Asianet Suvarna News Asianet Suvarna News

ಜೈಲು ಅವ್ಯವಸ್ಥೆಗೆ ಸಿಎಂ ಕೆಂಡಾಮಂಡಲ, ದರ್ಶನ್ ಗ್ಯಾಂಗ್‌ ಬೇರೆ ಜೈಲಿಗೆ ಶಿಫ್ಟ್‌ ಮಾಡಲು ಸಿದ್ದರಾಮಯ್ಯ ಖಡಕ್‌ ಸೂಚನೆ

ಪರಪ್ಪನ ಅಗ್ರಹಾರದಲ್ಲಿ ವಿಚಾರಣಾಧೀನ ಕೈದಿ ದರ್ಶನ್‌ ಐಶಾರಾಮಿ ಜೀವನ ಮತ್ತು ರೌಡಿಗಳೊಂದಿಗಿನ ಫೋಟೋ, ವಿಡಿಯೋ ಲೀಕ್‌ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಕೆಂಡಾಮಂಡಲರಾಗಿದ್ದು, ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಸೂಚಿಸಿದ್ದಾರೆ.  

cm siddaramaiah orders IGP Alok Mohan to shift darshan and other accused to another jail gow
Author
First Published Aug 26, 2024, 12:27 PM IST | Last Updated Aug 26, 2024, 12:49 PM IST

ಬೆಂಗಳೂರು (ಆ.26): ಕೊಲೆ ಆರೋಪಿಯಾಗಿ ಪರಪ್ಪನ ಅಗ್ರಹಾರದಲ್ಲಿ  ವಿಚಾರಣಾಧೀನ ಕೈದಿಯಾಗಿರುವ ದರ್ಶನ್‌ ಐಶಾರಾಮಿ ಜೀವನದ ಜೊತೆಗೆ ರೌಡಿಗಳ ಜೊತೆಯಲ್ಲಿರುವ  ಫೋಟೋ ಮತ್ತು ವಿಡಿಯೋ ಲೀಕ್ ಆಗಿ ಮಾಧ್ಯಮಗಳಲ್ಲಿ ಪ್ರಸಾರವಾದ ಬೆನ್ನಲ್ಲೇ ರಾಜ್ಯ ಸರ್ಕಾರಕ್ಕೆ ಇದು ಭಾರೀ ಮುಜುಗರ ತರಿಸಿದೆ. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಕೆಂಡಾಮಂಡಲವಾಗಿದ್ದಾರೆ.

ಇದರ ಬೆನ್ನಲ್ಲೇ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸಿಎಂ ಸಿದ್ದರಾಮಯ್ಯ ಅವರು ದರ್ಶನ್‌ ಸೇರಿ ಇತರರನ್ನು ಬೇರೆ ಜೈಲಿಗೆ ಶಿಫ್ಟ್ ಮಾಡುವಂತೆ ರಾಜ್ಯ ಪೊಲೀಸ್‌ ಮಹಾ ಆಯುಕ್ತರಿಗೆ ಸಿಎಂ ತಾಕೀತು ಮಾಡಿದ್ದಾರೆ. ಇದರ ಜೊತೆಗೆ ಜೈಲಲ್ಲಿ ದರ್ಶನ್‌ ಗೆ ಹತ್ತಿರವಾಗಿರುವ ಇತರರನ್ನೂ ಬೇರೆ ಕಡೆ ಶಿಫ್ಟ್ ಮಾಡಲು ಸೂಚಿಸಿದ್ದಾರೆ. ಜೊತೆಗೆ ತಪ್ಪಿತಸ್ಥ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡುವಂತೆ ಸೂಚನೆ ನೀಡಿದ್ದಾರೆ.

ನಟೋರಿಯಸ್‌ ರೌಡಿ ಜತೆ ವಿಗ್‌ ಇಲ್ಲದ ದರ್ಶನ್‌ ಜೈಲಲ್ಲಿ ಧಮ್ ಹೊಡೆಯೋ ಫೋಟೋ ಲೀಕ್‌ ಆಗಿದ್ದೇಗೆ?

ಜೊತೆಗೆ ಕಾರಾಗೃಹಕ್ಕೆ ಭೇಟಿ ನೀಡಿ ಪ್ರಕರಣದ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ಸಿಎಂ  ರಾಜ್ಯ ಪೊಲೀಸ್‌ ಮಹಾ ಆಯುಕ್ತ ಡಾ. ಅಲೋಕ್ ಮೋಹನ್  (Alok Mohan) ಅವರಿಗೆ  ಸೂಚನೆ  ನೀಡಿದ್ದಾರೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಮಂದಿ ಸಿಬ್ಬಂದಿಗಳನ್ನು ಅಮಾನತು ಮಾಡಿ ಆದೇಶ  ಹೊರಡಿಸಲಾಗಿದೆ.

ಎಚ್ಚೆತ್ತ ಅಧಿಕಾರಿಗಳು:
ಮಾಧ್ಯಮಗಳಲ್ಲಿ ದರ್ಶನ್ ಪೋಟೊ ಸುದ್ದಿಯಾಗುತ್ತಿದ್ದಂತೆ ಎಚ್ಚೆತ್ತ ಅಧಿಕಾರಿಗಳು ಜೈಲಿನಲ್ಲಿರುವ ಸಿಸಿ ಕ್ಯಾಮರಾ ಹಾಗೂ ಸ್ಥಳ ಪರೀಶಿಲನೆ  ಮಾಡಿದ್ದಾರೆ. ಜೈಲಿನ ಹಿರಿಯ ಅಧಿಕಾರಿಗಳಾದ ಸೋಮಶೇಖರ್ ಹಾಗೂ ಆನಂದ್ ರೆಡ್ಡಿ ರವರಿಂದ ಪರೀಶಿಲನೆ ಮಾಡಲಾಗಿದೆ.

ದರ್ಶನ್‌ಗೆ ರಾಜಾತಿಥ್ಯದ ಕೊಚ್ಚೆ ಬಿದ್ರೂ, 'ಸರ್ಕಾರಕ್ಕೆ ಮುಜುಗರವಾಗಿಲ್ಲ..' ಎಂದ ಹೋಂ ಮಿನಿಸ್ಟರ್‌!

ದರ್ಶನ್ ಹಾಗೂ ವಿಲ್ಸನ್ ಗಾರ್ಡನ್ ನಾಗ ಓಡಾಟದ ಬಗ್ಗೆ ಪರೀಶಿಲನೆ ನಡೆಸಲಾಗಿದೆ. ಯಾವ್ಯಾವ ಸ್ಥಳದಲ್ಲಿ ಓಡಾಟ ಸಿಗರೇಟ್ ಸೇವನೆ ದೃಶ್ಯದ ಬಗ್ಗೆ ಸಿಸಿಟಿವಿಯಲ್ಲಿ ಸೆರೆಯಾಗಿರುವ ಬಗ್ಗೆ ಪರೀಶಿಲನೆ ಮಾಡಲಾಗಿದೆ. ಜೈಲಿನಲ್ಲಿರುವ ಪ್ರತಿ ಸಿಸಿ ಕ್ಯಾಮರೆಗಳನ್ನು ಅಧಿಕಾರಿಗಳು ಪರಿಶೀಲಿಸಿಸುತ್ತಿದ್ದಾರೆ. 

ಏನೆಲ್ಲಾ ನಡೆಯುತ್ತಿದೆ ಎಂಬುದರ ಬಗ್ಗೆ ಸಿಸಿಕ್ಯಾಮೆರಾ ಕಲೆ ಹಾಕಿರುವ ಅಧಿಕಾರಿಗಳು. ನಿನ್ನೆ ಸಂಜೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಪರಿಶಿಲನೆ ಮಡೆಸಿರುವ ಅಧಿಕಾರಿಗಳು. ಸುದ್ದಿ ಪ್ರಸಾರವಾಗುತ್ತಿದ್ದಂತೆ ಇಲಾಖೆಯಲ್ಲಿರುವ ನಡುಕ ಶುರುವಾಗಿದೆ.

ವಿಲ್ಸನ್ ಗಾರ್ಡನ್ ನಾಗ ಮತ್ತು ಕುಳ್ಳ ಸೀನನ ಜೊತೆಗೆ ದರ್ಶನ್ ಮತ್ತು ಆತನ ಮ್ಯಾನೇಜರ್ ನಾಗರಾಜ್ ಟೇಬಲ್‌ ಹಾಕಿ ಟೀ ಕುಡಿಯುತ್ತಾ ಸಿಗರೇಟ್‌ ಸೇದುತ್ತಿರುವ ಫೋಟೋ ವನ್ನು ಏಷ್ಯಾನೆಟ್‌ ಸುವರ್ಣನ್ಯೂಸ್‌ ಮೊದಲಿಗೆ ಬಿತ್ತರಿಸಿತ್ತು. ಇದಾದ ಬೆನ್ನಲ್ಲೇ ರೌಡಿ ಶೀಟರ್‌ ಜಾನಿ ಪುತ್ರ ಸತ್ಯ ನ ಜೊತೆಗೆ ದರ್ಶನ್ ಮಾತನಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ರೌಡಿಶೀಟರ್‌ ಧರ್ಮ ಜೈಲಿಂದ ಸತ್ಯನಿಗೆ ವಿಡಿಯೋ ಕಾಲ್ ಮಾಡಿದ್ದ. ಆಬಳಿಕ ಜೈಲಿನ ಒದೊಂದೇ ಅವ್ಯವಸ್ಥೆಗಳು ಹೊರಬರತೊಡಗಿದವು.

Latest Videos
Follow Us:
Download App:
  • android
  • ios