ದೇವಸ್ಥಾನಕ್ಕೆ ತೆರಳುತ್ತಿದ್ದ ಬಸ್ ಅಪಘಾತ; ಒಂದೇ ಕುಟುಂಬದ 7 ಮಂದಿ ಸಾವು, 25 ಜನರಿಗೆ ಗಾಯ!
ಕುಟುಂಬ ಸಮೇತ ದೇವಸ್ಥಾನಕ್ಕೆ ತೆರಳುತ್ತಿದ್ದ ಬಸ್ ಅಪಘಾತಕ್ಕೀಡಾಗಿದೆ. ಮುಖ್ಯ ರಸ್ತೆಯ ತಿರುವಿನಲ್ಲಿ ಟ್ರಕ್ ನಿಲ್ಲಿಸಿದ್ದೇ ಅಪಘಾತಕ್ಕೆ ಕಾರಣವಾಗಿದೆ. ಈ ಘಟನೆಯಲ್ಲಿ ಮಗು ಸೇರಿ ಒಂದೇ ಕುಟುಂಬದ 7 ಮಂದಿ ಮೃತಪಟ್ಟಿದ್ದರೆ, 25 ಮಂದಿ ಗಾಯಗೊಂಡಿದ್ದಾರೆ.
ಅಂಬಾಲ(ಮೇ.24) ಮಾತಾ ವೈಷ್ಣೋ ದೇವಿ ದರ್ಶನಕ್ಕೆ ತೆರಳುತ್ತಿದ್ದ ಒಂದೇ ಕುಟುಂಬದ ಬಸ್ ಅಪಘಾತಕ್ಕೀಡಾದ ಘಟನೆ ಹರ್ಯಾಣದ ಅಂಬಾಲದಲ್ಲಿ ನಡೆದಿದೆ. ಬುಲಂದ್‌ಶಹರ್‌ನಿಂದ ಕರ್ತಾದಲ್ಲಿರುವ ಮಾತಾ ವೈಷ್ಣೋ ದೇವಿಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಒಂದೇ ಕುಟುಂಬದ 26 ಮಂದಿ ಬಸ್ ಮೂಲಕ ದೇವಿ ದರ್ಶನಕ್ಕೆ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ. ಮುಖ್ಯ ರಸ್ತೆಯ ತಿರುವಿನಲ್ಲಿ ಟ್ರಕ್ ನಿಲ್ಲಿಸಿದ್ದೇ ಈ ದುರ್ಘಟನೆಗೆ ಕಾರಣವಾಗಿದೆ.
ಈ ಅಪಘಾತದಲ್ಲಿ ಪುಟ್ಟ ಮಗು ಸೇರಿದಂತೆ 7 ಮಂದಿ ಮೃತಪಟ್ಟರೆ, ಬಸ್‌ನಲ್ಲಿದ್ದ ಇನ್ನುಳಿದ 25 ಮಂದಿಯೂ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆದೇಶ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೆಲವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅಂಬಾಲ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತ್ತ ರಸ್ತೆಯ ತಿರುವಿನಲ್ಲಿ ಟ್ರಕ್ ನಿಲ್ಲಿಸಿದ್ದೇ ಈ ದುರ್ಘಟನೆಗೆ ಕಾರಣ ಎಂದು ಪೊಲೀಸ್ ಪ್ರಾಥಮಿಕ ತನಿಖೆಗಳು ಹೇಳುತ್ತಿದೆ. ಇತ್ತ ಟ್ರಕ್ ಚಾಲಕ ಹಾಗೂ ಸಿಬ್ಬಂದಿ ಪರಾರಿಯಾಗಿದ್ದಾರೆ. ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.
ಕಾಡುಹಂದಿಗೆ ಬೈಕ್ ಡಿಕ್ಕಿ; ಗಾಯಾಳು ಸಹಾಯಕ್ಕೆ ಧಾವಿಸಿ ಬಂದ ಅರಣ್ಯ ಸಚಿವ ಈಶ್ವರ್ ಖಂಡ್ರೆ
ಒಂದೇ ಕುಟುಂಬದ 26 ಮಂದಿ ಬಸ್ ಬುಕ್ ಮಾಡಿ ವೈಷ್ಣೋ ದೇವಿ ದರ್ಶನಕ್ಕೆ ತೆರಳಿದ್ದಾರೆ. ಮಕ್ಕಳು ಸೇರಿದಂತೆ 25 ಮಂದಿಯ ತಂಡ ಒಂದೇ ಬಸ್‌ನಲ್ಲಿ ಪ್ರಯಾಣ ಆರಂಭಿಸಿದೆ. ವೈಷ್ಣೋ ದೇವಿ ದರ್ಶನದ ಬಳಿಕ ಇತರ ಕೆಲ ದೇವಸ್ಥಾನಕ್ಕೂ ಭೇಟಿ ನೀಡಿ ದರ್ಶನ ಪಡೆಯಲು ನಿರ್ಧರಿಸಲಾಗಿತ್ತು. ಆದರೆ ಬುಲಂದ್‌ಶಹರ್‌ನಿಂದ ಹರ್ಯಾಣದ ಕರ್ತಾಗೆ ತಲುಪುತ್ತಿದ್ದಂತೆ ಬಸ್ ಅಪಘಾತಕ್ಕೀಡಾಗಿದೆ.
ಭಾರತೀಯ ವಿದ್ಯಾರ್ಥಿಗಳು ಅಪಘಾತಕ್ಕೆ ಬಲಿ
ಅಮೆರಿಕದ ಜಾರ್ಜಿಯಾದಲ್ಲಿ ವೇಗವಾಗಿ ಚಲಿಸುತ್ತಿದ್ದ ಕಾರೊಂದು, ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಮೂವರು ಭಾರತೀಯ ಮೂಲದ ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಇಬ್ಬರು ವಿದ್ಯಾರ್ಥಿಗಳು ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.
ಅಪಘಾತದಲ್ಲಿ ಕಾಲು ಕಳೆದುಕೊಂಡಾಕೆ ಈಗ ಉದ್ಯಮಿ ! ವಿವಿಎಸ್ ಲಕ್ಷ್ಮಣ್ ಟ್ವೀಟ್ ಮಾಡಿ ಪ್ರಶಂಸೆ
ಪೊಲೀಸರ ಪ್ರಕಾರ, ಕಳೆದ ವಾರ ಮೇ.14ರಂದು ಅಲ್ಫಾರೇಟಾದ ವೆಸ್ಟ್‌ಸೈಡ್ ಪಾರ್ಕ್ ವೇಯಲ್ಲಿ ಈ ಅಪಘಾತ ನಡೆದಿದ್ದು, ಕಾರಿನಲ್ಲಿದ್ದ ಶ್ರೀಯಾ ಅವಸರಲಾ, ಆನ್ವಿ ಶರ್ಮಾ, ಆರ್ಯನ್ ಜೋಶಿ ಮೃತರು. ಮೂವರು ಕೂಡ ಭಾರತೀಯ ಮೂಲದವರಾಗಿದ್ದು, ಅಪಘಾತದ ಭೀಕರತೆಗೆ ಜೋಶಿ ಮತ್ತು ಅವಸರಲಾ ಸ್ಥಳದಲ್ಲಿಯೇ ನಿಧನರಾಗಿದ್ದು, ಶರ್ಮಾ ಆಸ್ಪತ್ರೆಗೆ ಸಾಗಿಸುವಾಗ ಸಾವನ್ನಪ್ಪಿದ್ದಾರೆ. ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.