Bengaluru Crime: ಯುವತಿ ಜತೆ ಲವ್ವಿಡವ್ವಿ: ಫ್ರೆಂಡ್ಸ್‌ ಜತೆ ಡ್ಯಾನ್ಸ್‌ ಟೀಚರ್‌ನಿಂದ ಗ್ಯಾಂಗ್‌ರೇಪ್‌!

ಸಂತ್ರಸ್ತೆಯ ಖಾಸಗಿ ಫೋಟೋಗಳನ್ನು ಸೆರೆ ಹಿಡಿದಿದ್ದ ಆರೋಪಿ ಆ್ಯಂಡಿ ಜಾರ್ಜ್‌, ಅದನ್ನು ಇಟ್ಕೊಂಡು ಬೆದರಿಕೆ ಹಾಕಿದ್ದಾನೆ. ಈ ಫೋಟೋಗಳನ್ನು ಡಿಲೀಟ್‌ ಮಾಡಲು ಅತ್ಯಾಚಾರ ಮಾಡಿದ್ದಲ್ಲದೆ ತನ್ನ ಸ್ನೇಹಿತರೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆಯೂ ಒತ್ತಾಯಿಸಿದ್ದಾನೆ ಎಂದು ತಿಳಿದುಬಂದಿದೆ.

dance teacher gangrapes ex girlfriend along with two friends for 6 months in bengaluru ash

ಬೆಂಗಳೂರು (ಆಗಸ್ಟ್‌ 1, 2023): ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾದ ಯುವತಿಯೊಬ್ಬಳನ್ನು ಬ್ಲಾಕ್‌ಮೇಲ್ ಮಾಡಿ ಗ್ಯಾಂಗ್‌ ರೇಪ್‌ ಮಾಡಿದ ಆರೋಪದ ಮೇಲೆ 28 ವರ್ಷದ ನೃತ್ಯ ಶಿಕ್ಷಕನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಕಳೆದ ಆರು ತಿಂಗಳಿನಿಂದ ತನ್ನ ಇಬ್ಬರು ಸ್ನೇಹಿತರೊಂದಿಗೆ ಸೇರಿ ಹಲವು ಬಾರಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಡ್ಯಾನ್ಸ್‌ ಟೀಚರ್‌ ಜತೆಗೆ ಅತ್ಯಾಚಾರ ಮಾಡಿದ ಮತ್ತಿಬ್ಬರು ಆರೋಪಿಗಳನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಂತ್ರಸ್ತೆಯ ಖಾಸಗಿ ಫೋಟೋಗಳನ್ನು ಸೆರೆ ಹಿಡಿದಿದ್ದ ಆರೋಪಿ ಆ್ಯಂಡಿ ಜಾರ್ಜ್‌, ಅದನ್ನು ಇಟ್ಕೊಂಡು ಬೆದರಿಕೆ ಹಾಕಿದ್ದಾನೆ. ಈ ಫೋಟೋಗಳನ್ನು ಡಿಲೀಟ್‌ ಮಾಡಲು ತನ್ನ ಸ್ನೇಹಿತರೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆಯೂ ಒತ್ತಾಯಿಸಿದ್ದಾನೆ ಎಂದು ತಿಳಿದುಬಂದಿದೆ. ಈ ಸಂಬಂಧ ಆರೋಪಿಯಿಂದ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬೆಂಗಳೂರು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇದನ್ನು ಓದಿ: ವಾಟ್ಸಾಪ್‌, ಫೇಸ್‌ಬುಕ್‌ನಲ್ಲಿ ಹುಡುಗಿಯರಿಗೆ ಹಾರ್ಟ್‌ ಇಮೋಜಿ ಕಳಿಸೋರೇ ಎಚ್ಚರ: ನಿಮಗೆ ಜೈಲು ಶಿಕ್ಷೆಯಾಗ್ಬೋದು!

