ಅಗ್ನಿವೀರನಾಗಲು ಹೋದ ಯುವಕ ಕೊನೆಗೆ ಆತ್ಮಹತ್ಯೆ ಮಾಡಿದ ಘಟನೆ ನಡೆದಿದೆ. ನನ್ನನ್ನು ಕ್ಷಮಿಸಿ, ನನಗೆ ಸರ್ಕಾರಿ ಕೆಲಸ ಸಿಗಲಿಲ್ಲ. ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಸ್ಟೇಟಸ್ ಹಾಕಿ ಯುವಕ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತ ವಿವರ ಇಲ್ಲಿವೆ.
ಆಗ್ರಾ(ಆ.03): ನನ್ನನ್ನು ಕ್ಷಮಿಸಿ ಅಪ್ಪ, ಅಪ್ಪ. ನಿಮ್ಮಷ್ಟು ಒಳ್ಳೆಯವರನ್ನು ನಾಡಿ ನೋಡಿಲ್ಲ, ಭೇಟಿಯಾಗಿಲ್ಲ. ನನಗೆ ಸರ್ಕಾರಿ ಕೆಲಸ ಸಿಗಲಿಲ್ಲ. ನಾನು ಆತ್ಯೆಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಇದು ಅಗ್ನಿವೀರನಾಗಲು ಹೊರಟ ಯುವಕನ ಡೆತ್‌ನೋಟ್. ಆಗ್ರಾ ನಿವಾಸಿಯಾಗಿರುವ ಕರ್ಮವೀರ್ ಸಿಂಗ್ ತನ್ನ ವ್ಯಾಟ್ಸ್ಆ್ಯಪ್ ಸ್ಟೇಟಸ್ ಹಾಕಿ ನಿನ್ನೆ(ಆ.02) ರಾತ್ರಿ ಯಮುನಾ ನದಿಹೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಳಗ್ಗೆಯಿಂದಲೇ ಪುತ್ರನ ಕಾಣದ ಪೋಷಕರು ಕಂಗಾಲಾಗಿ ಸಂಜೆ ವೇಳೆ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದಲ್ಲಿ ಕರ್ಮವೀರ್ ಸಿಂಗ್ ಮೊಬೈಲ್ ಟವರ್ ಲೊಕೇಶನ್ ಆಧರಿಸಿ ಪೊಲೀಸರು ಪತ್ತೆಗಾಗಿ ಮುಂದಾಗಿದ್ದಾರೆ. ಈ ವೇಳೆ ನಂಗ್ಲಾ ತಾಲ್ಫಿ ಗ್ರಾಮದ ಯಮುನಾ ನದಿ ಬಳಿ ಮೊಬೈಲ್ ಹಾಗೂ ಚಪ್ಪಲಿ ಪತ್ತೆಯಾಗಿದೆ. ಈತನ ವ್ಯಾಟ್ಸ್ಆ್ಯಪ್ ಸ್ಟೇಟಸ್‌ನಲ್ಲಿ ಡೆತ್ ನೋಟ್ ಬರೆದಿತ್ತು ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ.
ನಿರಂತರ ಮಳೆ ಸುರಿಯುತ್ತಿರುವುದರಿಂದ ಯಮುನಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಇಷ್ಟೇ ಅಲ್ಲ ರಾತ್ರಿ ವೇಳೆ ಯಮುನಾ ನದಿಯಲ್ಲಿ ಶೋಧ ಕಾರ್ಯ ನಡೆಸಲು ಸಾಧ್ಯವಾಗಿಲ್ಲ. ಇಂದು(ಆ.03) ಬೆಳಗ್ಗೆಯಿಂದ ಕರ್ಮವೀರ್ ಸಿಂಗ್‌ಗಾಗಿ ಶೋಧಕಾರ್ಯ ನಡೆಸಲಾಗುತ್ತಿದೆ. ಹೆಚ್ಚಿನ ಹರಿವು ಇರುವುದರಿಂದ ಶೋಧ ಕಾರ್ಯಕ್ಕೂ ಅಡ್ಡಿಯಾಗಿದೆ. ಇತ್ತ ಪುತ್ರನ ಆತ್ಮಹತ್ಯೆಯಿಂದ ಪೋಷಕರು ಆಘಾತಕ್ಕೊಳಗಾಗಿದ್ದಾರೆ.
