Shraddha Walker Murder Case: ಅಫ್ತಾಬ್‌ಗೆ ಪಾಲಿಗ್ರಾಫ್‌ ಪರೀಕ್ಷೆ ಮಾಡಲು ದೆಹಲಿ ಪೊಲೀಸರಿಗೆ ಕೋರ್ಟ್‌ ಅನುಮತಿ

ದೆಹಲಿಯ ಶ್ರದ್ಧಾ ವಾಕರ್‌ ಬರ್ಬರ ಹತ್ಯೆ ಪ್ರಕರಣ ಆರೋಪಿ ಅಫ್ತಾಬ್‌ ಅಮೀನ್‌ ಪೂನಾವಾಲಾ ಪೊಲೀಸ್‌ ಕಸ್ಟಡಿ ಅವಧಿ 4 ದಿನಗಳ ಕಾಲ ವಿಸ್ತರಿಸಲಾಗಿದೆ. ಅಲ್ಲದೆ, ಅವರಿಗೆ ಪಾಲಿಗ್ರಾಫ್‌ ಪರೀಕ್ಷೆ ಮಾಡಲು ಕೋರ್ಟ್‌ ಅನುಮತಿ ನೀಡಿದೆ. 

delhi police gets court permission to conduct polygraph test on aftab poonawala police custody extended ash

ದೆಹಲಿಯ (Delhi) ಶ್ರದ್ಧಾ ವಾಕರ್‌ (Shraddha Walkar) ಬರ್ಬರ ಹತ್ಯೆ ಪ್ರಕರಣ (Murder Case) ಆರೋಪಿ ಅಫ್ತಾಬ್‌ ಅಮೀನ್‌ ಪೂನಾವಾಲಾಗೆ (Aftab Poonawala) ಪಾಲಿಗ್ರಾಫ್‌ ಪರೀಕ್ಷೆ (Polygraph Test) ಮಾಡಲು ದೆಹಲಿ ಪೊಲೀಸರಿಗೆ (Delhi Police) ಕೋರ್ಟ್‌ (Court) ಅನುಮತಿ ನೀಡಿದೆ. ಶ್ರದ್ಧಾಳನ್ನು ಕೊಲೆ ಮಾಡಿ ಆಕೆಯ ಮೃತದೇಹವನ್ನು 35 ತುಂಡುಗಳನ್ನಾಗಿ ಮಾಡಿ ಕ್ರೌರ್ಯ ಮೆರೆದಿದ್ದ ಪ್ರಕರಣ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಈ ಪ್ರಕರಣದ ಆರೋಪಿ ಅಫ್ತಾಬ್‌ಗೆ ಪಾಲಿಗ್ರಾಫ್‌ ಪರೀಕ್ಷೆ ಮಾಡಲು ಕೋರ್ಟ್‌ ಅನುಮತಿ ನೀಡಿದೆ ಎಂದು ದೆಹಲಿ ಪೊಲೀಸ್‌ ಮೂಲಗಳು ಮಾಹಿತಿ ನೀಡಿವೆ. ನವೆಂಬರ್ 21 ರಂದು, ಅಂದರೆ ಸೋಮವಾರ ದೆಹಲಿ ಪೊಲೀಸರು ಈ ಸಂಬಂಧ ಅರ್ಜಿ (Application) ಸಲ್ಲಿಸಿದ್ದರು. ಅಲ್ಲದೆ, ಪೊಲೀಸ್ ಕಸ್ಟಡಿ ಅವಧಿಯನ್ನು ಮತ್ತೆ 4 ದಿನಗಳ ಕಾಲ ವಿಸ್ತರಿಸಲಾಗಿದೆ.