ಸಾಮಾಜಿಕ ಜಾಲತಾಣದಲ್ಲಿ ಯುವತಿಗೆ ನೃತ್ಯ ಶಿಕ್ಷಕ ಜಾರ್ಜ್‌ ಪರಿಚಯವಾಗಿದ್ದು, ಬಳಿಕ ಇಬ್ಬರೂ ಪ್ರೀತಿಸುತ್ತಿದ್ದರು. ಆದರೆ, ಪ್ರೀತಿ ಹೆಸರಲ್ಲಿ ನೃತ್ಯ ಶಿಕ್ಷಕ ವಿಕೃತ್ಯ ಕಾಮ ಕೃತ್ಯ ನಡೆಸಿದ್ದಾರೆ. ಯುವತಿ ಮೇಲೆ ಮೂವರು ಅತ್ಯಾಚಾರ ಮಾಡಿದ್ದಾರೆ. ಈ ಮೂವರು ಪ್ರತ್ಯೇಕವಾಗಿಯೂ ರೇಪ್‌ ಮಾಡಿದ್ದಾರೆ ಎಂದು ಯುವತಿ ದೂರು ನೀಡಿದ್ದು, ಈ ಸಂಬಂಧ ಆ್ಯಂಡಿ ಜಾರ್ಜ್, ಸಂತೋಷ್, ಶಶಿ ಸೇರಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. 

ಘಟನೆಯ ವಿವರ..

ಖಾಸಗಿ ಶಾಲೆಯ ಡ್ಯಾನ್ಸಿಂಗ್ ಟೀಚರ್ ಆಗಿರುವ ಆ್ಯಂಡಿ ಜಾರ್ಜ್‌ಗೆ ಎರಡು ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಯುವತಿ ಪರಿಚಯವಾಗಿದ್ದಳು ಎಂದು ತಿಳಿದುಬಂದಿದೆ. ಆಕೆಯೊಂದಿಗೆ ಪ್ರೀತಿ ಹೆಸರಲ್ಲಿ ಆ್ಯಂಡಿ ಜಾರ್ಜ್ ಸುತ್ತಾಡಿದ್ದು, ಈ ವೇಳೆ ಆಕೆಯ ಜೊತೆ ಕೆಲ ಖಾಸಗಿ ಫೋಟೊಗಳನ್ನು ಆತ ಸೆರೆ ಹಿಡಿದಿದ್ದಾನೆ. 

ಇದನ್ನೂ ಓದಿ: 3 ದಿನಗಳ ಕಾಲ ಲಿಫ್ಟ್‌ನಲ್ಲಿ ಸಿಲುಕಿ ಮೃತಪಟ್ಟ ಮಹಿಳೆ: ಸಹಾಯಕ್ಕೆ ಕಿರುಚಿದ್ರೂ ನೆರವಿಗೆ ಬಾರದ ಜನ!

ಬಳಿಕ ಅದೇ ಫೋಟೋ ಬಳಸಿಕೊಂಡು ಆಕೆಗೆ ಬೆದರಿಕೆ ಹಾಕಲು ಆರಂಭಿಸಿದ್ದಾನೆ. ಇದರಿಂದ ಆತಂಕಗೊಂಡು ಯುವತಿ ಆತನಿಂದ ದೂರಾಗಿದ್ದಳು. ಆದರೂ, ಫೋಟೋಗಳನ್ನು ಶೇರ್ ಮಾಡೊದಾಗಿ ಬೆದರಿಸಿ ಅತ್ಯಾಚಾರ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ, ಅತ್ಯಾಚಾರದ ವೇಳೆ ಮೊಬೈಲ್ ವಿಡಿಯೋಗಳನ್ನು ಸಹ ಆರೋಪಿ ಮಾಡಿಕೊಂಡಿದ್ದಾನೆ.

