Asianet Suvarna News Asianet Suvarna News

ಬೆಂಗಳೂರು: ಬಾಡಿಗೆಗೆ ಕಾರುಗಳನ್ನು ಪಡೆದು ಮಾರುತ್ತಿದ್ದ ಖದೀಮ ಅರೆಸ್ಟ್‌..!

ಕಾಳೇನ ಅಗ್ರಹಾರದ ಎಂಎಲ್‌ಎ ಲೇಔಟ್ ನಿವಾಸಿ ಮಹೇಶ್ ಜಾ ಎಂಬುವವರ ಕಾರನ್ನು ಒಂದು ತಿಂಗಳ ಮಟ್ಟಿಗೆ ಬಾಡಿಗೆಗೆ ಪಡೆದು ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ತನಿಖೆ ನಡೆಸಿ ಶಿವಮೊಗ್ಗದಲ್ಲಿ ಆರೋಪಿಯನ್ನು ಬಂಧಿಸಿ ಕರೆತರಲಾಗಿದೆ. 
 

Accused Arrested who Buying and Selling Cars on Rent in Bengaluru grg
Author
First Published Jun 22, 2024, 11:35 AM IST

ಬೆಂಗಳೂರು(ಜೂ.22):  ಕಾರುಗಳನ್ನು ಬಾಡಿಗೆಗೆ ಪಡೆದು ಬಳಿಕ ಜಿಪಿಎಸ್ ಕಿತ್ತೆಸೆದು ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಅಥವಾ ಗಿರವಿ ಇಡುತ್ತಿದ್ದ ಆರೋಪಿಯನ್ನು ಹುಳಿಮಾವು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಲಗ್ಗೆರೆ ನಿವಾಸಿ ಶ್ರೀನಿವಾಸ(35) ಬಂಧಿತ ಆರೋಪಿಯಿಂದ 90 ಲಕ್ಷ ರು. ಮೌಲ್ಯದ ವಿವಿಧ ಕಂಪನಿಗಳ 9 ಕಾರುಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಕಾಳೇನ ಅಗ್ರಹಾರದ ಎಂಎಲ್‌ಎ ಲೇಔಟ್ ನಿವಾಸಿ ಮಹೇಶ್ ಜಾ ಎಂಬುವವರ ಕಾರನ್ನು ಒಂದು ತಿಂಗಳ ಮಟ್ಟಿಗೆ ಬಾಡಿಗೆಗೆ ಪಡೆದು ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ತನಿಖೆ ನಡೆಸಿ ಶಿವ ಮೊಗ್ಗದಲ್ಲಿ ಆರೋಪಿಯನ್ನು ಬಂಧಿಸಿ ಕರೆತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರೇಣುಕಾಸ್ವಾಮಿ ಎದೆ, ವೃಷಣ ತುಳಿದು ಡಿ’ಗ್ಯಾಂಗ್‌ ಹಿಂಸೆ..!

ಸಾಮಾಜಿಕ ಜಾಲತಾಣದಲ್ಲಿ ಹುಡುಕಾಡಿ ಗಾಳ: 

ಆರೋಪಿ ಶ್ರೀನಿವಾಸ್, ಫೇಸ್‌ಬುಕ್, ಒಎಲ್‌ಎಕ್ಸ್ ಸೇರಿದಂತೆ ಇತರೆ ಜಾಲತಾಣಗಳಲ್ಲಿ ಕಾರು ಬಾಡಿಗೆಗೆ ಇರುವ ಅಥವಾ ಮಾರಾಟಕ್ಕೆ ಇರುವ ಜಾಹೀರಾತು ಹಾಕುವ ವ್ಯಕ್ತಿಗಳನ್ನು ಸಂಪರ್ಕಿಸುತ್ತಿದ್ದ. ಕಾರಿನ ಸಾಲದ ಕಂತು ಪಾವತಿಸಲು ಪರದಾಡುವ ವ್ಯಕ್ತಿಗಳನ್ನು ಗುರು ತಿಸಿ, ನಾನೇ ಬಾಡಿಗೆಗೆ ಕಾರನ್ನು ಓಡಿಸಿಕೊಂಡು ಕಾರಿನ ಸಾಲದ ಕಂತನ್ನು ಪಾವತಿ ಮಾಡುತ್ತೇನೆ. ನಿಮಗೂ ತಿಂಗಳಿಗೆ ಇಂತಿಷ್ಟು ಹಣ ನೀಡುವುದಾಗಿ ಹೇಳಿ ನಂಬಿಸುತ್ತಿದ್ದ.

