Asianet Suvarna News Asianet Suvarna News

Belagavi: ವನ್ಯಜೀವಿಗಳ ಅಂಗಾಂಗ ಸಾಗಾಟ : ಓರ್ವನ ಬಂಧನ

ವನ್ಯಜೀವಿಗಳ ಅಂಗಾಂಗ ಸಾಗಾಟ ಮಾಡುತ್ತಿದ್ದ ಅಂತಾರಾಜ್ಯದ ವ್ಯಕ್ತಿಯೋರ್ವನನ್ನು ಬಂಧಿಸಿದ ಅರಣ್ಯ ಸಂಚಾರಿ ದಳದ (ಸಿಐಡಿ) ಅಧಿಕಾರಿಗಳು, ಆತನಿಂದ ಅಪಾರ ಪ್ರಮಾಣದ ವನ್ಯಜೀವಿಗಳ ಅಂಗಾಂಗವನ್ನು ವಶಪಡಿಸಿಕೊಂಡಿದ್ದಾರೆ. 

Accused Arrsted For Trafficking of wildlife organs At Belagavi gvd
Author
First Published Apr 12, 2023, 11:30 PM IST

ಬೆಳಗಾವಿ (ಏ.12): ವನ್ಯಜೀವಿಗಳ ಅಂಗಾಂಗ ಸಾಗಾಟ ಮಾಡುತ್ತಿದ್ದ ಅಂತಾರಾಜ್ಯದ ವ್ಯಕ್ತಿಯೋರ್ವನನ್ನು ಬಂಧಿಸಿದ ಅರಣ್ಯ ಸಂಚಾರಿ ದಳದ (ಸಿಐಡಿ) ಅಧಿಕಾರಿಗಳು, ಆತನಿಂದ ಅಪಾರ ಪ್ರಮಾಣದ ವನ್ಯಜೀವಿಗಳ ಅಂಗಾಂಗವನ್ನು ವಶಪಡಿಸಿಕೊಂಡಿದ್ದಾರೆ. ಮಹಾರಾಷ್ಟ್ರಸ ನಾಸೀಕ್‌ ಜಿಲ್ಲೆಯ ಅಸವಲದಾರಾ ಗ್ರಾಮದ ನಿವಾಸಿ ಪವನ್‌ ಜಾಫರ್‌ ಭೋಸಲೆ (60) ಬಂಧಿತ. 

ಈತನಿಂದ 807 ಉಡದ ಶಿಶ್ನಗಳು, 116 ಇಂದ್ರಜಾಲಗಳು, 02 ಕಾಡ ಬೆಕ್ಕಿನ ಪಾದಗಳು, 02 ಕಾಡ ಬೆಕ್ಕಿನ ಉಗುರುಗಳು, 03 ಕರಡಿಯ ಉಗುರುಗಳು, 28 ನೀರು ಪಕ್ಷಿಯ ಉಗುರುಗಳು, 02 ಉಡದ ಕಾಲುಗಳು, 73 ಗೂಬೆಯ ಪುಕ್ಕಗಳು, 04 ಕರಡಿಯ ಹಲ್ಲುಗಳು, 32 ಮುಂಗಸಿಯ ಕಾಲುಗಳು, 07 ಮುಂಗುಸಿಯ ದವಡೆಗಳು, 16 ಮುಂಗುಸಿಯ ಚರ್ಮದಿಂದ ಮಾಡಿ ಉಂಡೆಗಳು, 26 ಕಾಡು ಹಂದಿಯ ಹಲ್ಲುಗಳು, 03 ಅಪರಿಚಿತ ಕಾಡು ಪ್ರಾಣಿಗಳ ಉಗುರುಗಳು,04 ಕೃಷ್ಣಮೃಗ ಕೊಂಬುಗಳು, 02 ಕೃಷ್ಣಮೃಗ ಕೊಂಬು ಸಮೇತ ಇರುವ ಬುರುಡೆಗಳು ಹಾಗೂ 07 ಕೃಷ್ಣಮೃಗದ ಚರ್ಮಗಳನ್ನು ವಶಪಡಿಸಿಕೊಂಡಿದ್ದಾರೆ.

ರಾಮ​ನ​ಗರ ಕ್ಷೇತ್ರ​ದಲ್ಲಿ ಕಾಂಗ್ರೆಸ್‌-ಜೆಡಿಎಸ್‌​ ಅಭ್ಯ​ರ್ಥಿ​ಗ​ಳಿಗೆ ಅಳಿವು ಉಳಿ​ವಿನ ಪ್ರಶ್ನೆ?

