ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಗನಸಖಿಯೊಬ್ಬರ ಮೇಲೆ ಅತ್ಯಾಚಾರ ನಡೆಸಲಾಗಿದೆ. ಅಲ್ಲದೆ, ಸಂತ್ರಸ್ಥೆ ಮಹಿಳೆ ರೇಪ್‌ ಮಾಡಿದ ವ್ಯಕ್ತಿಯನ್ನು ಕೂಡಿಹಾಕಿ ಪೊಲೀಸರಿಗೆ ಕರೆ ಮಾಡಿದ್ದಾರೆ. 

ರಾಷ್ಟ್ರ ರಾಜಧಾನಿ ದೆಹಲಿ (Delhi) ಸೇರಿ ದೇಶಾದ್ಯಂತ ದಿನೇ ದಿನೇ ಅತ್ಯಾಚಾರ (Rape) ಪ್ರಕರಣಗಳು ವರದಿಯಾಗುತ್ತೇ ಇರುತ್ತವೆ. ಆದರೆ, ಈ ಪ್ರಕರಣದಲ್ಲಿ ಅತ್ಯಾಚಾರಕ್ಕೊಳಗಾದ ಮಹಿಳೆಯೇ ಆರೋಪಿಯನ್ನು ಲಾಕ್‌ ಮಾಡಿ ಪೊಲೀಸರಿಗೆ ಹಿಡಿದುಕೊಟ್ಟ ಘಟನೆ ವರದಿಯಾಗಿದೆ. ದಕ್ಷಿಣ ದೆಹಲಿಯ ಮೆಹ್ರೌಲಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಗಗನಸಖಿಯೊಬ್ಬರ (AirHostess) ಮನೆಯಲ್ಲಿ ಪರಿಚಿತ ವ್ಯಕ್ತಿಯೇ (Acquaintance) ಅತ್ಯಾಚಾರ ಮಾಡಿದ್ದಾನೆ ಎಂದು ಈ ಸಂಬಂಧ ಪೊಲೀಸರು ಸೋಮವಾರ ಮಾಹಿತಿ ನೀಡಿದ್ದಾರೆ. ಆರೋಪಿ ಹರ್ಜೀತ್ ಯಾದವ್ ಉತ್ತರ ಪ್ರದೇಶದ ಖಾನ್‌ಪುರ (Khanpur) ನಿವಾಸಿಯಾಗಿದ್ದು, ಆ ಪ್ರದೇಶದ ರಾಜಕೀಯ ಪಕ್ಷವೊಂದರ ಬ್ಲಾಕ್ ಅಧ್ಯಕ್ಷ ಎಂದು ತಿಳಿದುಬಂದಿದೆ. ಅಲ್ಲದೆ, ಅತ್ಯಾಚಾರ ಆರೋಪದ ಮೇರೆಗೆ ಆತನನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ (ದಕ್ಷಿಣ) (Deputy Commissioner of Police (South) ಚಂದನ್ ಚೌಧರಿ ಅವರು ಭಾನುವಾರ ಮೆಹ್ರೌಲಿ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರದ ಬಗ್ಗೆ ಪಿಸಿಆರ್ (PCR) ಕರೆ ಸ್ವೀಕರಿಸಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿದಾಗ, ಕಳೆದ ಒಂದೂವರೆ ತಿಂಗಳಿನಿಂದ ಪರಿಚಯವಿದ್ದ ಹರ್ಜೀತ್ ಯಾದವ್ ತನ್ನ ಮನೆಗೆ ಕುಡಿದ ಸ್ಥಿತಿಯಲ್ಲಿ ಬಂದು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ಥೆ ತಿಳಿಸಿದ್ದಾಳೆ.

ಇದನ್ನು ಓದಿ: ರೈಲ್ವೆ ಸ್ಟೇಷನ್‌ನಲ್ಲೇ ಅತ್ಯಾಚಾರ: ಕೃತ್ಯವೆಸಗಿದ 4 ಉದ್ಯೋಗಿಗಳ ಬಂಧನ

Scroll to load tweet…

ಇನ್ನು, ಆರೋಪಿಯನ್ನು ಕೋಣೆಗೆ ಬೀಗ ಹಾಕುವಲ್ಲಿ 30 ವರ್ಷದ ಸಂತ್ರಸ್ಥೆ ಮಹಿಳೆ ಯಶಸ್ವಿಯಾದರು. ನಂತರ 112 ಗೆ ಕರೆ ಮಾಡಿದರು ಎಂದು ಚಂದನ್ ಚೌಧರಿ ಅವರು ಹೇಳಿದರು. ಅಲ್ಲದೆ, ಗಗನಸಖಿಯ ಹೇಳಿಕೆಯನ್ನು ಆಧರಿಸಿ, ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 376 (ಅತ್ಯಾಚಾರ), 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 509 (ಮಹಿಳೆಯರ ನಮ್ರತೆಗೆ ಅವಮಾನ ಮಾಡುವ ಉದ್ದೇಶದಿಂದ ಪದ, ಸನ್ನೆ ಅಥವಾ ಕೃತ್ಯ) ಮತ್ತು 377 (ಅಸ್ವಾಭಾವಿಕ ಅಪರಾಧಗಳು) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಅವರು ಹೇಳಿದರು. ಅಲ್ಲದೆ, ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದೂ ಡೆಪ್ಯುಟಿ ಕಮೀಷನರ್‌ ಆಫ್‌ ಪೊಲೀಸ್‌ (ದಕ್ಷಿಣ) ಚಂದನ್‌ ಚೌಧರಿ ತಿಳಿಸಿದ್ದಾರೆ.

Scroll to load tweet…

ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಲೇ ಇದೆ. ಈ ಬಗ್ಗೆ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು ಹಾಗೂ ಪೊಲೀಸರು ಗಮನ ಹರಿಸಬೇಕಿದೆ.

ಇದನ್ನೂ ಓದಿ: Delhi Crime News: ಚಲಿಸುತ್ತಿದ್ದ ಕಾರಿನಲ್ಲಿ 16 ವರ್ಷದ ಯುವತಿ ಗ್ಯಾಂಗ್ ರೇಪ್: ಆರೋಪಿಗಳು ಅರೆಸ್ಟ್