ಪಾಲಿಗ್ರಾಫ್‌ ಟೆಸ್ಟ್‌ ಅಂದ್ರೇನು..?  
ಇನ್ನು, ಈ ಪಾಲಿಗ್ರಾಫ್‌ ಪರೀಕ್ಷೆ ಅಂದರೇನು ಎಂಬ ಬಗ್ಗೆ ನಿಮಗೆ ಅನುಮಾನಗಳಿರಬೇಕು ಅಲ್ಲವೇ..? ಪಾಲಿಗ್ರಾಫ್‌ ಪರೀಕ್ಷೆ ಆಕ್ರಮಣಕಾರಿಯಲ್ಲದ ತಂತ್ರವಾಗಿದ್ದು, ಈ ಟೆಸ್ಟ್‌ ವೇಳೆ ಯಾವುದೇ ಔಷಧವನ್ನೂ ಬಳಸುವುದಿಲ್ಲ. ಈ ಪರೀಕ್ಷೆ ವೇಳೆ ಪರೀಕ್ಷೆಗೊಳಗಾಗುವ ವ್ಯಕ್ತಿಯನ್ನು ಮಷಿನ್‌ಗೆ ಸಂಪರ್ಕಿಸಲಾಗಿರುತ್ತದೆ. ನಂತರ, ಯಾವುದೇ ಕೇಸ್‌ ಅಥವಾ ಘಟನೆಯೊಂದಕ್ಕೆ ಸಂಬಂಧ ಆ ವ್ಯಕ್ತಿಗೆ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಪರೀಕ್ಷೆಗಳನ್ನು ಕೇಳಿದ ಬಳಿಕ ಆತ ಉತ್ತರಿಸುವಾಗ ಗ್ರಾಫ್‌ ಅನ್ನು ಮ್ಯಾಪ್‌ ಮಾಡಲಾಗಿರುತ್ತದೆ. ಈ ಗ್ರಾಫ್‌ನಲ್ಲಿ ವ್ಯತ್ಯಾಸ ಕಂಡುಬಂದರೆ ಪೊಲೀಸರು ತೀರ್ಮಾನವೊಂದಕ್ಕೆ ಬರುತ್ತಾರೆ. ಇದರಿಂದ ಆತ ಸುಳ್ಳು ಹೇಳಿದ್ದಾರೋ ಅಥವಾ ನಿಜವಾದ ಉತ್ತರ ನೀಡಿದ್ದಾರೋ ಎಂಬ ತೀರ್ಮಾನಕ್ಕೆ ಬರುತ್ತಾರೆ. 

ಇದನ್ನು ಓದಿ: Delhi Crime: ಶ್ರದ್ದಾ ಬರ್ಬರ ಹತ್ಯೆ ಪ್ರಕರಣ: ಗ್ಯಾಸ್ ಸಿಲಿಂಡರ್ ಬಳಿ ದೊರೆತ ಸಾಕ್ಷ್ಯ..!

ಅಮೆರಿಕನ್‌ ಸೈಕಾಲಜಿಕಲ್‌ ಅಸೋಸಿಯೇಷನ್‌ ಪ್ರಕಾರ, ಪಾಲಿಗ್ರಾಫ್‌ ಪರೀಕ್ಷೆ ವ್ಯಕ್ತಿಯ ಹೃದಯ ಬಡಿತ / ರಕ್ತದೊತ್ತಡ, ಉಸಿರಾಟ ಹಾಗೂ ಚರ್ಮದ ವಾಹಕತೆಯನ್ನು ಪತ್ತೆ ಹಚ್ಚುತ್ತದೆ ಎಂದು ತಿಳಿದುಬಂದಿದೆ. ಒಟ್ಟಾರೆ, ವ್ಯಕ್ತಿ ಅಪರಾಧ ಮಾಡಿದ್ದಾರೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳುವುದು ಈ ಪರೀಕ್ಷೆಯ ಉದ್ದೇಶ ಎಂದು ತಿಳಿದುಬಂದಿದೆ.

