Mangaluru: ‘ಗಾಂಜಾ ಡಾಕ್ಟರ್‌’ಗಳ ಕರ್ಮಕಾಂಡ ಬಯಲು: ಮತ್ತೆ 3 ಮಂದಿ ಬಂಧನ

ಮಂಗಳೂರಿನ ಪ್ರತಿಷ್ಠಿತ ಮೂರು ವೈದ್ಯಕೀಯ ಕಾಲೇಜಿನ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ಭಾಗಿಯಾಗಿರುವ ನಿಷೇಧಿತ ಮಾದಕ ವಸ್ತು ಗಾಂಜಾ ಮಾರಾಟ ಮತ್ತು ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೊಂದೇ ಸಂಗತಿಗಳು ಬಯಲಾಗುತ್ತಿದ್ದು, ಮತ್ತಿನ ಲೋಕದ ಭಯಾನಕ ಚಿತ್ರಣಗಳು ಹೊರಬೀಳುತ್ತಿವೆ. 

Again 3 medical college students arrested for selling drugs in Mangaluru gvd

ಮಂಗಳೂರು (ಜ.13): ಮಂಗಳೂರಿನ ಪ್ರತಿಷ್ಠಿತ ಮೂರು ವೈದ್ಯಕೀಯ ಕಾಲೇಜಿನ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ಭಾಗಿಯಾಗಿರುವ ನಿಷೇಧಿತ ಮಾದಕ ವಸ್ತು ಗಾಂಜಾ ಮಾರಾಟ ಮತ್ತು ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೊಂದೇ ಸಂಗತಿಗಳು ಬಯಲಾಗುತ್ತಿದ್ದು, ಮತ್ತಿನ ಲೋಕದ ಭಯಾನಕ ಚಿತ್ರಣಗಳು ಹೊರಬೀಳುತ್ತಿವೆ. ವೈದ್ಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಮತ್ತು ವೈದ್ಯರು ‘ಲಿವಿಂಗ್‌ ಟುಗೆದರ್‌’ ಹೆಸರಿನಲ್ಲಿ ಪಿ.ಜಿ., ಹಾಸ್ಟೆಲ್‌ ಬಿಟ್ಟು, ಅಪಾರ್ಟ್‌ಮೆಂಟ್‌ಗಳಲ್ಲಿ ವಾಸ ಮಾಡುತ್ತಿದ್ದರು. ಅಲ್ಲಿ ವಿದ್ಯಾರ್ಥಿಗಳು ತಮ್ಮ ಗರ್ಲ್‌ಫ್ರೆಂಡ್‌ಗಳಿಗೆ ಗಾಂಜಾದ ರುಚಿ ತೋರಿಸುತ್ತಿದ್ದರು.

ಅಲ್ಲದೆ, ಸ್ಥಳೀಯರೇ ಇವರಿಗೆಲ್ಲಾ ಡ್ರಗ್ಸ್‌ ಪೂರೈಸುತ್ತಿದ್ದರು. ಕೇರಳದ ಕಾಸರಗೋಡು, ಗೋವಾ, ಮಹಾರಾಷ್ಟ್ರದಿಂದ ರೈಲಿನಲ್ಲಿ ಮಂಗಳೂರಿಗೆ ಗಾಂಜಾ ಪೂರೈಕೆಯಾಗುತ್ತಿತ್ತು. ಬಂಧಿತ ಆರೋಪಿಗಳು ಆನ್‌ಲೈನ್‌ ಮೂಲಕವೂ ಮಾದಕದ್ರವ್ಯ ಪೂರೈಕೆಗೆ ಬುಕ್ಕಿಂಗ್‌ ಮಾಡುತ್ತಿದ್ದರು. ಇ-ಮೇಲ್‌, ವಾಟ್ಸಪ್‌ನಲ್ಲೂ ಡ್ರಗ್ಸ್‌ ಬುಕ್ಕಿಂಗ್‌ ದಂಧೆ ನಡೆಯುತ್ತಿತ್ತು. ಗಾಂಜಾ ಮತ್ತು ಸಿಂಥೆಟಿಕ್‌ ಡ್ರಗ್ಸ್‌ಗಳಾದ ಎಂಡಿಎಂಎ, ಕೊಕೇನ್‌, ಚರಸ್‌, ಹಶೀಶ್‌ಗಳನ್ನು ಇವರು ಯಥೇಚ್ಛವಾಗಿ ಪೂರೈಕೆ ಮಾಡುತ್ತಿದ್ದರು ಎಂಬುದು ಪೊಲೀಸ್‌ ತನಿಖೆ ವೇಳೆ ತಿಳಿದು ಬಂದಿದೆ.

