Asianet Suvarna News Asianet Suvarna News

ಮದುವೆ ಮನೆಗೆ ಬಂದು ಮದುಮಗನನ್ನೇ ಅರೆಸ್ಟ್‌ ಮಾಡಿದ ಪೊಲೀಸ್‌, ಆತ ಮಾಡಿದ್ದೇನು?

ಬೆಳಗ್ಗೆ ಮದುವೆಯ ಮೆರವಣಿಗೆ ಹೊರಡಬೇಕು ಎನ್ನುವ ಹಂತದಲ್ಲಿ ರಾತ್ರಿಯೇ ಮದುವೆ ಮನೆಗೆ ನುಗ್ಗಿದ ಪೊಲೀಸರು ವರನನ್ನು ಬಂಧಿಸಿದ ಘಟನೆ ಹರಿಯಾಣದ ರೋಹ್ಟಕ್‌ನಲ್ಲಿ ನಡೆದಿದೆ. ಆರೋಪಿಯ ಅಪ್ರಾಪ್ತೆಯನ್ನು ರೇಪ್‌ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Accused Of Rape Before Marriage Arrested In Rohtak Had To Go To Wedding Procession In Morning san
Author
First Published Dec 17, 2022, 4:24 PM IST

ನವದೆಹಲಿ (ಡಿ.17): ಇನ್ನೇನು ಬೆಳಕು ಹರಿದರೆ ಮದುವೆ ಮೆರವಣಿಗೆಯಲ್ಲಿ ಕುದುರೆಯ ಮೇಲೆ ಕುಳಿತುಕೊಂಡು ಮದುಮಗ ಹೊರಡಬೇಕು. ಆದರೆ, ರಾತ್ರಿಯೇ ಮದುವೆ ಮನೆಗೆ 'ಪೊಲೀಸ್‌ ಮಾವ' ಆಗಮಿಸಿದಾಗ ಎಲ್ಲರಿಗೂ ಅಚ್ಚರಿ. ಬಂದವರೆ ಸೀದಾ ಮದುಮಗನಿದ್ದ ಕೋಣೆಗೆ ತೆರಳಿದ್ದಾರೆ. ಆತನ ಕತ್ತಿನ ಪಟ್ಟಿ ಹಿಡಿದು ಎಳೆದುಕೊಂಡು ಹೋಗಿ ಅರೆಸ್ಟ್‌ ಮಾಡಿದ್ದಾರೆ. ಈ ಘಟನೆ ನಡೆದಿರುವ ಹರಿಯಾಣದ ರೋಹ್ಟಕ್‌ನಲ್ಲಿ. ಎರಡು ತಿಂಗಳ ಹಿಂದೆಯಷ್ಟೇ ಅಪ್ತಾಪ್ತ ಬಾಲಕಿಯನ್ನು ರೇಪ್‌ ಮಾಡಿದ್ದ ಕಾರಣಕ್ಕೆ ಮದುಮಗನನ್ನು ಪೊಲೀಸರು ಅರೆಸ್ಟ್‌ ಮಾಡಿದ್ದರು. ರೇಪ್‌ ಮಾಡಿದ್ದರೂ, ಮದುವೆಗೂ ಆರಾಮವಾಗಿ ಸಿದ್ದವಾಗುತ್ತಿದ್ದ ಆರೋಪಿಯ ಬಗ್ಗೆ ಮಾಹಿತಿ ಸಿಕ್ಕ ತಕ್ಷಣವೇ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದರೊಂದಿಗೆ ಪೊಲೀಸರು ರೇಪ್‌ ಆಗಿದ್ದ ಹುಡುಗಿಗೆ ತಕ್ಕ ಮಟ್ಟಿಗಿನ ನ್ಯಾಯ ಕೊಡಿಸಿದ್ದಲ್ಲದೆ, ಇನ್ನೊಬ್ಬ ಹುಡುಗಿಯ ಬಾಳು ಹಾಳಾಗುವುದನ್ನೂ ತಪ್ಪಿಸಿದ್ದಾರೆ. ಬೆಳಗ್ಗೆ ಮೆರವಣಿಗೆ ಹೋಗುವ ಸಂಭ್ರಮದಲ್ಲಿದ್ದ ಮದುಮಗ ತನ್ನ ಕೋಣೆಗೆ ಪೊಲೀಸರು ಬಂದ ಬೆನ್ನಲ್ಲಿಯೇ, ಕೋಣೆಯ ಚಿಲಕ ಹಾಕಿ ಪೊಲೀಸರ ಕಾಲಿಗೆ ಬಿದ್ದು, ಈಗ ನನ್ನ ಬಂಧಿಸಬೇಡಿ ಎಂದು ಬೇಡಿಕೊಂಡಿದ್ದಾರೆ.

