Mangaluru crime: ಕೊಲೆ, ದರೋಡೆ ಕೃತ್ಯ ನಡೆಸಿ ತಲೆಮರೆಸಿಕೊಂಡಿದ್ದ ಜಪಾನ್ ಮಂಗ ಸೆರೆ
ನಗರದ ವಿವಿಧೆಡೆ ಹಲವು ಪ್ರಕರಣದಲ್ಲಿ ಭಾಗಿಯಾಗಿ ನ್ಯಾಯಾಲಯದಲ್ಲಿ ವಿಚಾರಣಾ ಸಮಯ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ನಗರ ಅಪರಾಧ ಪತ್ತೆದಳದ ಪೊಲೀಸರು ಬಂಧಿಸಿದ್ದಾರೆ. ಕಾವೂರು ಕುಂಜತ್ತಬೈಲ್ ನಿವಾಸಿ ರಾಜ ಯಾನೆ ಜಪಾನ್ ಮಂಗ ಯಾನೆ ರೋಹನ್ ರೆಡ್ಡಿ (36) ಬಂಧಿತ ಆರೋಪಿ.
ಮಂಗಳೂರು (ಮಾ.15) : ನಗರದ ವಿವಿಧೆಡೆ ಹಲವು ಪ್ರಕರಣದಲ್ಲಿ ಭಾಗಿಯಾಗಿ ನ್ಯಾಯಾಲಯದಲ್ಲಿ ವಿಚಾರಣಾ ಸಮಯ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ನಗರ ಅಪರಾಧ ಪತ್ತೆದಳದ ಪೊಲೀಸರು ಬಂಧಿಸಿದ್ದಾರೆ. ಕಾವೂರು ಕುಂಜತ್ತಬೈಲ್ ನಿವಾಸಿ ರಾಜ ಯಾನೆ ಜಪಾನ್ ಮಂಗ(Japan manga) ಯಾನೆ ರೋಹನ್ ರೆಡ್ಡಿ (36) ಬಂಧಿತ ಆರೋಪಿ.
ಈತನ ವಿರುದ್ಧ ಮಂಗಳೂರಿನ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಲ್ಲೆ, ಕೊಲೆ ಯತ್ನ, ಕೊಲೆ, ದರೋಡೆ ಪ್ರಕರಣವಿದ್ದು, ನ್ಯಾಯಾಲಯದಲ್ಲಿ ಜಾಮೀನು ಪಡೆದುಕೊಂಡು ಬಿಡುಗಡೆಗೊಂಡ ನಂತರ ಪ್ರಕರಣದ ವಿಚಾರಣಾ ಸಮಯ ಹಾಜರಾಗದೇ 2017ರಿಂದ ತಲೆಮರೆಸಿಕೊಂಡಿದ್ದ. ಈತ ಬೆಂಗಳೂರಿನ ಕೋರಮಂಗಲ ಎಸ್‌ಜಿಪಾಳ್ಯದಲ್ಲಿ ತಲೆಮರೆಸಿಕೊಂಡಿದ್ದು, ಅಲ್ಲಿಂದಲೇ ವಶಕ್ಕೆ ಪಡೆಯಲಾಗಿದೆ. ಈತನ ವಿರುದ್ಧ ನ್ಯಾಯಾಲಯದ ಎಲ್‌ಪಿಸಿ ವಾರಂಟ್ ಹೊರಡಿಸಲಾಗಿತ್ತು. ಈತನನ್ನು ಮುಂದಿನ ಕ್ರಮಕ್ಕಾಗಿ ಕದ್ರಿ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.\
18 ವರ್ಷದ ಬಳಿಕ ಕೊಲೆ ಆರೋಪಿ ಅರೆಸ್ಟ್, ತಂತ್ರಜ್ಞಾನ ಮೂಲಕ ಪ್ರಕರಣ ಬೇಧಿಸಿದ ಬೆಂಗಳೂರು ಪೊಲೀಸ್!
ಆರೋಪಿ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಎಸಿಪಿ ಪಿ.ಎ. ಹೆಗ್ಡೆ, ಪೊಲೀಸ್ ಇನ್‌ಸ್ಪೆಕ್ಟರ್ ಶ್ಯಾಮ್‌ಸುಂದರ್ ಎಚ್.ಎಂ., ಎಎಸ್‌ಐ ಮೋಹನ್ ಕೆ.ವಿ. ಹಾಗೂ ಸಿಸಿಬಿ ಸಿಬ್ಬಂದಿ ಪಾಲ್ಗೊಂಡಿದ್ದರು.
ತಲೆಮರೆಸಿಕೊಂಡ ಇತರ ಐವರ ಸೆರೆ: ಉಳಿದ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಇತರ ಆರೋಪಿಗಳನ್ನೂ ಪೊಲೀಸರು ಬಂಧಿಸಿದ್ದಾರೆ. ಪ್ರಕಾಶ ಶೆಟ್ಟಿಮಂಗಳೂರಿನ ಪಡೀಲ್ ನಿವಾಸಿಯಾಗಿದ್ದು, ಈತನ ಮೇಲೆ ಮಂಗಳೂರಿನ ಬರ್ಕೆ, ಕಂಕನಾಡಿ ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದವು. ಕೃಷ್ಣಾಪುರದ ನಿಸ್ಸಾರ್ ಹುಸೈನ್ ಮೇಲೆ ಬರ್ಕೆ, ಸುರತ್ಕಲ್, ಮುಲ್ಕಿ ಮತ್ತು ಪುತ್ತೂರು ಹಾಗೂ ಇತರ ಕೆಲವು ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು. ಕಬೀರ್ ಆಲಿಯಾಸ್ ಅಬ್ದುಲ್ ಕಬೀರ್ ಆಲಿಯಾಸ್ ಕಬ್ಬಿ(30) ಮಂಗಳೂರು ಕಸಬಾ ಬೆಂಗ್ರೆಯವನಾಗಿದ್ದು ಈತನ ಮೇಲೆ ಪಣಂಬೂರು, ಮಂಗಳೂರು ದಕ್ಷಿಣ ಠಾಣೆ, ಪೂರ್ವ ಠಾಣೆ, ಕಂಕನಾಡಿ, ಬಜಪೆ ಮತ್ತು ಉಪ್ಪಿನಂಗಡಿ ಪೊಲೀಸ್ ಠಾಣೆಗಳಲ್ಲಿ 8 ಪ್ರಕರಣಗಳಲ್ಲಿ ಜಾಮೀನುರಹಿತ ವಾರಂಟ್ ಇತ್ತು. ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದ ಅಚ್ಯುತ ಮತ್ತು ರಿಜ್ವಾನ್ ಬಂಧಿಸಲ್ಪಟ್ಟಇತರ ಇಬ್ಬರು ಆರೋಪಿಗಳು ಎಂದು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್. ಜೈನ್ ತಿಳಿಸಿದ್ದಾರೆ.
Coimbatore car blast case ಎನ್ಐಎ ತಂಡ ಸ್ಥಳಕ್ಕೆ ಭೇಟಿ, 6ನೇ ಆರೋಪಿ ಅರೆಸ್ಟ್!