ನಾಲೆಯ ಮೇಲೆ ಇರಿಸಲಾಗಿದ್ದ 6,000 ಕೆಜಿ ತೂಕದ ಕಬ್ಬಿಣದ ಸೇತುವೆಯನ್ನು ಕದ್ದ ಆರೋಪದ ಮೇಲೆ ನಾಲ್ವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಮುಂಬೈ (ಜುಲೈ 8, 2023): ಕಳ್ಳರು ಆಗಾಗ್ಗೆ ತಮ್ಮ ಕೈಚಳಕಗಳನ್ನು ತೋರೋದು ಸಾಮಾನ್ಯ. ಕೆಲವು ಕಳ್ಳರು ಚಿಕ್ಕಪುಟ್ಟ ವಸ್ತುಗಳನ್ನು ಕದ್ದರೆ, ಇನ್ನು ಕೆಲವರು ಅಸಾಮಾನ್ಯ ವಸ್ತುಗಳನ್ನೇ ಕಳ್ಳತನ ಮಾಡುತ್ತಾರೆ. ಇದೇ ರೀತಿ, ಮಹಾರಾಷ್ಟ್ರ ರಾಜಧಾನಿ ಮುಂಬೈ ಪಶ್ಚಿಮ ಉಪನಗರದಲ್ಲಿ ನಾಲೆಯ ಮೇಲೆ ಇರಿಸಲಾಗಿದ್ದ 6,000 ಕೆಜಿ ತೂಕದ ಕಬ್ಬಿಣದ ಸೇತುವೆಯನ್ನು ಕದ್ದ ಆರೋಪದ ಮೇಲೆ ನಾಲ್ವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಮಲಾಡ್‌ನಲ್ಲಿ (ಪಶ್ಚಿಮ) 90 ಅಡಿ ಉದ್ದದ ಲೋಹದ ರಚನೆಯನ್ನು ಯುಟಿಲಿಟಿ ಕಂಪನಿ ಅದಾನಿ ಎಲೆಕ್ಟ್ರಿಸಿಟಿ (Adani Electricity) ಬೃಹತ್ ವಿದ್ಯುತ್ ಕೇಬಲ್‌ಗಳನ್ನು ಚಲಿಸಲು ಇರಿಸಲಾಗಿತ್ತು ಎಂದು ಬಂಗೂರ್ ನಗರ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ. ನಾಲೆಗೆ ಶಾಶ್ವತ ಸೇತುವೆ ನಿರ್ಮಿಸಿದ ಬಳಿಕ ತಾತ್ಕಾಲಿಕವಾಗಿ ನಿರ್ಮಿಸಿದ್ದ ಕಟ್ಟಡವನ್ನು ಕೆಲ ತಿಂಗಳ ಹಿಂದೆ ಬೇರೆಡೆಗೆ ಸ್ಥಳಾಂತರಿಸಲಾಗಿತ್ತು ಎಂದೂ ಅವರು ಹೇಳಿದರು.
ಇದನ್ನು ಓದಿ: ಅಯ್ಯೋ ಪಾಪಿ: 5 ವರ್ಷದ ಬಾಲಕಿ ಮೇಲೆ 60 ವರ್ಷದ ಮುದುಕನಿಂದ ರೇಪ್; ಸಂತ್ರಸ್ತೆಗೆ ಬೆದರಿಕೆ
ಆದರೆ, ಜೂನ್ 26 ರಂದು ತಾತ್ಕಾಲಿಕ ಸೇತುವೆ ಕಾಣೆಯಾಗಿದ್ದು, ನಂತರ ಅದಾನಿ ಎಲೆಕ್ಟ್ರಿಸಿಟಿ ಕಂಪನಿಯು ಪೊಲೀಸ್ ದೂರು ದಾಖಲಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ತಮ್ಮ ತನಿಖೆಯ ಸಮಯದಲ್ಲಿ, ಸೇತುವೆಯು ಜೂನ್ 6 ರಂದು ಅದರ ಸ್ಥಳದಲ್ಲಿ ಕೊನೆಯದಾಗಿ ಕಂಡುಬಂದಿದೆ ಎಂದು ಪೊಲೀಸರು ಕಂಡುಕೊಂಡರು.