ಸಮಾಜದ ಎದುರು ನನ್ನ ಗೌರವಕ್ಕೆ ಧಕ್ಕೆ ಆಗುತ್ತದೆ ಎಂದು ಮದುಮಗ ಪರಿಪರಿಯಾಗಿ ಬೇಡಿಕೊಂಡರೂ, ಪೊಲೀಸರು ಮಾತ್ರ ಆತನನ್ನು ಬಂಧಿಸಿ ಕೋರ್ಟ್‌ನ ಮುಂದೆ ನಿಲ್ಲಿಸಿದ್ದಾರೆ. ಬಳಿಕ ಕೋರ್ಟ್‌ ಆತನನ್ನು ಪೊಲೀಸ್‌ ಕಸ್ಟಡಿಗೆ ಒಪ್ಪಿಸಿದೆ.

ಮನೆಗೆ ನುಗ್ಗಿ 17 ವರ್ಷದ ಹುಡುಗಿಯ ರೇಪ್‌ ಮಾಡಿದ್ದ: ನಗರದ ಕಾಲೋನಿಯೊಂದರ ನಿವಾಸಿ 17 ವರ್ಷದ ಬಾಲಕಿ ಪೊಲೀಸರಿಗೆ ನೀಡಿದ ದೂರಿನಲ್ಲಿ, ಸುಮಾರು ಎರಡು-ಮೂರು ತಿಂಗಳ ಹಿಂದೆ ಜಜ್ಜರ್‌ನ ಯುವಕನೊಬ್ಬ ತನ್ನ ನೆರೆಹೊರೆಯಲ್ಲಿ ವಾಸಿಸಲು ಬಂದಿದ್ದ. ಒಂದು ದಿನ ಮನೆಯ ಸದಸ್ಯರೆಲ್ಲಾ ಹೊರಗೆ ಹೋಗಿದ್ದಾಗ, ಈಕೆ ಮನೆಯಲ್ಲಿ ಒಬ್ಬಳೇ ಇದ್ದಳು. ಅಪ್ರಾಪ್ತ ಬಾಲಕಿ ಮನೆಯಲ್ಲಿ ಒಬ್ಬಳೇ ಇರುವುದನ್ನು ಕಂಡ ಆರೋಪಿ ಯುವಕ ಆಕೆಯ ಮನೆಗೆ ನುಗ್ಗಿದ್ದಾನೆ. ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಪ್ರತಿಭಟಿಸಿದ್ದಕ್ಕೆ ಇಡೀ ಕುಟುಂಬವನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಬರೆದಿದ್ದಾರೆ.

ಅತ್ಯಾಚಾರದ ನಂತರ ಅಪ್ರಾಪ್ತ ಬಾಲಕಿಯೂ ಗರ್ಭಿಣಿಯಾಗಿದ್ದಳು. ಇದಾದ ಬಳಿಕ ಅಪ್ರಾಪ್ತ ಬಾಲಕಿ ಜಜ್ಜರ್ ನಿವಾಸಿ ಯುವಕನ ವಿರುದ್ಧ ದೂರು ನೀಡಿದ್ದಾಳೆ. ಅತ್ಯಾಚಾರ ಮಾಡಿದ್ದಲ್ಲದೆ, ಈಗ ಆತ 2ನೇ ಮದುವೆಗೆ ಯೋಚನೆ ಮಾಡುತ್ತಿದ್ದಾನೆ ಎಂದು ಹುಡುಗಿ ಪೊಲೀಸರಿಗೆ ತಿಳಿಸಿದ್ದಾಳೆ. ಇನ್ನೊಂದೆಡೆ, ಗರ್ಭಿಣಿಯಾಗಿದ್ದರೂ, ಗರ್ಭಪಾತ ಮಾಡಿಕೊಳ್ಳಲು ಹುಡುಗಿ ನಿರಾಕರಿಸಿದ್ದಾಳೆ. ಮಗುವನ್ನು ತಾನು ನೋಡಿಕೊಳ್ಳುವುದಾಗಿ ಹೇಳಿದ್ದಾಳೆ.

