ರೇಣುಕಾಸ್ವಾಮಿ ಕೊಲೆ ಪ್ರಕರಣ: ಕುಂಟುತ್ತಲೇ ಕೋರ್ಟ್‌ಗೆ ಬಂದ ನಟ ದರ್ಶನ್
ಪಾಸ್ ಪೋರ್ಟ್ ವಾಪಸ್‌ಗೆ ಆದೇಶ ನ್ಯಾಯಾಂಗ ಬಂಧನಕ್ಕೆ ಒಳಗಾದ ವೇಳೆ ನ್ಯಾಯಾಲಯದ ಸುಪರ್ದಿಗೆ ನೀಡಲಾಗಿರುವ ಪಾಸ್‌ಪೋರ್ಟ್ ಅನ್ನು ಹಿಂದಿರುಗಿಸುವಂತೆ ಕೋರಿ ದರ್ಶನ್ ಪರ ವಕೀಲರು ಇದೇ ವೇಳೆ ಮನವಿ ಸಲ್ಲಿಸಿದರು. ಆ ಮನವಿಗೆ ಒಪ್ಪಿದ ನ್ಯಾಯಾಲಯವು ದರ್ಶನ್‌ಗೆ ಪಾಸ್‌ಪೋರ್ಟ್ ಹಿಂದಿರುಗಿಸಲು ಆದೇಶಿಸಿತು.
ಬೆಂಗಳೂರು(ಡಿ.17): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್ ಸೋಮವಾರ ನಗರದ 57ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್‌ಗೆ ಹಾಜರಾಗಿ ಜಾಮೀನು ಷರತ್ತುಗಳನ್ನು ಪೂರೈಸಿದರು.
ಪ್ರಕರಣದಲ್ಲಿ ಆರೋಪಿಯಾಗಿರುವ 2ನೇ ದರ್ಶನ್‌ಗೆ ಜಾಮೀನು ನೀಡಿ ಹೈಕೋರ್ಟ್ ಡಿ.13ರಂದು ಆದೇಶಿಸಿತ್ತು. ಅಲ್ಲದೆ, ಒಂದು ಲಕ್ಷ ರು. ಮೊತ್ತಕ್ಕೆ ವೈಯಕ್ತಿಕ ಬಾಂಡ್ ಮತ್ತು ಇಬ್ಬರ ಭದ್ರತಾ ಖಾತರಿ ನೀಡಬೇಕು ಎಂದು ಷರತ್ತು ವಿಧಿಸಿತ್ತು. ಈ ಷರತ್ತು ಪೂರೈಸಲು ಸೋಮವಾರ ಕೋರ್ಟ್‌ಗೆ ದರ್ಶನ್ ಹಾಜರಾಗಿದ್ದರು.
ಹೊರಬಂದ ಡೆವಿಲ್, ಬಣ್ಣ ಹಚ್ಚೋದ್ಯಾವಾಗ ದಾಸ? ಡೆವಿಲ್ ಶೂಟಿಂಗ್ ರಿಸ್ಟಾರ್ಟ್ ಆಗುತ್ತಾ?
ಈ ವೇಳೆ ದರ್ಶನ್‌ಗೆ ಅವರ ಸಹೋದರ ದಿನಕರ್, ಸ್ನೇಹಿತ ಧನ್ವಿರ್ ಕ್ಯೂರಿಟಿ ನೀಡಿದರು. ಆಸ್ಪತ್ರೆಯಿಂದ ಕೋರ್ಟ್‌ಗೆ: ಜಾಮೀನು ಷರತ್ತು ಪೂರೈಸಲು ದರ್ಶನ್ ನಗರದ ಬಿಜಿಎಸ್ ಆಸ್ಪತ್ರೆಯಿಂದ ಕೋರ್ಟ್‌ಗೆ ಬಂದಿದ್ದರು. ಬೆನ್ನುಹುರಿ ಸಮಸ್ಯೆಯಿಂದ ಬಳಲುತ್ತಿರುವ ಅವರು ನಡೆದಾಡಲು ಹಾಗೂ ನಿಲ್ಲಲು ಕಷ್ಟಪಡುತ್ತಿದ್ದರು.
