ಜ.10 ರಂದು ಹಣಕಾಸು ವಿಚಾರ ಮಾತುಕತೆ ನೆಪದಲ್ಲಿ ಯಲಹಂಕದ ಪ್ರೆಸ್ಟೀಜ್ ಅಪಾರ್ಟ್‌ಮೆಂಟ್‌ಗೆ ಗುಣಶೇಖರನನ್ನು ಕರೆಸಿ ಆರೋಪಿ ಹತ್ಯೆ ಮಾಡಿದ್ದ. ಕೃತ್ಯ ಎಸಗಿದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪಂಜಾಬ್ ರಾಜ್ಯದ ಅಮೃತಸರ ನಗರದಲ್ಲಿ ಬಂಧಿಸಿ ಪೊಲೀಸರು ಕರೆತಂದಿದ್ದಾರೆ.
ಬೆಂಗಳೂರು(ಜ.23): ಇತ್ತೀಚಿಗೆ ಪ್ರೆಸ್ಟೀಜ್ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದ್ದ ರೌಡಿ ಗುಣಶೇಖರ್ ಕೊಲೆ ಪ್ರಕರಣ ಸಂಬಂಧ ಮೃತನ ಸ್ನೇಹಿತನನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ. ಭಾರತಿ ನಗರದ ಬ್ರಿಜೇಶ್ ಬಂಧಿತ.
ಜ.10 ರಂದು ಹಣಕಾಸು ವಿಚಾರ ಮಾತುಕತೆ ನೆಪದಲ್ಲಿ ಯಲಹಂಕದ ಪ್ರೆಸ್ಟೀಜ್ ಅಪಾರ್ಟ್‌ಮೆಂಟ್‌ಗೆ ಗುಣಶೇಖರನನ್ನು ಕರೆಸಿ ಆರೋಪಿ ಹತ್ಯೆ ಮಾಡಿದ್ದ. ಕೃತ್ಯ ಎಸಗಿದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪಂಜಾಬ್ ರಾಜ್ಯದ ಅಮೃತಸರ ನಗರದಲ್ಲಿ ಬಂಧಿಸಿ ಪೊಲೀಸರು ಕರೆತಂದಿದ್ದಾರೆ.
ದಾಬಸ್‌ಪೇಟೆ: ಆಸ್ತಿ ವಿಚಾರ, ಸ್ವಂತ ಅಣ್ಣನ ಮಗನನ್ನೇ ಕೊಲೆಗೈದ ಚಿಕ್ಕಪ್ಪ
ಹಲವು ವರ್ಷಗಳಿಂದ ರಾಮಕೃಷ್ಣ ಹೆಗಡೆ ನಗರದ ಗುಣಶೇಖರ್ ಹಾಗೂ ಭಾರತಿನಗರದ ಬ್ರಿಜೇಶ್ ಸ್ನೇಹಿತರಾಗಿದ್ದು, ಈ ಗೆಳೆತನದಲ್ಲಿ ನಕಲಿ ಚಿನ್ನ ಮಾರಾಟ ದಂಧೆಯಲ್ಲಿ ಇಬ್ಬರು ತೊಡಗಿದ್ದರು. ಇಬ್ಬರು ಕ್ರಿಮಿನಲ್ ಹಿನ್ನೆಲೆಯುವಳ್ಳರಾಗಿದ್ದು, ಕೊತ್ತ ನೂರು ಠಾಣೆಯಲ್ಲಿ ಗುಣಶೇಖರ್ ವಿರುದ್ಧ ರೌಡಿ ಪಟ್ಟಿ ತೆರೆಯಲಾಗಿತ್ತು.
ಬ್ರಿಜೇಶ್ ಮೇಲೂ ಭಾರತಿ ನಗರ ಠಾಣೆಯಲ್ಲಿ ಅಪರಾಧ ಪ್ರಕರಣಗಳಿವೆ. ಇಬ್ಬರಲ್ಲಿದ್ದ ಅಹಂಕಾರದ ನಡವಳಿಕೆಯೇ ಗುಣಶೇಖರನ ಹತ್ಯೆಗೆ ಕಾರಣ ಎನ್ನಲಾಗಿದೆ. ಸ್ಥಳೀಯವಾಗಿ ಜನರಿಗೆ ಬೆದರಿಸಿಕೊಂಡು ಬ್ರಿಜೇಶ್ ಓಡಾಡುತ್ತಿದ್ದ. ಆದರೆ, ಜನರ ಎದುರಿಗೆ ಬ್ರಿಜೇಶ್‌ನಿಗೆ ಏಕವಚನದಲ್ಲಿ ಮಾತನಾಡಿಸುತ್ತಿದ್ದ. ಈ ಬಗ್ಗೆ ಬ್ರಿಜೇಶ್‌ನಲ್ಲಿ ