ಚಿತ್ರದುರ್ಗ(ಫೆ.14): ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರಿಗೆ ಜಮೀನು ನೀಡದ ಹಿನ್ನಲೆಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಗಳ ತಂಡವೊಂದು ಜಮೀನು ಮಾಲೀಕನ ಮೇಲೆ ಆ್ಯಸಿಡ್ ದಾಳಿ ನಡೆಸಿದ ಕಾರಿಗೆ ಬೆಂಕಿ ಹಚ್ಚಿ ಕೊಲೆ ಯತ್ನಿಸಿರುವ ಘಟನೆ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಸೂಲೇನಹಳ್ಳಿ ಬಳಿ ಘಟನೆ ನಿನ್ನೆ(ಶನಿವಾರ) ನಡೆದಿದೆ. 

ಆಂಧ್ರ ಪ್ರದೇಶದ ಹಿಂದೂಪುರ‌ ಮೂಲದ ಜಮೀನು ಮಾಲೀಕ ವೇಣುಗೋಪಾಲ್ ಎಂಬುವರ ಮೇಲೆ ಹಿಂದೂಪುರ ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ಸುರೇಶ್ ಹಾಗೂ ಆಂಜನೇಯ, ಚೌಡಪ್ಪ ಸೇರಿ ಐವರ ತಂಡದಿಂದ ಕೃತ್ಯ ನಡೆಸಿದೆ ಎಂಬ ಶಂಕೆ ವ್ಯಕ್ತವಾಗಿದೆ. ವೇಣುಗೋಪಾಲ್ ಅವರ ತಂದೆ ಸುರೇಶ್‌ಗೆ ಜಮೀನು‌ ಮಾರಿದ್ದರು. ತಂದೆಯ ನಿರ್ಧಾರಕ್ಕೆ ಒಪ್ಪದೆ ಜಮೀನು ಮಾರಾಟಕ್ಕೆ ವೇಣುಗೋಪಾಲ್ ನಿರಾಕರಿಸಿದ್ದರು. ಜಮೀನು ನೀಡದಕ್ಕೆ ವೇಣುಗೋಪಾ ಅವರ ಕಾರು ಹಿಂಬಾಲಿಸಿಕೊಂಡು ಬಂದು ಏಕಾಏಕಿ ಆ್ಯಸಿಡ್ ಎರಚಿ ದಾಳಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. 

ಆ್ಯಸಿಡ್ ದಾಳಿ ಪ್ರಕರಣ ನಿರ್ಲಕ್ಷ್ಯಿಸಿದ ಪೊಲೀಸ್ ಅಮಾನತು

ಘಟನೆಯಲ್ಲಿ ಕಾರು ಸುಟ್ಟು ಭಸ್ಮವಾಗಿದ್ದು, ವೇಣುಗೋಪಾಲ್‌ಗೆ ಗಂಭೀರವಾದ ಗಾಯಗಳಾಗಿವೆ. ಹೆಚ್ಚಿನ ಚಿಕಿತ್ಸೆಗೆಂದು ಬಳ್ಳಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೊಳಕಾಲ್ಮೂರಿನಿಂದ ಚಳ್ಳಕೆರೆಗೆ ಹೋಗುವ ವೇಳೆ ಕಾರು ಅಡ್ಡಗಟ್ಟಿ ದಾಳಿ ನಡೆಸಲಾಗಿದೆ. ಘಟನೆ ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ. ಆರೋಪಿಗಳ ಪತ್ತೆಗೆ ಪೋಲೀಸರ ಹುಡುಕಾಟ ಆರಂಭಿಸಿದ್ದಾರೆ. ಘಟನಾ ಸ್ಥಳಕ್ಕೆ ಮೊಳಕಾಲ್ಮೂರು ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.