ಕೋರ್ಟ್ ಹಾಲ್‌ಗೆ ಕುಂಟುತ್ತಲೇ ಬಂದ ದರ್ಶನ್, ಅಲ್ಲಿದ್ದ ಬೆಂಚ್ ಮೇಲೆ ಕೂತರು. ಜಡ್ಜ್ ಬಂದ ನಂತರ ಎದ್ದು ಕಟಕಟೆಗೆ ಹೋದರು. ನಿಲ್ಲಲು ಕಷ್ಟವಾಗುತ್ತಿದ್ದರಿಂದ ಎರಡು ಹೆಜ್ಜೆ ಹಿಂದೆ ಸರಿದು ಕಟಕಟೆಗೆ ಒರಗಿ ನಿಂತರು. ಷರತ್ತು ಪೂರೈಕೆ ಪ್ರಕ್ರಿಯೆ ಮುಗಿಸಿದ ಬಳಿಕ ಕೋರ್ಟ್‌ನಿಂದ ತಮ್ಮ ಕಾರಿನವರೆಗೆ ಕುಂಟುತ್ತಲೇ ನಡೆದು ಹೋದರು. ಚಿಕಿತ್ಸೆ ಪಡೆಯುವುದು ಬಾಕಿಯಿರುವುದರಿಂದ ದರ್ಶನ್ ಅವರು ಜಾಮೀನು ಷರತ್ತು ಪೂರೈಸಿ ನೇರವಾಗಿ ಕೋರ್ಟ್‌ನಿಂದ ಬಿಜಿಎಸ್ ಆಸ್ಪತ್ರೆಗೆ ತೆರಳಿದರು.
ಪಾಸ್ ಪೋರ್ಟ್ ವಾಪಸ್‌ಗೆ ಆದೇಶ ನ್ಯಾಯಾಂಗ ಬಂಧನಕ್ಕೆ ಒಳಗಾದ ವೇಳೆ ನ್ಯಾಯಾಲಯದ ಸುಪರ್ದಿಗೆ ನೀಡಲಾಗಿರುವ ಪಾಸ್‌ಪೋರ್ಟ್ ಅನ್ನು ಹಿಂದಿರುಗಿಸುವಂತೆ ಕೋರಿ ದರ್ಶನ್ ಪರ ವಕೀಲರು ಇದೇ ವೇಳೆ ಮನವಿ ಸಲ್ಲಿಸಿದರು. ಆ ಮನವಿಗೆ ಒಪ್ಪಿದ ನ್ಯಾಯಾಲಯವು ದರ್ಶನ್‌ಗೆ ಪಾಸ್‌ಪೋರ್ಟ್ ಹಿಂದಿರುಗಿಸಲು ಆದೇಶಿಸಿತು.
ದರ್ಶನ್‌ನ ಗೆಳತಿ ಪವಿತ್ರಾ ಗೌಡಗೆ ಜಾಮೀನು ಶ್ಯೂರಿಟಿ ನೀಡಿದ ಮನೀಶ್ ಯಾರು?
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸಿನಿಂದಾಗಿ ಜೈಲು ಸೇರಿ ಅಲ್ಲಿಂದ ಕುಂಟುತ್ತಾ ಹೊರಬಂದು ಆಸ್ಪತ್ರೆಗೆ ದಾಖಲಾಗಿದ್ದ ನಟ ದರ್ಶನ್ ಸಾಮಾನ್ಯ ಜಾಮೀನು ಸಿಗುತ್ತಿದ್ದಂತೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಎದೆ ಉಬ್ಬಿಸಿಕೊಂಡು ಕೋರ್ಟ್‌ಗೆ ಹಾಜರಾಗಿ ಜಾಮೀನಿಗೆ ಸಹಿ ಹಾಕಿದ್ದಾರೆ. ಆದರೆ, ದರ್ಶನ್ ಗೆಳತಿ ಪವಿತ್ರಾ ಗೌಡ ಅವರಿಗೆ ಜಾಮೀನು ನೀಡಿದ್ಯಾರು ಗೊತ್ತಾ? ಇಲ್ಲಿದೆ ನೋಡಿ ಪೂರ್ಣ ವಿವರ..