Hubballi: ಮಗ ಜೈಲುಪಾಲಾದ್ದರಿಂದ ನೊಂದು ತಾಯಿ ಆತ್ಮಹತ್ಯೆ
ಕರ್ಮವೀರ್ ಸಿಂಗ್ ಭಾರತೀಯ ಸೇನೆಗೆ ಸೇರಲು ಸತತ ಪರಿಶ್ರಮ ಪಟ್ಟಿದ್ದ. ಆದರೆ ಲಿಖಿತ ಪರೀಕ್ಷೆ ಸೇರಿದಂತೆ ದೈಹಿಕ ಪರೀಕ್ಷೆಗಳಲ್ಲಿ ಕರ್ಮವೀರ್ ಸಿಂಗ್ ಅನುತ್ತೀರ್ಣನಾಗಿದ್ದ. ಸತತ ಪ್ರಯತ್ನ ನಡೆಸಿದ್ದರೂ ಸೇನೆಯಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಕರ್ಮವೀರ್ ಸಿಂಗ್ ನಡೆಸಿದ ಪ್ರಯತ್ನ ವಿಫಲವಾಗಿದೆ. ಇದರಿಂದ ಬೇಸತ್ತ ಕರ್ಮವೀರ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ರಾತ್ರಿ 10.20 ರ ಸುಮಾರಿಗೆ ಕರ್ಮವೀರ್ ಸಿಂಗ್ ವ್ಯಾಟ್ಸ್ಆ್ಯಪ್ ಸ್ಟೇಟಸ್ ಹಾಕಿದ್ದಾನೆ. ಹೀಗಾಗಿ ಸುಮಾರು ರಾತ್ರಿ 10.30ರ ವೇಳೆಗೆ ಈ ಘಟನೆ ನಡೆದಿರುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದಾರೆ.
ಇಂದು ಬೆಳಗ್ಗೆ ಗ್ರಾಮಸ್ತರು ಯಮುನಾ ನದಿ ಬಳಿ ಜಮಾಯಿಸಿದ್ದಾರೆ. ಕರ್ಮವೀರ್ ಸಿಂಗ್‌ಗೆ ಸರಿಯಾಗಿ ಈಜು ಬರುವುದಿಲ್ಲ. ಜೊತೆಗೆ ಯಮುನಾ ನದಿ ಉಕ್ಕಿ ಹರಿಯುತ್ತಿದೆ. ಹೀಗಾಗಿ ಬದುಕುಳಿಯುವ ಸಾಧ್ಯತೆ ಇಲ್ಲ ಎಂದು ಸ್ಥಳೀಯರು ಹೇಳಿದ್ದಾರೆ. ಕೆಲಸ ಸಿಗದೆ ಹೊರೆಯಾಗಿದ್ದೇನೆ ಅನ್ನೋ ಕೊರಗು ಯುವಕನಲ್ಲಿ ಪದೇ ಪದೇ ಕಾಡುತ್ತಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.
ಕೌಟುಂಬಿಕ ಕಲಹ: ಮನನೊಂದ ತಾಯಿ 2 ವರ್ಷದ ಮಗುವಿನ ಜತೆ ಆತ್ಮಹತ್ಯೆ!
ಅಬಕಾರಿ ಉಪ ನಿರೀಕ್ಷಕ ಆತ್ಮಹತ್ಯೆ
ದಾಂಡೇಲಿ ನಗರದ ಹಳೇ ಸಿಎಂಸಿ ಕಟ್ಟಡದಲ್ಲಿನ ಅಬಕಾರಿ ಇಲಾಖೆಯ ಕಚೇರಿಯಲ್ಲೇ ಅಬಕಾರಿ ಉಪ ನಿರೀಕ್ಷಕ ಗಣೇಶ ವಾಸುದೇವ ವೈದ್ಯ (56) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ತಡರಾತ್ರಿ ನಡೆದಿದೆ. ಘಟನೆಯು ಶುಕ್ರವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಮೃತರು ಅವಿವಾಹಿತರಾಗಿದ್ದು, ಕಳೆದ 25 ವರ್ಷಗಳಿಂದ ಅಬಕಾರಿ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಮೇಲಧಿಕಾರಿಯ ಕಿರುಕುಳ ಸಹಿಸದೇ ಹಾಗೂ ತಾನು ಕೊಟ್ಟಹಣ ವಾಪಸ್ ಕೊಡುವಂತೆ ಕೇಳಿದಾಗ ಹಣ ಮರಳಿಸದೇ ಇದ್ದ ಕಾರಣಕ್ಕೆ ಕಚೇರಿಯಲ್ಲಿಯೇ ಮನನೊಂದು ನೇಣಿಗೆ ಶರಣಾಗಿದ್ದಾನೆ ಎಂದು ಮೃತನ ಸಹೋದರ ಯಶವಂತ ವಾಸುದೇವ ವೈದ್ಯ ದೂರಿನಲ್ಲಿ ತಿಳಿಸಿದ್ದಾರೆ.