ಬಂಧಿತ ಆರೋಪಿ ಪವನ್‌ ಭೋಸಲೆ ಮಂಗಳವಾರ ಮಧ್ಯಾಹ್ನ ವನ್ಯಜೀವಿಗಳ ಅಂಗಾಂಗಳನ್ನು ಸಾಗಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಕಲೆ ಹಾಕಿದ ಅರಣ್ಯ ಸಂಚಾರಿ ದಳದ ಅಧಿಕಾರಿಗಳು, ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬಾಗಲೂರ ಗ್ರಾಮದ ಬಸ್‌ ನಿಲ್ದಾಣದ ಹತ್ತಿರ ದಾಳಿ ನಡೆಸಿದ್ದಾರೆ.

ಬೈಕ್‌ ಕಳ್ಳರ ಪತ್ತೆ, 18 ಬೈಕ್‌ಗಳು ವಶ: ಚಿಟಗುಪ್ಪ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಕಳುವಾದ 10 ದ್ವಿಚಕ್ರ ವಾಹನ, ಟ್ಯಾಂಕರ್‌ ಟೈರ್‌, ರೈತರ 350 ಕೆ.ಜಿ ಸೋಯಾಬಿನ್‌, 250 ಕೆ.ಜಿ ಅಲಸಂದರೆ ಹಾಗೂ 840 ಕೆ.ಜಿ ತೊಗರಿ ಬೆಳೆಯನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಚಿಟಗುಪ್ಪ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ 7 ಕಳುವು ಪ್ರಕರಣಗಳಲ್ಲಿ ಹಾಗೂ ತೆಲಂಗಣಾದ ಜಹೀರಾಬಾದ್‌ನ 3 ಪ್ರಕರಣಗಳಲ್ಲಿ, ಕಲಬುರಗಿ ಜಿಲ್ಲೆಯ ಚಿಂಚೋಳಿ, ಕೂಡ್ಲಿ 2 ಪ್ರಕರಣಗಳಲ್ಲಿ ಹಾಗೂ ಬಸವಕಲ್ಯಾಣ ತಾಲೂಕಿನ ಹಂದ್ರಾಳ ಗ್ರಾಮದಲ್ಲಿ ಕಳುವಾದ ಒಂದು ಪ್ರಕರಣ ಹೀಗೆ ಒಟ್ಟು 13 ಪ್ರಕರಣಗಳಲ್ಲಿ ಕಳುವಾದ 18 ಬೈಕ್‌ಗಳು ಹಾಗೂ 350 ಕೆ.ಜಿ ಸೋಯಾಬಿನ್‌, 250 ಕೆ.ಜಿ ಅಲಸಂದರೆ ಮತ್ತು 840 ಕೆ.ಜಿ ತೊಗರಿ ಜಪ್ತಿ ಮಾಡಿಕೊಂಡು ಪ್ರಕರಣಕ್ಕೆ ಸಂಬಂಧಿಸಿದಂತೆ 4 ಜನ ಆರೋಪಿತರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಬಿಜೆಪಿಯಿಂದ ಟಿಕೆಟ್ ದೊರೆತ ಸಂತೋಷದ ಹೊತ್ತಲ್ಲೇ ಭಟ್ಕಳ ಶಾಸಕ ಸುನೀಲ್ ನಾಯ್ಕ್‌ಗೆ ಪಿತೃ ವಿಯೋಗ!

18 ದ್ವಿಚಕ್ರ ವಾಹನದ ಅಂದಾಜು 15.55ಲಕ್ಷ ರು, 1.18 ಲಕ್ಷ ಮೌಲ್ಯದ ರೈತರ ದವಸ-ಧಾನ್ಯ, ನಗದು 20 ಸಾವಿರ ಜಪ್ತಿ ಪಡಿಸಿಕೊಳ್ಳಲಾಗಿದೆ ಎಂದು ಎಸ್‌ಪಿ ಅವರು ಮಾಹಿತಿ ನೀಡಿದರು. ಈ ಕುರಿತಂತೆ ಪೊಲೀಸ್‌ ಅಧೀಕ್ಷಕ ಚನ್ನಬಸವಣ್ಣ ಎಸ್‌ಎಲ್‌, ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಮಹೇಶ ಮೇಘಣ್ಣನವರ, ಎಸಿಪಿ ಶಿವಾಂಶು ರಜಪೂತ ಅವರ ಮಾರ್ಗದರ್ಶನ ಹಾಗೂ ಚಿಟಗುಪ್ಪ ಸಿಪಿಐ ಮಹೇಶ ಗೌಡ ಪಾಟೀಲ್‌ ಪಿಎಸ್‌ಐ ಮಹೇಂದ್ರಕುಮಾರ, ಪಿಎಸ್‌ಐ ಹುಸೇನಸಾಬ್‌ ನೇತೃತ್ವದಲ್ಲಿ ತಂಡ ರಚಿಸಿ ಕಾರ್ಯಾಚರಣೆ ನಡೆಸಲಾಗಿತ್ತು.

Follow Us:
Download App:
  • android
  • ios