Asianet Suvarna News Asianet Suvarna News

ದರ್ಶನ್ ಮಾತ್ರವಲ್ಲ, ಅವನ ಅಭಿಮಾನಿಯೂ ಕಿಲ್ಲಿಂಗ್ ಸ್ಟಾರ್ಸ್; ಮೂವರ ಸಾವಿಗೆ ಕಾರಣವಾದ ಡಿಬಾಸ್ ಫ್ಯಾನ್!

ನಟ ದರ್ಶನ್ ಮಾತ್ರವಲ್ಲ, ಆತನ ಅಭಿಮಾನಿಯೂ ಕೂಡ ಕಿಲ್ಲಿಂಗ್ ಸ್ಟಾರ್ಸ್ ಎಂಬುದು ರಾಮನಗರದಲ್ಲಿ ನಡೆದ ಈ ಘಟನೆಯಿಂದ ಸಾಬೀತಾಗಿದೆ.  ಲಾರಿಯ ಮೇಲೆ ದರ್ಶನ್ ಕೈದಿ ನಂಬರ್ ಹಾಕಿಸಿಕೊಂಡಿದ್ದವು ಮೂವರು ಬೈಕ್ ಸವಾರರಿಗೆ ಗುದ್ದಿಸಿ ಸಾವಿಗೆ ಕಾರಣವಾಗಿದ್ದಾನೆ.

Actor Darshan Thoogudeepa Fans also killing stars Here evidence of Ramanagara accident sat
Author
First Published Sep 6, 2024, 4:27 PM IST | Last Updated Sep 6, 2024, 4:27 PM IST

ರಾಮನಗರ (ಸೆ.06): ನಟ ದರ್ಶನ್ ತೂಗುದೀಪಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ನೀಡಲಾಗಿದ್ದ ಕೈದ ನಂಬರ್ 6106 ಸಂಖ್ಯೆಯನ್ನು ಲಾರಿಯ ಮೇಲೆ ಹಾಕಿಸಿಕೊಂಡಿದ್ದ, ದರ್ಶನ್ ಅಭಿಮಾನಿಯೊಬ್ಬ ಲಾರಿ ಗುದ್ದಿಸಿ ಬೈಕ್ ಮೇಲೆ ಹೋಗುತ್ತಿದ್ದ ಮೂವರು ಸವಾರರ ಸಾವಿಗೆ ಕಾರಣವಾಗಿದ್ದಾನೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಕನ್ನಡ ಚಿತ್ರರಂಗದ ನಟ ದರ್ಶನ್ ತೂಗುದೀಪಗೆ ಲಕ್ಷಾಂತರ ಜನರು ಅಭಿಮಾನಿಗಳಿದ್ದರೂ, ತನ್ನ ವೈಯಕ್ತಿಕ ಹಿತಾಸಕ್ತಿ ಹಾಗೂ ತನ್ನ ಪ್ರೇಯಸಿಗಾಗಿ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಭೀಕರವಾಗಿ ಕೊಲೆ ಮಾಡಿದ ಆರೋಪದಲ್ಲಿ ವಿಚಾರಣಾಧೀನ ಕೈದಿಯಾಗಿ ಜೈಲು ಸೇರಿದ್ದಾನೆ. ಬೆಂಗಳೂರು ಜೈಲಿಗೆ ಕಳುಹಿಸಿದ ನಂತರ ಅಲ್ಲಿನ ಜೈಲಧಿಕಾರಿಗಳು ದರ್ಶನ್‌ಗೆ ಕೂದಿ ಸಂಖ್ಯೆ 6106 ಅನ್ನು ಕೊಟ್ಟಿದ್ದರು. ಇದಾದ ನಂತರ ಅವರ ಅಭಿಮಾನಿಗಳು ಡಿ ಬಾಸ್ ಎಂಬ ಸ್ಟಿಕ್ಕರ್ ತೆರವುಗೊಳಿಸಿ ಕೈದಿ ನಂಬರ್ 6106 ಎಂದು ಬರೆಸಿಕೊಂಡು ಕೈಕೋಳದ ಚಿತ್ರದ ಸ್ಟಿಕ್ಕರ್ ಅನ್ನು ಅಂಟಿಸಿಕೊಳ್ಳುತ್ತಿದ್ದಾರೆ.

39 ಗಾಯ, ಕಾಟೇರನ ರಕ್ಕಸ ಕ್ರೌರ್ಯ: 6 ಗಂಟೆಗಳ ನರಕ ಯಾತನೆ: FSL ರಿಪೋರ್ಟ್ ತೆರೆದಿಟ್ಟ ಸತ್ಯವೇನು..?