ಮಂಗಳೂರಲ್ಲಿ ಗಾಂಜಾ ದಂಧೆ ಬಯಲು: ಮೆಡಿಕಲ್‌ ವಿದ್ಯಾರ್ಥಿನಿಯರ ಸಹಿತ ಹಲವರ ಬಂಧನ..!

ಮತ್ತೆ ಮೂವರ ಬಂಧನ: ಈ ಮಧ್ಯೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಗುರುವಾರ ಮತ್ತೆ ಮೂವರನ್ನು ಬಂಧಿಸಿದ್ದಾರೆ. ಇದರೊಂದಿಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ. ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನ ಅಂತಿಮ ವರ್ಷದ ಪೆಥೊಲಾಜಿ ವಿಭಾಗದ ಎಂ.ಡಿ.ವಿದ್ಯಾರ್ಥಿ, ತುಮಕೂರು ಮೂಲದ ಡಾ.ಹರ್ಷ ಕುಮಾರ್‌, ಡಿ ಫಾರ್ಮಾ ವಿದ್ಯಾರ್ಥಿ, ಕೇರಳದ ಕೊಚ್ಚಿನ್‌ ಮೂಲದ ಅಡಾನ್‌ ದೇವ್‌ ಮತ್ತು ಮಂಗಳೂರು ಕಸಬ ಬೆಂಗರೆ ನಿವಾಸಿ, ಹಣ್ಣು ಹಂಪಲು ಮಾರಾಟ ಅಂಗಡಿಯಲ್ಲಿ ಕೆಲಸ ಮಾಡುವ ಮುಹಮ್ಮದ್‌ ಅಫ್ರಾನ್‌ (23) ಬಂಧಿತರು.

ಗಾಂಜಾ ಮಾರಾಟ ಮತ್ತು ಸೇವನೆ ಜಾಲಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಈಗಾಗಲೇ 10 ಮಂದಿಯನ್ನು ಬಂಧಿಸಿದ್ದಾರೆ. ಈ ಪೈಕಿ ನಾಲ್ವರು ಯುವತಿಯರು. ಯು.ಕೆ.ಮೂಲದ ಸಾಗರೋತ್ತರ ಭಾರತೀಯ ಪ್ರಜೆ ಕೂಡ ಬಂಧಿತರಲ್ಲಿ ಸೇರಿದ್ದಾನೆ. ಬಂಧಿತರನ್ನು ಎರಡು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ತೆಗೆದುಕೊಳ್ಳಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ. ಬಂಧಿತರು ವಿಚಾರಣೆ ವೇಳೆ ನೀಡಿದ ಮಾಹಿತಿಯಂತೆ ಪೊಲೀಸರು ಗುರುವಾರ ಮತ್ತೆ ಮೂವರನ್ನು ಬಂಧಿಸಿದ್ದಾರೆ.

ಬಂಧಿತ ಮುಹಮ್ಮದ್‌ ಅಫ್ರಾನ್‌, ಡ್ರಗ್‌ ಡೀಲ್‌ ಮಾಡುತ್ತಿದ್ದ. ಅಲ್ಲದೆ, ಬಂಧಿತ ಬಂಟ್ವಾಳ ಮಾರಿಪಳ್ಳದ ರವೂಫ್‌ ಯಾನೆ ಗೌಸ್‌ನಿಂದಲೂ ಗಾಂಜಾ ಪೂರೈಕೆಯಾಗುತ್ತಿತ್ತು. ಪ್ರಮುಖ ಆರೋಪಿ ಕಿಶೋರಿ ಲಾಲ್‌ಗೆ ರವೂಫ್‌ ಮತ್ತು ಮುಹಮ್ಮದ್‌ ಅಫ್ರಾನ್‌ ಗಾಂಜಾ ಪೂರೈಕೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಇವರಿಬ್ಬರು ವೈದ್ಯರು ಮತ್ತು ವೈದ್ಯ ವಿದ್ಯಾರ್ಥಿಗಳಿಗೆ ಹಲವು ಬಾರಿ ಗಾಂಜಾ ಪೂರೈಕೆ ಮಾಡಿದ್ದರು ಎಂಬುದು ತನಿಖೆ ವೇಳೆ ಬಯಲಾಗಿದೆ.

