Asianet Suvarna News Asianet Suvarna News

ಬೆಂಗಳೂರು: ಜೂಜಾಟಕ್ಕೆ ಅಣ್ಣನ ಮದುವೆ ತಂದಿದ್ದ ಚಿನ್ನ ಕದ್ದ..!

ಆರೋಪಿಯ ತಂದೆ-ತಾಯಿ ಹಿರಿಯ ಮಗನ ವಿವಾಹ ನಿಶ್ಚಯವಾಗಿದ್ದ ಹಿನ್ನೆಲೆಯಲ್ಲಿ ಆ.28 ರಂದು ಸಂಬಂಧಿಕರು ಹಾಗೂ ಸ್ನೇಹಿತರಿಗೆ ಲಗ್ನ ಪತ್ರಿಕೆ ಹಂಚಲು ಹೊರಗೆ ಹೋಗಿದ್ದರು. ಈ ವೇಳೆ ಮನೆಯಲ್ಲೇ ಇದ್ದ ಕಿರಿಯ ಮಗ ಆದಿತ್ಯ ರೆಡ್ಡಿ ಲಾಕರ್ ಮುರಿದು ಚಿನ್ನಾಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದ. 
 

Accused Arrested on Gold Theft Case in Bengaluru grg
Author
First Published Sep 14, 2024, 1:16 PM IST | Last Updated Sep 14, 2024, 1:16 PM IST

ಬೆಂಗಳೂರು(ಸೆ.14): ಆನ್‌ಲೈನ್ ಜೂಜಾಟದ ವ್ಯಸನಕ್ಕೆ ಬಿದ್ದು ವಿಪ ರೀತ ಸಾಲ ಮಾಡಿಕೊಂಡು ತನ್ನ ಮನೆಯಲ್ಲೇ ಚಿನ್ನಾಭರಣ ಕಳವು ಮಾಡಿದ್ದ ಆರೋಪಿಯನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೊಮ್ಮನಹಳ್ಳಿ ವಿರಾಟನಗರದ ಆದಿತ್ಯ ರೆಡ್ಡಿ (22) ಬಂಧಿತ ಆರೋಪಿಯಿಂದ 7 ಲಕ್ಷ ಮೌಲ್ಯದ 107 ಗ್ರಾಂ ಚಿನ್ನಾಭರಣಗಳು ಹಾಗೂ 100 ಗ್ರಾಂ ತೂಕದ ಬೆಳ್ಳಿಯ ದೇವರ ಮುಖವಾಡ ಜಪ್ತಿ ಮಾಡಲಾಗಿದೆ. 

ಆರೋಪಿಯ ತಂದೆ-ತಾಯಿ ಹಿರಿಯ ಮಗನ ವಿವಾಹ ನಿಶ್ಚಯವಾಗಿದ್ದ ಹಿನ್ನೆಲೆಯಲ್ಲಿ ಆ.28 ರಂದು ಸಂಬಂಧಿಕರು ಹಾಗೂ ಸ್ನೇಹಿತರಿಗೆ ಲಗ್ನ ಪತ್ರಿಕೆ ಹಂಚಲು ಹೊರಗೆ ಹೋಗಿದ್ದರು. ಈ ವೇಳೆ ಮನೆಯಲ್ಲೇ ಇದ್ದ ಕಿರಿಯ ಮಗ ಆದಿತ್ಯ ರೆಡ್ಡಿ ಲಾಕರ್ ಮುರಿದು ಚಿನ್ನಾಭರಣಗಳನ್ನು ಕಳವು ಮಾಡಿ ಪರಾರಿಯಾಗಿದ್ದ, ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಇನ್‌ಸ್ಪೆಕ್ಟ‌ರ್ ಪ್ರೀತಮ್ ನೇತೃತ್ವದಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ದೂರು ದಾಖಲಾದ ಆರು ತಾಸಿನೊಳಗೆ ಆರೋಪಿಯನ್ನು ಪತ್ತೆ ಹಚ್ಚಿ ಮಾಲು ಸಹಿತ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಯುವಕನ ಜತೆ ವಿವಾಹಿತ ಮಹಿಳೆಯ ಲವ್ವಿ ಡವ್ವಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾದ್ಲು ಅಂತ ತಾಯಿಯನ್ನೇ ಕೊಂದ ಮಗಳು..!