Bengaluru: ಕೇರಳ ಯುವತಿ ಮೇಲೆ ಗ್ಯಾಂಗ್‌ ರೇಪ್‌ ಮಾಡಿದವರ ಸೆರೆ

ಬುಧವಾರ ಮಧ್ಯಾಹ್ನ ಪೊಲೀಸರು ಆರೋಪಿ ಯುವಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಯುವಕನ ಮದುವೆ ಗುರುವಾರ ನಡೆಯಲಿರುವ ವಿಷಯ ತಿಳಿದ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾದರು. ತಕ್ಷಣ ಆತನ ಮನೆ ಮೇಲೆ ದಾಳಿ ನಡೆಸಿದ ಪೊಲೀಸ್ ತಂಡ ಆರೋಪಿಯಾಗಿರುವ ವರನನ್ನು ಬಂಧನ ಮಾಡಿದೆ. ವಿವಾಹದ ಮೆರವಣಿಗೆ ಸಿದ್ಧತೆಯಲ್ಲಿರುವಾಗಲೇ ವರನ ಬಂಧನವಾಗಿದ್ದರಿಂದ ಎಲ್ಲರೂ ಆಘಾತಗೊಂಡಿದ್ದರು. ಸಂಬಂಧಿಗಳು ವರ ಬಂಧನ ಆಗುತ್ತಿರುವುದನ್ನು ನೋಡಿ ಅಚ್ಚರಿ ಪಟ್ಟಿದ್ದರು.

ಪಂಜಾಬ್‌ನಲ್ಲಿ ನಾಲ್ವರು ಕಾಮುಕಿಯರಿಂದ ಪುರುಷನ ಮೇಲೆ ಅತ್ಯಾಚಾರ..!

ವರನೊಂದಿಗೆ ಅವರೂ ಕೂಡ ಮದುವೆ ಮುಗಿದ ಬಳಿಕ ಬಂಧನ ಮಾಡುವಂತೆ ಪೊಲೀಸರಿಗೆ ಮನವಿ ಮಾಡಿದ್ದರು. ಆದರೆ, ಪೊಲೀಸರು ಮಾತ್ರ ಕಾನೂನಿನ ಎಚ್ಚರಿಕೆ ನೀಡಿ ಬಂಧನ ಮಾಡಿದ್ದಾರೆ.  ಈ ಕುರಿತು ಡಿ.14ರಂದು ಮಹಿಳಾ ಪೊಲೀಸ್ ಠಾಣೆಗೆ ದೂರು ಬಂದಿದೆ ಎಂದು ರೋಹ್ಟಕ್‌ನ ಮಹಿಳಾ ಪೊಲೀಸ್ ಠಾಣೆ ಪ್ರಭಾರಿ ಪ್ರಮೀಳಾ ತಿಳಿಸಿದ್ದಾರೆ. ಬಳಿಕ ರೇಪ್‌ಗೆ ಒಳಪಟ್ಟಾಕೆಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿತ್ತು. ನಂತರ ಪೊಲೀಸರು ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ಕ್ರಮ ಕೈಗೊಂಡ ನಂತರ ಅತ್ಯಾಚಾರ ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ವಿಷಯವನ್ನು ತನಿಖೆ ಮಾಡಲಾಗುತ್ತಿದೆ.
 

Follow Us:
Download App:
  • android
  • ios