 ಮತ್ತೆ 4 ದಿನಗಳ ಪೊಲೀಸ್‌ ಕಸ್ಟಡಿಗೆ ಅಫ್ತಾಬ್ 
ಇನ್ನು, ದೆಹಲಿಯ ಮೆಹ್ರೌಲಿಯಲ್ಲಿ ನಡೆದ ಶ್ರದ್ಧಾ ಹತ್ಯೆ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯವೊಂದು ನವೆಂಬರ್ 22 ರಂದು ಆರೋಪಿ ಅಫ್ತಾಬ್‌ ಅಮೀನ್‌ ಪೂನಾವಾಲಾನನ್ನು ಮತ್ತೆ 4 ದಿನಗಳ ಕಸ್ಟಡಿಗೆ ನೀಡಲಾಗಿದೆ. ಆತನ 5 ದಿನಗಳ ಕಸ್ಟಡಿ ಇಂದಿಗೆ ಅಂತ್ಯವಾಗಬೇಕಿತ್ತು. ಈಗ ಮತ್ತೆ 4 ದಿನಗಳ ಕಾಲ ಕಸ್ಟಡಿಗೆ ನೀಡಲಾಗಿದ್ದು, ಒಟ್ಟಾರೆ ಈವರೆಗೆ 14 ದಿನಗಳ ಕಾಲ ಅಫ್ತಾಬ್‌ನನ್ನು ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ. 

ಇದನ್ನೂ ಓದಿ: Shraddha Murder Case: ಕತ್ತರಿಸಿಟ್ಟಿದ್ದ ರುಂಡದ ಮೇಲೂ ಹಲ್ಲೆ..! ಶ್ರದ್ಧಾ ರುಂಡದ ಜತೆ ಮಾತುಕತೆ ನಡೆಸುತ್ತಿದ್ದ ಅಫ್ತಾಬ್‌

ಹತ್ಯೆ ಪ್ರಕರಣದ ತನಿಖೆ ಇನ್ನೂ ಮುಂದುವರಿದಿರುವುದರಿಂದ ನಮಗೆ ಇನ್ನಷ್ಟು ದಿನಗಳ ಕಾಲ ಕಸ್ಟಡಿಗೆ ರಿಮ್ಯಾಂಡ್‌ ಮಾಡಿ ಎಂದು ಅರ್ಜಿ ಹಾಕಿದ್ದೆವು. ಈ ಆಧಾರದ ಮೇಲೆ ಮತ್ತೆ 4 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ. ಈ ಹಿನ್ನೆಲೆ ಮತ್ತಷ್ಟು ದಾಖಲೆಗಳನ್ನು ಸಂಗ್ರಹಿಸಲು ನೆರವಾಗುತ್ತದೆ ಎಂದೂ ದೆಹಲಿ ಪೊಲೀಸರೊಬ್ಬರು ಮಾಹಿತಿ ನೀಡಿದ್ದಾರೆ. 

ಪೋಷಕರನ್ನು ಭೇಟಿಯಾಗಲು ಅಫ್ತಾಬ್‌ ಮನವಿ..! 
ಕಾಲ್ ಸೆಂಟರ್ ಉದ್ಯೋಗಿ ಶ್ರದ್ದಾ ವಾಕರ್ ಹತ್ಯೆ ಪ್ರಕರಣದ ಆರೋಪಿ ಅಫ್ತಾಬ್‌ ಪೂನಾವಾಲಾ ಪೋಷಕರನ್ನು ಭೇಟಿಯಾಗಬೇಕು ಎಂದು ಮನವಿ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ. ನ್ಯಾಯಾಲಯ ಅನುಮತಿ ನೀಡದ್ರೆ ಭೇಟಿಯಾಗುವೆ ಎಂದು ಅಫ್ತಾಬ್‌ ಹೇಳಿದ್ದಾನೆ ಎಂದು ಆರೋಪಿ ಪರ ವಕೀಲ ಎ. ಕುಮಾರ್‌ ಹೇಳಿದ್ದಾರೆ. 

ಇದನ್ನೂ ಓದಿ: Shraddha Murder Case: ಗೆಳತಿ ಹೆಣ ಇಟ್ಕೊಂಡೇ ಬೇರೆ ಹುಡ್ಗೀರ ಜತೆ ಅಫ್ತಾಬ್‌ ರಾಸಲೀಲೆ..!

Latest Videos
Follow Us:
Download App:
  • android
  • ios