ಸ್ಥಳದಲ್ಲಿ ಯಾವುದೇ ಸಿಸಿಟಿವಿ ಕ್ಯಾಮೆರಾಗಳಿಲ್ಲದ ಕಾರಣ, ಪೊಲೀಸರು ಹತ್ತಿರದ ಪ್ರದೇಶಗಳಲ್ಲಿ ಅಳವಡಿಸಲಾಗಿರುವ ಕಣ್ಗಾವಲು ಕ್ಯಾಮೆರಾಗಳ ದೃಶ್ಯಗಳನ್ನು ಸ್ಕ್ಯಾನ್ ಮಾಡಿದರು ಮತ್ತು ಜೂನ್ 11 ರಂದು ಸೇತುವೆಯ ದಿಕ್ಕಿನಲ್ಲಿ ದೊಡ್ಡ ವಾಹನವು ಚಲಿಸುತ್ತಿರುವುದನ್ನು ಕಂಡುಕೊಂಡಿದ್ದೇವೆ ಎಂದು ಅಧಿಕಾರಿ ತಿಳಿಸಿದ್ದಾರೆ. ನಂತರ ಪೊಲೀಸರು ಅದರ ನೋಂದಣಿ ಸಂಖ್ಯೆಯಿಂದ ವಾಹನವನ್ನು ಪತ್ತೆಹಚ್ಚಿದರು. ಸೇತುವೆಯನ್ನು ಕೆಡವಲು ಮತ್ತು 6,000 ಕೆಜಿ ತೂಕದ ಕಬ್ಬಿಣವನ್ನು ಕದಿಯಲು ಬಳಸಲಾದ ಗ್ಯಾಸ್ ಕಟಿಂಗ್ ಯಂತ್ರಗಳನ್ನು ವಾಹನ ಹೊಂದಿತ್ತು ಎಂದೂ ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ಮಧ್ಯ ಪ್ರದೇಶದಲ್ಲಿ ಮತ್ತೊಂದು ಹೀನ ಕೃತ್ಯ ಬೆಳಕಿಗೆ: ಇಬ್ಬರು ದಲಿತ ಯುವಕರಿಗೆ ಮಲ ತಿನ್ನಿಸಿ, ಚಪ್ಪಲಿ ಹಾರ ಹಾಕಿ ಹಿಂಸೆ
ಹೆಚ್ಚಿನ ತನಿಖೆಯ ನಂತರ ಸೇತುವೆಯನ್ನು ನಿರ್ಮಿಸಿದ ಗುತ್ತಿಗೆಯನ್ನು ಪಡೆದ ಸಂಸ್ಥೆಯ ಉದ್ಯೋಗಿಯೊಬ್ಬರ ಮೇಲೆ ಪೊಲೀಸರಿಗೆ ಅನುಮಾನ ಬಂದಿದೆ. ಕಳೆದ ವಾರ ಪೊಲೀಸರು ಆರೋಪಿ ಸಿಬ್ಬಂದಿ ಮತ್ತು ಆತನ ಮೂವರು ಸಹಚರರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ಅಲ್ಲದೆ, ಸ್ಥಳದಿಂದ ಕಳವು ಮಾಡಲಾದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದೂ ಮಹಾರಾಷ್ಟ್ರ ಪೊಲೀಸರು ಹೇಳಿದರು.
ಇದನ್ನೂ ಓದಿ: ಪತ್ನಿ ಶವ 3 ದಿನ ಫ್ರೀಜರ್‌ನಲ್ಲಿಟ್ಟ ಪಾಪಿ ಪತಿ: ಗಂಡನಿಂದ್ಲೇ ಕೊಲೆ ಎಂದು ಮಹಿಳೆ ಕುಟುಂಬಸ್ಥರ ಆರೋಪ
