ್ಸಿಲ್ಲ: ಮುಖ್ಯಮಂತ್ರಿ ಚಂದ್ರು

ಆ.25ರಂದು ಮನೆ ಕಿಟಕಿ ಮುರಿದು ಒಳ ಪ್ರವೇಶಿಸಿರುವ ಆರೋಪಿಗಳು, ಬೆಡ್‌ ರೂಮ್‌ನ ಅಲ್ಮೇರಾದಲ್ಲಿದ್ದ ವಜ್ರ, ಚಿನ್ನದ ಆಭರಣ, .1.4 ಲಕ್ಷ ಮೌಲ್ಯದ ಕೈ ಗಡಿಯಾರ ಹಾಗೂ ಬುಲೆಟ್‌ ರಹಿತ ರಿವಾಲ್ವರ್‌ ಸೇರಿದಂತೆ 70.40 ಲಕ್ಷ ಮೌಲ್ಯದ ವಸ್ತುಗಳನ್ನು ದೋಚಿದ್ದಾರೆ. ಮನೆ ಕಿಟಕಿ ಮುರಿದ ಕೂಡಲೇ ಅಲರಾಮ್‌ ಸದ್ದಾಗಿದ್ದು ರಾಜೇಶ್‌ ಅವರಿಗೆ ಎಚ್ಚರವಾಗಿದೆ. ಕೂಡಲೇ ಅಶೋಕ್‌ ಅವರಿಗೆ ರಾಜೇಶ್‌ ಮಾಹಿತಿ ನೀಡಿದ್ದಾರೆ. ಬಳಿಕ ಅಶೋಕ್‌ ಸೂಚನೆ ಮೇರೆಗೆ ಅವರ ಮನೆಗೆ ರಾಜೇಶ್‌ ತೆರಳಿದಾಗ ಕಳ್ಳತನ ಕೃತ್ಯ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.