ಬೆಂಗಳೂರು(ಜ.05): ಹೂಡಿಕೆ ನೆಪದಲ್ಲಿ ಜನರಿಗೆ ವಂಚಿಸುವ ಆ್ಯಪ್‌ಗಳು ನಗರದಲ್ಲಿ ತಲೆ ಎತ್ತಿದ್ದು, ನಿತ್ಯ ಹಣ ಗಳಿಕೆ ಆಸೆ ತೋರಿಸಿ ಮಹಿಳೆಯೊಬ್ಬರಿಗೆ ಕಿಡಿಗೇಡಿಗಳು ವಂಚಿಸಿರುವ ಘಟನೆ ಚಾಮರಾಜಪೇಟೆಯಲ್ಲಿ ನಡೆದಿದೆ.

ಚಾಮರಾಜಪೇಟೆಯ 57 ವರ್ಷದ ಮಹಿಳೆ ವಂಚನೆಗೆ ಒಳಗಾಗಿದ್ದು, ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ದಕ್ಷಿಣ ವಿಭಾಗದ ಸಿಇಎನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಾಮರಾಜಪೇಟೆ ಖಾಸಗಿ ಬ್ಯಾಂಕ್‌ನಲ್ಲಿ ಸಂತ್ರಸ್ತೆ ಖಾತೆ ಹೊಂದಿದ್ದಾರೆ

ಪುರುಷನ ಹೊಟ್ಟೆಯಲ್ಲಿ ಗರ್ಭ ಇದೆ ಎಂದ ಫೋರ್ಟಿಸ್‌ ಭಾರೀ ದಂಡ

 ಕೆಲ ದಿನಗಳ ಹಿಂದೆ ಅವರಿಗೆ ಕರೆ ಹಾಗೂ ಮೆಸೇಜ್‌ ಮೂಲಕ ಸಂಪರ್ಕಿಸಿದ ಅಪರಿಚಿತರು, ್ಛಟ್ಟಛ್ಡಿ ಠ್ಟಿadಜ್ಞಿಜ(ಫೋರೆಕ್ಸ್‌ ) ಕಂಪನಿಯಲ್ಲಿ 75 ಸಾವಿರ ಹಣ ಹೂಡಿಕೆ ಮಾಡಿದರೆ ನಿಮಗೆ ದಿನಕ್ಕೆ 3ರಿಂದ 5 ಸಾವಿರ ರು. ಗಳಿಸಬಹುದು ಎಂದಿದ್ದರು.

ಈ ಮಾತು ನಂಬಿದ ಮಹಿಳೆ ತಮ್ಮ ಬ್ಯಾಂಕ್‌ ಖಾತೆಯಿಂದ ಆರೋಪಿಗಳು ಸೂಚಿಸಿದ ಬ್ಯಾಂಕ್‌ ಖಾತೆಗೆ .75 ಸಾವಿರ ವರ್ಗಾಯಿಸಿದ್ದಾರೆ. ಇದಕ್ಕೆ ಶುಲ್ಕ ಹೆಸರಿನಲ್ಲಿ ಮತ್ತೆ ಕಿಡಿಗೇಡಿಗಳು ಹಣ ಪಡೆದಿದ್ದಾರೆ. ಹೀಗೆ ಒಟ್ಟಾರೆ .95 ಸಾವಿರ ಹಣ ಪಡೆದು ಮೋಸಗೊಳಿಸಿದ್ದಾರೆ ಎಂದು ಸಿಇಎನ್‌ ಠಾಣೆಯಲ್ಲಿ ಸಂತ್ರಸ್ತೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.