ಮಡದಿಯ ಹಾರೈಕೆ ಸೆಲೆಬ್ರಿಟಿಗಳ ಆಶೀರ್ವಾದ...ಗಜ ಮತ್ತೆ ಅಬ್ಬರಿಸಲಿ; ದರ್ಶನ್ ಬಗ್ಗೆ ಬಿಗ್ ಬಾಸ್ ಅನುಷಾ ಪೋಸ್ಟ್
ನಟ ದರ್ಶನ್ ತೂಗುದೀಪ ರೇಣುಕಾಸ್ವಾಮಿ ಕೊಲೆ ಕೇಸಿನಲ್ಲಿ ಬಳ್ಳಾರಿ ಜೈಲಿನಲ್ಲಿದ್ದಾಗ ಬೆನ್ನುಹುರಿ ಚಿಕಿತ್ಸೆಗಾಗಿ ಮಧ್ಯಂತರ ಜಾಮೀನು ಪಡೆದು ಹೊರಗೆ ಬಂದು ಕೆಂಗೇರಿ ಬಳಿಯ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದರು. ಇದರ ಬೆನ್ನಲ್ಲಿಯೇ 6 ವಾರಗಳ ತರುವಾಯ (ಡಿ.13ರ ಶುಕ್ರವಾರ) ಕೋರ್ಟ್‌ನಿಂದ ಸಾಮಾನ್ಯ ಜಾಮೀನು ಮಂಜೂರಾಗಿದೆ. ಎರಡು ದಿನಗಳ ಸತತ ರಜೆಯ ಹಿನ್ನೆಲೆಯಲ್ಲಿ ಇಂದು ಸೋಮವಾರ ಜಾಮೀನು ಅರ್ಜಿಯ ಎಲ್ಲ ಷರತ್ತುಗಳನ್ನು ಪೂರ್ಣಗೊಳಿಸುತ್ತಿದ್ದಾರೆ. ಹೀಗಾಗಿ, ಬಿಜಿಎಸ್ ಆಸ್ಪತ್ರೆಯಿಂದ ಡಿಶ್ಚಾರ್ಜ್ ಮಾಡಿಸಿಕೊಂಡು ನೇರವಾಗಿ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಈ ವೇಳೆ ದರ್ಶನ್ ಜೊತೆಗೆ ಸಹೋದರ ದಿನಕರ್ ತೂಗುದೀಪ ಹಾಗೂ ನಟ ಧನ್ವೀರ್ ಕೂಡ ಕೋರ್ಟ್ ಗೆ ಹಾಜರಾದರು.
ನಟ ದರ್ಶನ್‌ಗೆ ಮಧ್ಯಂತರ ಜಾಮೀನು ಸಿಕ್ಕಾಗ ದಿನಕರ್ ಹಾಗೂ ಧನ್ವೀರ್ ಶ್ಯೂರಿಟಿ ನೀಡಿದ್ದರು. ಆಗ ಕೋರ್ಟ್ ಅಧಿಕಾರಿ ಇಲ್ಲಿ ಕೋರ್ಟ್ ಮುಂದೆ ಯಾರ್ಯಾರು ಇದ್ದಾರೆ ಎಂದು ಕೇಳಿದರು. ಆಗ ಎ2 ದರ್ಶನ್ ಇದ್ದಾರೆ ಎಂದು ದರ್ಶನ್ ಪರ ವಕೀಲರ ಮಾಹಿತಿ ನೀಡಿದರು. ಈ ವೇಳೆ ದರ್ಶನ್ ಪರ ವಕೀಲರಾದ ಸುನೀಲ್ ಅವರು ವಾದ ಮಂಡಿಸುತ್ತಾ ಜಾಮೀನು ಪ್ರಕ್ರಿಯೆ ಪೂರ್ಣಗೊಳಿಸಲು ಮುಂದಾದರು. ಇದೇ ವೇಳೆ ಕೋರ್ಟ್‌ನಿಂದ ಪವನ್, ರಾಘವೇಂದ್ರ, ಹಾಗೂ ನಂದೀಶ್ ಜಾಮೀನು ಅರ್ಜಿ ಸ್ವೀಕರಿಸಲಾಯಿತು. ಜೊತೆಗೆ, ಆರೋಪಿಗಳಾದ ಪವಿತ್ರಾಗೌಡ, ದರ್ಶನ್, ಅನುಕುಮಾರ್, ಪ್ರದೋಷ್, ನಾಗರಾಜ್ ಹಾಗೂ ಲಕ್ಷ್ಮಣ್ ಪರ ವಕೀಲರಿಂದ ಬಾಂಡ್ ಹಾಗೂ ಶ್ಯೂರಿಟಿ ಸಲ್ಲಿಕೆ ಮಾಡಲಾಯಿತು.