Asianet Suvarna News Asianet Suvarna News

ದೇವರು ಎಸೆದ ಕಣ್ಣನ್ನು ಬಿತ್ತಿದಾಗ ಗಾಂಜಾ ಬೀಜ ಸೃಷ್ಟಿ: ಪೊಲೀಸರಿಗೆ ಆರೋಪಿ ಪಾಠ

ಪೊಲೀಸರಿಗೆ ಗಾಂಜಾ ಹುಟ್ಟಿದ ಪಾಠ ಹೇಳಿದ ಗಾಂಜಾ ಆರೋಪಿ| ಪರಸಪ್ಪ ಬಂಧಿತ ಗಾಂಜಾ ಆರೋಪಿ|ಹಿಂದೆ ಇದ್ದ ಐವರು ಶರಣರು ಕೂಡಿಕೊಂಡು ಬಿತ್ತಿದ ಬೀಜವೇ ಗಾಂಜಾ ಗಿಡವಾಗಿದೆ| 

Accused Lesson to Police About Marijuana
Author
Bengaluru, First Published Sep 12, 2020, 11:20 AM IST
  • Facebook
  • Twitter
  • Whatsapp

ರಾಯಚೂರು(ಸೆ.12): ಪರಮಾತ್ಮ ಮೇಲಿಂದ ಭೂಮಿಗೆ ಒಗೆದ ಕಣ್ಣು ಒಡೆದು ಬಿತ್ತಿದಾಗ ಅದು ಗಾಂಜಾ ಬೀಜವಾಗಿದೆ ಎಂದು ಗಾಂಜಾ ಆರೋಪಿ ಪರಸಪ್ಪ(68) ಪೊಲೀಸರಿಗೆ ನೀತಿ ಕಥೆ ಹೇಳಿರುವ ಪ್ರಸಂಗ ಜಿಲ್ಲೆಯ ಲಿಂಗಸುಗೂರಿನ ಗುಜಲೋರದೊಡ್ಡಿಯಲ್ಲಿ ಶುಕ್ರವಾರ ನಡೆದಿದೆ.

ತಮ್ಮ ಹೊಲದಲ್ಲಿ ತೊಗರಿ ಜೊತೆಗೆ ಗಾಂಜಾ ಬೆಳೆದಿದ್ದ ಪರಸಪ್ಪ ಮತ್ತು ಅಮರೇಶನನ್ನು ಬಂಧಿಸಿ, 16 ಸಾವಿರ ಮೌಲ್ಯದ 9 ಕೆಜಿ ಗಾಂಜಾ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದ ವೇಳೆ ಆರೋಪಿ ಪರಸಪ್ಪ, ಪರಮಾತ್ಮನ ಒಂದು ಕಣ್ಣು ಭೂಮಿ ಮೇಲೆ ಬಿದ್ದಿದ್ದು, ಅದನ್ನು ಹಿಂದಿನ ಶರಣರು ಒಡೆದು ಭೂಮಿಯಲ್ಲಿ ಬಿತ್ತಿದಾಗ ಗಾಂಜಾ ಗಿಡವಾಗಿ ಬೆಳೆದಿದೆ. 

ಕಲಬುರಗಿ ಗಾಂಜಾಕೋರ ಬಿಜೆಪಿ ಕಾರ್ಯಕರ್ತ: ಕಾಂಗ್ರೆಸ್‌

ಹಿಂದೆ ಇದ್ದ ಐವರು ಶರಣರು ಕೂಡಿಕೊಂಡು ಬಿತ್ತಿದ ಬೀಜವೇ ಗಾಂಜಾ ಗಿಡವಾಗಿದೆ. ಮಾನವ ಜನ್ಮ ಪಂಚಭವತಿ, ನಾ ಪಂಚಭವತಿ ಇದನ್ನು ಅವರೇ ಹೇಳಿದ್ದಾರೆ. ಹೀಗೆ ತನಗೆ ತಿಳಿದಿರುವ ಕಥೆಯನ್ನು ಹೇಳಿರುವ ಆರೋಪಿ ಮಾತುಗಳಿಗೆ ಪೊಲೀಸರು ಹೂಂಗುಟ್ಟಿದ್ದಾರೆ.
 

Follow Us:
Download App:
  • android
  • ios