Asianet Suvarna News Asianet Suvarna News

ಕಾಡುಹಂದಿಗೆ ಬೈಕ್ ಡಿಕ್ಕಿ; ಗಾಯಾಳು ಸಹಾಯಕ್ಕೆ ಧಾವಿಸಿ ಬಂದ ಅರಣ್ಯ ಸಚಿವ ಈಶ್ವರ್ ಖಂಡ್ರೆ

ಕಾಡು ಹಂದಿಗೆ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸೇರಿ ಇಬ್ಬರು ಗಾಯಗೊಂಡ ಘಟನೆ ಬೀದರ್ ತಾಲೂಕಿನ ಹೊನ್ನಿಕೇರಿ ಕ್ರಾಸ್ ಬಳಿ ನಡೆದಿದೆ. ಅದೇ ರಸ್ತೆ ಮಾರ್ಗವಾಗಿ ಭಾಲ್ಕಿಯಿಂದ ಬೀದರ್‌ಗೆ ಹೊರಟಿದ್ದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸಹಾಯಕ್ಕೆ ದಾವಿಸಿ ಬಂದು ಗಾಯಾಳು ಯುವಕರನ್ನ ಆಸ್ಪತ್ರೆಗೆ ರವಾನಿಸಿ ಮಾನವೀಯತೆ ಮರೆದಿದ್ದಾರೆ.

Two youths injured in bike collision with wild boar at bidar rav
Author
First Published May 24, 2024, 3:13 PM IST

ಬೀದರ್ (ಮೇ.24): ಕಾಡು ಹಂದಿಗೆ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸೇರಿ ಇಬ್ಬರು ಗಾಯಗೊಂಡ ಘಟನೆ ಬೀದರ್ ತಾಲೂಕಿನ ಹೊನ್ನಿಕೇರಿ ಕ್ರಾಸ್ ಬಳಿ ನಡೆದಿದೆ.

ಜಾಂತಿ ಗ್ರಾಮದಿಂದ ಬೀದರ್ ನಗರಕ್ಕೆ ಆಗಮಿಸುತ್ತಿದ್ದ ಬೈಕ್ ಸವಾರರು. ರಸ್ತೆಯಲ್ಲಿ ವೇಗವಾಗಿ ಹೋಗುತ್ತಿದ್ದಾಗ ಏಕಾಏಕಿ ಎದುರಾದ ಕಾಡುಹಂದಿಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದು ಗಾಯಗೊಂಡಿದ್ದ ವಾಹನ ಸವಾರರು. ಈ ವೇಳೆ ಅದೇ ರಸ್ತೆಮಾರ್ಗವಾಗಿ ಭಾಲ್ಕಿಯಿಂದ ಬೀದರ್‌ ನಗರಕ್ಕೆ ಆಗಮಿಸುತ್ತಿದ್ದ ಅರಣ್ಯ ಸಚಿವ ಈಶ್ವರ ಖಂಡ್ರೆ. ಯುವಕರು ಅಪಘಾತವಾಗಿ ರಸ್ತೆಗೆ ಬಿದ್ದಿದ್ದನ್ನು ಕಂಡು ಕಾರು ನಿಲ್ಲಿಸಿ ಸಹಾಯಕ್ಕೆ ಧಾವಿಸಿ ಬಂದಿದ್ದಾರೆ. ಗಾಯಾಳುಗಳನ್ನು ವಿಚಾರಿಸಿ ತಕ್ಷಣ ಪೊಲೀಸ್ ವಾಹನದಲ್ಲಿ ಸಮೀಪದ ಆಸ್ಪತ್ರೆಗೆ ರವಾನಿಸಿದ ಸಚಿವರು

ರಸ್ತೆ ಅಪಘಾತ: ಗಾಯಾಳು ಯುವಕನನ್ನ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್!  

ರಸ್ತೆ ಅಪಘಾತ; ಓರ್ವ ಮಹಿಳೆ ಸಾವು, ಮೂವರಿಗೆ ಗಂಭೀರ ಗಾಯ

ತುಮಕೂರು: ದ್ವಿಚಕ್ರ ವಾಹನಗಳು ಮುಖಾಮುಖಿ ಡಿಕ್ಕಿಯಾಗಿ ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಪುರವರ ಗ್ರಾಮದ ಹೊರವಲಯದ ಜಯಮಂಗಲಿ ನದಿ ಸೇತುವೆ ಬಳಿ ನಡೆದಿದೆ.

ಜೋಗೆನಹಳ್ಳಿ ಗ್ರಾಮದ ಹನುಮಕ್ಕ(45), ಮೃತ ದುರ್ದೈವಿ. ಮೃತಳ ಮಗ ಸೇರಿ ಮೂವರು ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನು ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಪುರವರದಿಂದ ಜೋಗೆಹಳ್ಳಿಗೆ ಬರುತ್ತಿದ್ದ ಕುಟುಂಬ. ಅದೇ ಮಾರ್ಗವಾಗಿ ಮತ್ತೊಂದು ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದ ಉಪ್ಪಾರಹಳ್ಳಿ ಗ್ರಾಮದ ಹನಮಂತ ರೆಡ್ಡಿ(65), ಗಂಗಾಧರಪ್ಪ(67) ಎಂಬುವವರಿಗೆ ಗಂಭೀರ ಗಾಯಗಳಾಗಿವೆ. 

ಪೊರ್ಶೆ ಕಾರು ಅಪಘಾತದ ಬೆನ್ನಲ್ಲೇ ಅಪ್ರಾಪ್ತ ಬಾಲಕನ ಬೈಕ್‌ ರೈಡ್‌ಗೆ 32ರ ಹರೆಯದ ವ್ಯಕ್ತಿ ಬಲಿ!

ಘಟನೆ ಬಳಿಕ ಸ್ಥಳಕ್ಕೆ ಕೊಡಿಗೇನಹಳ್ಳಿ ಪೊಲೀಸರು ಭೇಟಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸದ್ಯ ಅಪಘಾತ ಪ್ರಕರಣ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು.

Latest Videos
Follow Us:
Download App:
  • android
  • ios