ಏನಿದು ಪ್ರಕರಣ?: 

ಆರೋಪಿ ಆದಿತ್ಯ ರೆಡ್ಡಿ ವೃತ್ತಿಯಲ್ಲಿ ಕ್ಯಾಬ್ ಚಾಲಕನಾಗಿದ್ದಾನೆ.ತಂದೆ-ತಾಯಿ ಹಾಗೂ ಸಹೋದರನ ಜತೆಗೆ ಬೊಮ್ಮನಹಳ್ಳಿಯ ವಿರಾಟನಗರ ಅದಿತ್ಯ ರೆಡ್ಡಿ ದಲ್ಲಿ ನೆಲೆಸಿದ್ದ. ಆನ್‌ಲೈನ್ ಜೂಜಾಟದ ವ್ಯಸನಕ್ಕೆ ಬಿದ್ದಿದ್ದ ಅದಿತ್ಯ ವಿಪರೀತ ಸಾಲ ಮಾಡಿಕೊಂಡಿದ್ದ. ಈ ನಡುವೆ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಸಹೋದರನ ಮದುವೆ ನಿಶ್ಚಯವಾಗಿದ್ದು, ಮದುವೆಗಾಗಿ ತಂದೆ-ತಾಯಿ ಚಿನ್ನಾಭರಣ ಖರೀದಿಸಿ ಮನೆಯ ಲಾಕರ್‌ನಲ್ಲಿ ಇರಿಸಿದ್ದರು. 
ತಂದೆ-ತಾಯಿಆ.28ರಂದುಸಂಬಂಧಿಕರು ಹಾಗೂ ಸ್ನೇಹಿತರಿಗೆ ಲಗ್ನ ಪತ್ರಿಕೆ ಹಂಚಲು ಮನೆಯಿಂದ ಹೊರಗೆ ಹೋಗಿದ್ದರು. ಈ ವೇಳೆ ಮನೆಯಲ್ಲಿ ಆದಿತ್ಯ ಮಾತ್ರ ಇದ್ದ. ತಂದೆ-ತಾಯಿಸಂಜೆಮನೆಗೆ ವಾಪಾಸ್‌ ಬಂದು ನೋಡಿದಾಗ ಲಾಕರ್ ಮುರಿದಿರುವುದು ಕಂಡುಬಂದಿದೆ. ಪರಿಶೀಲಿಸಿದಾಗ, 107 ಗ್ರಾಂ ಚಿನ್ನಾಭರಣ, 100 ಗ್ರಾಂ ತೂಕದ ಬೆಳ್ಳಿಯ ದೇವರಮುಖಡಹಾಗೂ 45 ಸಾವಿರನಗದು ಕಳುವಾಗಿರುವುದು ಕಂಡುಬಂದಿದೆ. ಕೂಡಲೇ ಬೊಮ್ಮನಹಳ್ಳಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. 

ಯಲಹಂಕ ರೈಲು ನಿಲ್ದಾಣದಲ್ಲಿ ಆರೋಪಿ ಪತ್ತೆ: 