ರೇಣುಕಾಸ್ವಾಮಿ ಹತ್ಯೆ ಪ್ರಕರಣ: ದರ್ಶನ್ ಗ್ಯಾಂಗ್‌ಗೆ ಡಿಎನ್‌ಎ ಟೆಸ್ಟ್‌..!

ಆಡಮಾನ ಇರಿಸಿ ಹಣ ಪಡೆಯುತ್ತಿದ್ದ !: 

ಬಳಿಕ ಆ ಕಾರುಗಳ ಮಾಲೀಕರಿಂದ ಅಸಲಿ ಆರ್‌ಸಿ, ವಿಮಾ ಪಾಲಿಸಿ ಸೇರಿದಂತೆ ಇತರೆ ದಾಖಲೆಗಳನ್ನು ಮೊಬೈಲ್ ನಲ್ಲಿ ಫೋಟೋ ತೆಗೆದುಕೊಂಡು ಬಳಿಕ ಆ ದಾಖಲೆಗಳನ್ನು ಎಡಿಟ್ ಮಾಡಿ ತನ್ನ ಹೆಸರಿಗೆ ನಕಲಿ ದಾಖಲೆ ಸೃಷ್ಟಿಸುತ್ತಿದ್ದ. ನಂತರ ಕಾರಿನ ಜೆಪಿಎಸ್ ಕಿತ್ತೆಸೆದು ಪರಿಚಿತ ವ್ಯಕ್ತಿಗಳ ಮುಖಾಂತರ ಕಾರನ್ನು ಅಡಮಾನವಿ ರಿಸಿ 50 ಸಾವಿರ ರು.ನಿಂದ 1 ಲಕ್ಷ ರು. ಸಾಲ ಪಡೆಯು ತ್ತಿದ್ದ. ಬಳಿಕ ಕಾರಿನ ಸಾಲದ ಕಂತನ್ನು ಪಾವತಿಸುತ್ತಿರಲಿಲ್ಲ.
ಮೊಬೈಲ್ ಸಂಖ್ಯೆ ಬದಲು: ಇನ್ನು ಬ್ಯಾಂಕಿನಿಂದ ಕಾರಿನ ಸಾಲದ ಕಂತು ಪಾವತಿಸುವಂತೆ ಕಾರಿನ ಮಾಲೀಕರಿಗೆ ನೋಟಿಸ್ ಬರುತ್ತಿತ್ತು. ಆಗ ಮಾಲೀಕರು ಶ್ರೀನಿವಾಸ್‌ನನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದರು. ಆದರೆ, ಶ್ರೀನಿವಾಸ ತನ್ನ ಮೊಬೈಲ್ ಸಂಖ್ಯೆ ಬದಲಿಸಿಕೊಂಡು ಸಂಪರ್ಕಕ್ಕೆ ಸಿಗುತ್ತಿರಲಿಲ್ಲ. 

ಸುಮಾರು ₹90 ಲಕ್ಷ ಮೌಲ್ಯದ ಒಂಬತ್ತು ಕಾರುಗಳ ಜಪ್ತಿ

ಆರೋಪಿ ಶ್ರೀನಿವಾಸನಿಂದ ಜಪ್ತಿ ಮಾಡಲಾದ 9 ಕಾರುಗಳ ಪೈಕಿ ಮೂರುಕಾರುಗಳನ್ನು ಅಡಮಾನ ಇರಿಸಿದ್ದ. ಮೂರು ಕಾರುಗಳನ್ನು ಮಾರಾಟ ಮಾಡಿದ್ದ, ಉಳಿದ ಮೂರು ಕಾರುಗಳ ಮಾರಾಟಕ್ಕೆ ಗಿರಾಕಿಗಳನ್ನು ಹುಡುಕುತ್ತಿದ್ದ. ಆರೋಪಿಯು ನಗರದ ಹಲವೆಡೆ ಈ ರೀತಿ ಕಾರು ಪಡೆದು ವಂಚನೆ ಮಾಡಿರುವ ಸಾಧ್ಯತೆಯಿದ್ದು, ಹೆಚ್ಚಿನ ತನಿಖೆ ಯಿಂದ ಮತ್ತಷ್ಟು ಮಾಹಿತಿ ಹೊರಗೆ ಬೀಳಲಿದೆ.

Latest Videos
Follow Us:
Download App:
  • android
  • ios