ಇದೇ ರೀತಿ ಕೊಲೆ ಆರೋಪಿ ನಟ ದರ್ಶನ್ ಅಭಿಮಾನಿಯೊಬ್ಬ ಲಾರಿಯ ಮೇಲೆ ಕೈದಿ ನಂಬರ್ 6106 ಎಂದು ಬರೆಸಿಕೊಂಡಿದ್ದಾನೆ. ಇದೀಗ ಆತ ರಸ್ತೆಯನ್ನು ಕ್ರಾಸ್ ಮಾಡುವಾಗ ರಸ್ತೆಯಲ್ಲಿ ಹೋಗುತ್ತಿದ್ದ ಮೂವರು ಬೈಕ್ ಸವಾರರ ಮೇಲೆ ಲಾರಿಯನ್ನು ಹತ್ತಿಸಿ ಸಾವಿಗೆ ಕಾರಣವಾಗಿದ್ದಾನೆ. ನಂತರ ಅಲ್ಲಿ ಲಾರಿಯನ್ನೂ ನಿಲ್ಲಿಸದೇ ಅಲ್ಲಿಂದ ಪರಾರಿ ಆಗಿದ್ದಾನೆ. ಬೈಕ್‌ನಲ್ಲಿದ್ದ ಮೂವರು ಯುವಕರು ಸ್ಥಳದಲ್ಲಿಯೇ ಬಿದ್ದು ದಾರುಣವಾಗಿ ಪ್ರಾಣ ಬಿಟ್ಟಿದ್ದಾರೆ. ಇದು ಲಾರಿ ಚಾಲಕನ ಅಜಾಗರೂಕತೆಯಿಂದಲೇ ಈ ಘಟನೆ ಸಂಭವಿಸಿರುವುದು ಸಿಸಿ ಕ್ಯಾಮೆರಾ ವಿಡಿಯೋದಲ್ಲಿ ಸೆರೆಯಾಗಿದೆ.

ರಾಮನನಗರದಲ್ಲಿ ಈ ಘಟನೆ ನಡೆದಿದೆ. ಬೈಕ್‌ಗೆ ಲಾರಿ ಡಿಕ್ಕಿಯಾಗಿ ಮೂವರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಘಾತದ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೆಟ್ರೋಲ್ ಬಂಕ್ ಮುಂಭಾಗ ನಿಂತಿದ್ದ ಬೈಕ್‌ಗೆ ಲಾರಿ  ಡಿಕ್ಕಿ ಹೊಡೆದಿದೆ. ಬೈಕ್ ಮೇಲೆ ಕುಳಿತಿದ್ದ ನಾಲ್ವರ ಮೇಲೆ ಲಾರಿ ಏಕಾಏಕಿ ಹರಿದಿದೆ. ಲಾರಿ ಚಾಲಕನ ಎಡವಟ್ಟಿನಿಂದಾಗಿ ಅಪಘಾತ ನಡೆದಿದ್ದು, ಈ ಪೈಕು ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇನ್ನೊಬ್ಬ ಯುವಕನಿಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಗಳೂರು ಕಬ್ಬನ್ ಪಾರ್ಕ್‌ನಲ್ಲಿ ಒಬ್ಬಂಟಿ ಯುವತಿಗೆ ಮರ್ಮಾಂಗ ತೋರಿಸಿದ ಫಯಾಜ್ ಪಾಷಾ!

ಅಪಘಾತ ಮಾಡಿದ ಲಾರಿ ಮಾಲೀಕ ದರ್ಶನ್ ಅಭಿಮಾನಿ ಎಂಬುದು ತಿಳಿದುಬಂದಿದೆ. ಲಾರಿ ಚಕ್ರದ ಹಿಂಭಾಗ ದರ್ಶನ್ ಕೈದಿ ನಂಬರ್ 6106 ಎಂಬ ಸ್ಟಿಕ್ಕರ್ ಅನ್ನು ಅಂಟಿಸಿಕೊಂಡಿದ್ದಾನೆ. ಜೊತೆಗೆ, ದರ್ಶನ್ ಆರೋಪಿಯಷ್ಟೇ.., ಅಪರಾಧಿಯಲ್ಲ ಎಂಬ ಪದ ಬಳಕೆ ಮಾಡಿ ತನ್ನ ಅಭಿಮಾನವನ್ನು ತೋರಿಸಿದ್ದಾರೆ. ಇದೀಗ ಲಾರಿ ಚಾಲಕನನ್ನ ವಶಕ್ಕೆ ಪಡೆದ ಪೊಲೀಸರು ಪ್ರಕರಣ ದಾಖಲಿಸಿ ದರ್ಶನ್ ಅಭಿಮಾನಿಯನ್ನು ಸೆಲ್ ಒಳಗೆ ಹಾಕಿದ್ದಾರೆ.

Latest Videos
Follow Us:
Download App:
  • android
  • ios