ರಾಜ್ಯದಲ್ಲಿ ಮತ್ತೊಂದು ದುರ್ಘಟನೆ: ಒಂದೇ ಕುಟುಂಬದ ಮೂವರ ಆತ್ಮಹತ್ಯೆ
* ದಾವಣಗೆರೆ ನಗರದ ಭಾರತ್ ಕಾಲೋನಿಯಲ್ಲಿ ನಡೆದ ಘಟನೆ
* ಪತ್ನಿಯ ಅನಾರೋಗ್ಯದಿಂದ ಬೇಸತ್ತಿದ್ದ ಕುಟುಂಬ
* ಆಸ್ಪತ್ರೆ ಖರ್ಚು ವೆಚ್ಚಕ್ಕೆ ಹೆದರಿದ ಕುಟುಂಬ ಆತ್ಮಹತ್ಯೆಗೆ ಶರಣಾಗಿರುವ ಶಂಕೆ
ದಾವಣಗೆರೆ(ಸೆ.20): ರಾಜಧಾನಿ ಬೆಂಗಳೂರಿನಲ್ಲಿ ನಡೆದ ಒಂದೇ ಕುಟುಂಬದ ಐವರ ಆತ್ಮಹತ್ಯೆ ಪ್ರಕರಣ ಮಾಸುವ ಮುನ್ನವೇ ರಾಜ್ಯದಲ್ಲಿ ಮತ್ತೊಂದು ಅಂತಹದ್ದೇ ದುರ್ಘಟನೆ ನಡೆದಿದೆ. ಹೌದು, ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣಾದ ಹೃದಯವಿದ್ರಾವಹ ಘಟನೆ ನಗರದ ಭಾರತ್ ಕಾಲೋನಿಯಲ್ಲಿ ಇಂದು(ಸೋಮವಾರ) ನಡೆದಿದೆ.
"
ಕೃಷ್ಣ ನಾಯಕ(35) ಲಾರಿ ಚಾಲಕ, ಪತ್ನಿ ಸುಮಾ (30), ಮಗು ಧೃವ (6) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳಾಗಿದ್ದಾರೆ. ಪತ್ನಿಯ ಅನಾರೋಗ್ಯದಿಂದ ಕುಟುಂಬ ಬೇಸತ್ತಿತ್ತು ಎಂದು ಹೇಳಲಾಗುತ್ತಿದೆ.
ಒಂದೇ ಕುಟುಂಬದ ಐವರು ಆತ್ಮಹತ್ಯೆಗೆ ಶರಣು, ಪವಾಡಸದೃಶ ರೀತಿಯಲ್ಲಿ ಮಗು ಬಚಾವ್!
ದಾವಣಗೆರೆ ಚಿಗಟೇರಿ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ನಿರಂತರ ಅಲೆದಾಡುತ್ತಿತ್ತು ಈ ಕುಟುಂಬ. ಆಸ್ಪತ್ರೆ ಖರ್ಚು ವೆಚ್ಚಕ್ಕೆ ಹೆದರಿದ ಕುಟುಂಬ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಪತ್ನಿ ಹಾಗೂ ಮಗುವಿಗೆ ವಿಷ ಕುಡಿಸಿ ಕೃಷ್ಣನಾಯ್ಕ್ ತಾನು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ಆರ್‌ಎಂಸಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.