ಸ್ಥಳೀಯರೇ ಡ್ರಗ್‌ ಪೆಡ್ಲರ್ಸ್‌: ಗಾಂಜಾ ಆರೋಪದಲ್ಲಿ ಬಂಧಿತ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸ್ಥಳೀಯರೇ ಡ್ರಗ್‌ ಪೆಡ್ಲರ್ಸ್‌ ಆಗಿರುವುದು ಪೊಲೀಸ್‌ ತನಿಖೆಯಲ್ಲಿ ಬಯಲಾಗಿದೆ. ಬೆಂಗರೆಯಲ್ಲಿ ಬಂಧಿತ ಹಣ್ಣಿನ ವ್ಯಾಪಾರಿ ಮುಹಮ್ಮದ್‌ ಅಫ್ರಾನ್‌ ಡ್ರಗ್‌ ಡೀಲ್‌ ಮಾಡುತ್ತಿದ್ದ. ಬಂಟ್ವಾಳ ಮಾರಿಪಳ್ಳದ ರವೂಫ್‌ ಯಾನೆ ಗೌಸ್‌ನಿಂದಲೂ ಗಾಂಜಾ ಪೂರೈಕೆಯಾಗುತ್ತಿತ್ತು. ಪ್ರಮುಖ ಆರೋಪಿ ಕಿಶೋರಿ ಲಾಲ್‌ಗೆ ರವೂಫ್‌ ಮತ್ತು ಮುಹಮ್ಮದ್‌ ಅಫ್ರಾನ್‌ ಗಾಂಜಾ ಪೂರೈಕೆ ಮಾಡುತ್ತಿದ್ದುದಾಗಿ ಗೊತ್ತಾಗಿದೆ. ಇವರಿಬ್ಬರು ವೈದ್ಯರು ಮತ್ತು ವೈದ್ಯ ವಿದ್ಯಾರ್ಥಿಗಳಿಗೆ ಹಲವು ಬಾರಿ ಗಾಂಜಾ ಪೂರೈಕೆ ಮಾಡಿದ್ದರು. ಕೇರಳದ ಕಾಸರಗೋಡು, ಗೋವಾ, ಮಹಾರಾಷ್ಟ್ರದಿಂದ ರೈಲಿನಲ್ಲಿ ಮಂಗಳೂರಿಗೆ ಗಾಂಜಾ ಪೂರೈಕೆಯಾಗುತ್ತಿತ್ತು.

ಬಿಬಿಎಂಪಿಯ ಕನ್ನಡತಿ ವೈದ್ಯೆಯ ಮೇಲೆ ಮಲೆಯಾಳಿ ಯುವತಿಯ ಹಲ್ಲೆ: ಕನ್ನಡಕ್ಕೆ ಅಪಮಾನ

ಆನ್‌ಲೈನ್‌ನಲ್ಲೂ ದಂಧೆ: ಬಂಧಿತ ಆರೋಪಿಗಳು ಆನ್‌ಲೈನ್‌ ಮೂಲಕವೂ ಮಾದಕದ್ರವ್ಯ ಪೂರೈಕೆಯ ಬುಕ್ಕಿಂಗ್‌ ಮಾಡುತ್ತಿದ್ದರು. ಇ-ಮೇಲ್‌, ವಾಟ್ಸ್‌ಆ್ಯಪ್‌ನಲ್ಲೂ ಡ್ರಗ್ಸ್‌ ಬುಕ್ಕಿಂಗ್‌ ದಂಧೆ ನಡೆಯುತ್ತಿತ್ತು. ಗಾಂಜಾ ಮತ್ತು ಸಿಂಥೆಟಿಕ್‌ ಡ್ರಗ್ಸ್‌ಗಳಾದ ಎಂಡಿಎಂಎ, ಕೊಕೇನ್‌, ಚರಸ್‌, ಹಶೀಶ್‌ಗಳನ್ನು ಇವರು ಯಥೇಚ್ಛ ಪೂರೈಕೆ ಮಾಡುತ್ತಿದ್ದರು ಎಂದು ತಿಳಿಯಲಾಗಿದೆ.

Latest Videos
Follow Us:
Download App:
  • android
  • ios