ಇದೇ ರೀತಿ ಹಲವು ಬಾರಿ ಬೆದರಿಸಿ ಯುವತಿ ಮೇಲೆ ಅತ್ಯಾಚಾರ ಮಾಡಿದ್ದಾನೆ ಅನ್ನೋ ಆರೋಪವೂ ಕೇಳಿಬಂದಿದೆ. ಬಳಿಕ ಆತನ ಗೆಳೆಯರಿಂದಲೂ ಸಹ ಅತ್ಯಾಚಾರವಾಗಿದೆ ಎಂದೂ ಯುವತಿ ಆರೋಪಿಸಿದ್ದಾಳೆ. ಪ್ರತ್ಯೇಕವಾಗಿ ಇಬ್ಬರೂ ಗೆಳೆಯರನ್ನು ಕರೆಸಿಕೊಂಡು ಯುವತಿಗೆ ಬೆದರಿಕೆ ಹಾಕಿ ಅತ್ಯಾಚಾರ ನಡೆದಿದೆ ಎಂದು ಸಂತ್ರಸ್ತೆ ಹೇಳಿಕೊಂಡಿದ್ದಾಳೆ. ಬಳಿಕ ಆ್ಯಂಡಿ ಜಾರ್ಜ್‌ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಮಾಡಿದ್ದು, ಇದಾದ ಬಳಿಕ ನೊಂದ ಯುವತಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾಳೆ. 

ಇದನ್ನೂ ಓದಿ: ನಿರುದ್ಯೋಗಿ ಪತ್ನಿಗೆ ಕಂಪನಿ ದುಡ್ಡಿಂದ 10 ವರ್ಷ ಕಾಲ ಸಂಬಳ: 4 ಕೋಟಿ ರೂ. ವಂಚಿಸಿದ ಖತರ್‌ನಾಕ್‌ ಉದ್ಯೋಗಿ!

ದೂರು ಹಿನ್ನೆಲೆ ಬೆಂಗಳೂರಿನ ಕೊಡಿಗೆಹಳ್ಳಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಆರೋಪಿಗಳ ಬಳಿ ಇದ್ದ ಮೊಬೈಲ್, ಪೆನ್ ಡ್ರೈವ್ ಸೇರಿದಂತೆ ಟೆಕ್ನಿಕಲ್ ಸಾಕ್ಷಿಗಳನ್ನು ವಶಕ್ಕೆ ಪಡೆಯಲಾಗಿದೆ. ಮತ್ತೊಂದೆಡೆ, ಖಾಸಗಿ ಶಾಲೆಯಲ್ಲಿ ಆರೋಪಿ ಡ್ಯಾನ್ಸ್‌ ಟೀಚರ್‌ ಆಗಿರೋದ್ರಿಂದ ಇದೇ ಮಾದರಿ ಬೇರೆ ಕೃತ್ಯಗಳು ನಡೆಸಿದ್ದಾನ ಎಂಬ ಬಗ್ಗೆಯೂ ತನಿಖೆ ನಡೆದಿದೆ. ಆದರೆ, ಮೇಲ್ನೋಟಕ್ಕೆ ಇದೊಂದೇ ಪ್ರಕರಣದಲ್ಲಿ ಭಾಗಿಯಾಗಿರೋದು ಪತ್ತೆಯಾಗಿದ್ದು, ಸದ್ಯ ಕೊಡಿಗೆಹಳ್ಳಿ ಪೊಲೀಸರು ತಮ್ಮ ತನಿಖೆಯನ್ನು ಮುಂದುವರಿಸಿದ್ದಾರೆ ಎಂದು ತಿಳಿದುಬಂದಿದೆ. 

ಇದನ್ನೂ ಓದಿ: BENGALURU: ಟೆಕ್ಕಿಗೆ ಯುವತಿಯ ಬೆತ್ತಲೆ ವಿಡಿಯೋ ಕಾಲ್‌ ಆಮಿಷ: 1.1 ಕೋಟಿ ರೂ. ವಂಚನೆ ಮಾಡಿದ ನಕಲಿ 'ವಧು'!

Latest Videos
Follow Us:
Download App:
  • android
  • ios