ಈ ದೂರಿನ ಮೇರೆಗೆ ತನಿಖೆಗೆ ಇಳಿದ ಪೊಲೀಸರು, ಘಟನಾ ಸ್ಥಳ ಪರಿಶೀಲನೆ ಮಾಡಿದಾಗ, ಮನೆಯ ಬಾಗಿಲು ಮುರಿದಿರ ಲಿಲ್ಲ, ಆದರೆ, ರೂಮ್‌ನಲ್ಲಿನ ಬೀರುವಿನ ಲಾಕರ್ ಮಾತ್ರ ಮುರಿದಿರುವುದು ಕಂಡು ಬಂದಿದೆ. ಈ ಬಗ್ಗೆ ದೂರುದಾರರ ಕಿರಿಯ ಪುತ್ರನ ಬಗ್ಗೆ ಅನುಮಾನಗೊಂಡಪೊಲೀಸರು, ಆತನ ಮೊಬೈಲ್‌ಗೆ ಲೊಕೇಶನ್ ಪರಿಶೀಲನೆ ಮಾಡಿದಾಗ, ಯಲಹಂಕ ರೈಲು ನಿಲ್ದಾಣ ತೋರಿಸಿದೆ. ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಯಲಹಂಕ ರೈಲು ನಿಲ್ದಾಣಕ್ಕೆ ತೆರಳಿ ಮಾಲು ಸಹಿತ ಆದಿತ್ಯ ರೆಡ್ಡಿಯನ್ನುವಶಕ್ಕೆ ಪಡೆದಿದ್ದಾರೆ.

ಬಾಲಕಿ ಮೇಲೆ ರೇಪ್‌: ಕೇಸ್‌ ಹಾಕಿದ್ದಕ್ಕೆ ದಲಿತರಿಗೆ ಯಾದಗಿರಿಯಲ್ಲಿ ಬಹಿಷ್ಕಾರ..!

ಹೈದರಾಬಾದ್‌ಗೆ ಎಸ್ಕೆಪ್ ಯತ್ನ 

ಆರೋಪಿ ಆದಿತ್ಯ ಮನೆಯಲ್ಲಿ ಚಿನ್ನಾಭರಣ ಕದ್ದ ಬಳಿಕ ನೇರ ಯಲಹಂಕ ರೈಲು ನಿಲ್ದಾಣಕ್ಕೆ ಬಂದಿದ್ದಾನೆ.ಹೈದರಾಬಾದ್‌ ಎಸ್ಸೇಪ್ ಆಗಿಕೆಲದಿನ ಅಲ್ಲೇ ಉಳಿದುಕೊಳ್ಳಲುನಿರ್ಧರಿಸಿದ್ದ. ಹೀಗಾಗಿ ರೈಲಿನಲ್ಲಿ ಹೈದರಾಬಾದ್‌ಗೆ ತೆರಳಲು ಯಲಹಂಕ ರೈಲು ನಿಲ್ದಾಣದಕ್ಕೆ ಬಂದಿದ್ದ. ಅಷ್ಟರಲ್ಲಿ ಆರೋಪಿಯ ಮೊಬೈಲ್ ಲೋಕೇಷನ್ ಸುಳಿವು ಆಧರಿಸಿದ ಪೊಲೀಸರು, ಕೂಡಲೇ ರೈಲು ನಿಲ್ದಾಣಕ್ಕೆ ಬಂದು ಆದಿತ್ಯನನ್ನು ಬಂಧಿಸಿದ್ದಾರೆ.

ಆನ್‌ಲೈನ್ ಜೂಜಾಟಕ್ಕಾಗಿ ಕಳವು 

ಬಳಿಕ ಆರೋಪಿ ಆದಿತ್ಯನನ್ನು ಪೊಲೀಸರು ಠಾಣೆಗೆ ಕರೆತಂದು ವಿಚಾರಣೆ ಮಾಡಿದಾಗ, ಆನ್‌ಲೈನ್ ಬೆಟ್ಟಿಂಗ್ ಚಟದಿಂದ ವಿಪರೀತ ಸಾಲ ಮಾಡಿಕೊಂಡಿದ್ದ ವಿಚಾರ ಬೆಳಕಿಗೆ ಬಂದಿದೆ. ಸಾಲ ತೀರಿಸಲು ಹಾಗೂ ಆನ್‌ಲೈನ್ ಜೂಜಾಟಕ್ಕೆ ಹಣದ ಅವಶ್ಯಕತೆ ಇದ್ದ ಹಿನ್ನೆಲೆಯಲ್ಲಿ ಮನೆಯಲ್ಲೇ ಚಿನ್ನಾಭರಣ ಕಳವು ಮಾಡಿದ್ದಾಗಿ ಆರೋಪಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ಸದ್ಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios