Farmers Loan: ಅಕಾಲಿಕ ಮಳೆಗೆ ಬೆಳೆನಷ್ಟ: ಮತ್ತಿಬ್ಬರು ರೈತರು ಆತ್ಮಹತ್ಯೆ

*  ರಾಜ್ಯದಲ್ಲಿ ಮತ್ತಿಬ್ಬರು ರೈತರು ಆತ್ಮಹತ್ಯೆಗೆ ಶರಣು
*  ಕೃಷಿಗಾಗಿ ಸಾಲ ಮಾಡಿಕೊಂಡಿದ್ದ ಅನ್ನದಾತರು
*  ಮರಣಪತ್ರ ಬರೆದಿಟ್ಟು ಫೈನಾನ್ಷಿಯರ್‌ ಆತ್ಮಹತ್ಯೆ
 

Again Two Farmers Committed Suicide For Crop Damage Due to Rain in Karnataka grg

ಬೆಂಗಳೂರು(ಡಿ.04): ಇತ್ತೀಚೆಗೆ ಸುರಿದ ಅಕಾಲಿಕ ಮಳೆಗೆ(Untimely Rain) ಬೆಳೆ ನಷ್ಟವಾಗಿ ರಾಜ್ಯದಲ್ಲಿ ಮತ್ತಿಬ್ಬರು ರೈತರು(Farmers) ಆತ್ಮಹತ್ಯೆಗೆ(Suicide) ಶರಣಾಗಿದ್ದಾರೆ. ಬೆಳಗಾವಿ(Belagavi) ತಾಲೂಕಿನ ಚಂದನಹೊಸೂರ ಗ್ರಾಮದ ರಮೇಶ ಯಲ್ಲಪ್ಪ ತಳವಾರ(45) ಮತ್ತು ಬಳ್ಳಾರಿ(Ballari) ಜಿಲ್ಲೆ ಕುರಗೋಡು ತಾಲೂಕಿನ ಮದಿರೆ ಗ್ರಾಮದ ಮೋಹನ್(34) ಆತ್ಮಹತ್ಯೆ ಮಾಡಿಕೊಂಡ ರೈತರು. 

ರಮೇಶ ಯಲ್ಲಪ್ಪ ತಳವಾರ ಕೃಷಿ(Agriculture) ಚಟುವಟಿಕೆಗಾಗಿ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಲ್ಲಿ ಸುಮಾರು 10 ಲಕ್ಷಕ್ಕೂ ಅಧಿಕ ಸಾಲ(Loan) ಮಾಡಿಕೊಂಡಿದ್ದರು. ಬೆಳೆಗೆ ಬೆಲೆ ಸಿಗದೆ ಮತ್ತು ಅಕಾಲಿಕ ಮಳೆಯಿಂದಾಗಿ ಬೆಳೆ(Crop DamageP) ನಷ್ಟವಾಗಿ ಸಾಲ ತೀರಿಸಲಾಗದೆ ಮನನೊಂದು ಅವರು ಶುಕ್ರವಾರ ನೇಣಿಗೆ ಶರಣಾಗಿದ್ದಾರೆ. 

Farmers Suicide: ರೈತರ ಆತ್ಮಹತ್ಯೆಯಲ್ಲಿ ಮಹಾರಾಷ್ಟ್ರ ನಂ.1: ಕರ್ನಾಟಕಕ್ಕೆ ಎರಡನೇ ಸ್ಥಾನ!

ಇನ್ನು 11.9 ಎಕರೆ ಭೂಮಿಯಲ್ಲಿ ಮೆಣಸಿನಕಾಯಿ ಬೆಳೆದಿದ್ದ ಮೋಹನ್ ಒಟ್ಟು 12 ಲಕ್ಷ ಸಾಲ ಮಾಡಿಕೊಂಡಿದ್ದರು. ಈಚೆಗೆ ಸುರಿದ ಅಕಾಲಿಕ ಮಳೆಯಿಂದ ಬೆಳೆ ನಾಶವಾಗಿದ್ದರಿಂದ ಮನನೊಂದಿದ್ದ ಮೋಹನ್ ಗುರುವಾರ ರಾತ್ರಿ ವಿಷ(Poison) ಸೇವಿಸಿದ್ದು ಶುಕ್ರವಾರ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಸಾಲಗಾರರ ಕಿರುಕುಳ: ಮರಣಪತ್ರ ಬರೆದಿಟ್ಟು ಫೈನಾನ್ಷಿಯರ್‌ ನೇಣಿಗೆ ಶರಣು

ಬೆಂಗಳೂರು(Bengaluru):  ಸಾಲಗಾರರ ಕಿರುಕುಳ ತಾಳಲಾರದೆ ಫೈನಾನ್ಷಿಯರ್‌(Financier) ಮರಣಪತ್ರ(Deathnote) ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ಕುಮಾರಸ್ವಾಮಿ ಲೇಔಟ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ತಲಘಟ್ಟಪುರ ನಿವಾಸಿ ರಾಜಣ್ಣ(49) ಮೃತ ದುರ್ದೈವಿ. ಯಲಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಕಚೇರಿಗೆ ಬೆಳಗ್ಗೆ 7ರ ಸುಮಾರಿಗೆ ಬಂದಿರುವ ರಾಜಣ್ಣ, ಬಟ್ಟೆಯನ್ನು ಫ್ಯಾನಿಗೆ ಕಟ್ಟಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗ್ಗೆ 10ರ ಸುಮಾರಿಗೆ ಕೆಲಸಗಾರ ಕಚೇರಿಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಮೃತದೇಹವನ್ನು(Deadbody) ಮರಣೋತ್ತರ ಪರೀಕ್ಷೆಗೆ(Post-Mortem) ಕಳುಹಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ರಾಜಣ್ಣ ಫ್ಯಾಬ್ರಿಕೇಶನ್‌ ವೆಲ್ಡಿಂಗ್‌ ಶಾಪ್‌ ಇರಿಸಿಕೊಂಡಿದ್ದರು. ಕಳೆದ ಹಲವು ವರ್ಷಗಳಿಂದ ಚೀಟಿ ಹಾಗೂ ಫೈನಾನ್ಸ್‌ ವ್ಯವಹಾರ(Finance Business) ಸಹ ಮಾಡುತ್ತಿದ್ದರು. ಸಾಲದ ರೂಪದಲ್ಲಿ ಹಲವರಿಗೆ ಹಣ ನೀಡಿದ್ದರು. ಆದರೆ, ಹಣ ಪಡೆದವರು ಸಕಾಲಕ್ಕೆ ಹಿಂದಿರುಗಿಸಿರಲಿಲ್ಲ ಎನ್ನಲಾಗಿದೆ. ಹೀಗಾಗಿ ರಾಜಣ್ಣ ಅವರ ಹಣಕಾಸು ವ್ಯವಹಾರ ಏರುಪೇರಾಗಿತ್ತು. ರಾಜಣ್ಣ ಅವರು ಕೆಲವರಿಂದ ಹಣ ಸಾಲ ಪಡೆದಿದ್ದರು. ಈ ಸಾಲದ ಹಣ ಹಿಂದಿರುಗಿಸುವಂತೆ ಪದೇ ಪದೇ ಒತ್ತಡ ಹಾಕುತ್ತಿದ್ದರು ಎಂದು ತಿಳಿದು ಬಂದಿದೆ.

Karnataka Farmers Suicide : ಅಕಾಲಿಕ ಮಳೆಗೆ ಬೆಳೆ ನಷ್ಟ: ಈ ವರೆಗೆ 7 ರೈತರ ಆತ್ಮಹತ್ಯೆ

ಹಣಕಾಸು ವಿಚಾರವಾಗಿ ಕೆಲವರು ರಾಜಣ್ಣ ವಿರುದ್ಧ ಸಿಸಿಬಿಗೂ(CCB) ದೂರು ನೀಡಿದ್ದರು. ಅದರಂತೆ ಕೆಲ ದಿನಗಳ ಹಿಂದೆ ಸಿಸಿಬಿ ಪೊಲೀಸರು ರಾಜಣ್ಣ ಅವರನ್ನು ಕರೆಸಿ ವಿಚಾರಣೆ ಸಹ ಮಾಡಿದ್ದರು. ಇದರ ನಡುವೆ ಸಾಲಗಾರರ ಕಿರುಕುಳ ಹೆಚ್ಚಾಗಿದ್ದು, ಮನನೊಂದ ರಾಜಣ್ಣ ಅವರು ಮರಣ ಪತ್ರ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ನಿತಿನ್‌ ಸೇರಿದಂತೆ ನಾಲ್ಕೈದು ಮಂದಿ ಹಣಕಾಸು ವಿಚಾರವಾಗಿ ಪತಿ ರಾಜಣ್ಣ ಅವರಿಗೆ ನಿರಂತರ ಕಿರುಕುಳ(Harassment) ನೀಡುತ್ತಿದ್ದರು. ಕೆಲ ದಿನಗಳ ಹಿಂದೆ ಧಮಕಿ ಹಾಕಿ ಆತ್ಮಹತ್ಯೆಗೆ ಪ್ರಚೋದಿಸಿದ್ದರು ಎಂದು ರಾಜಣ್ಣ ಅವರ ಪತ್ನಿ ದೂರು ನೀಡಿದ್ದಾರೆ ಪೊಲೀಸರು ತಿಳಿಸಿದ್ದಾರೆ.

ರಾಜಣ್ಣ ಅವರ ಪತ್ನಿ ದೂರಿನಲ್ಲಿ ನಿತಿನ್‌ ಸೇರಿದಂತೆ ನಾಲ್ಕೈದು ಮಂದಿಗೆ ಶೀಘ್ರದಲ್ಲೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ಜಾರಿಗೊಳಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಕುಮಾರಸ್ವಾಮಿ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

Latest Videos
Follow Us:
Download App:
  • android
  • ios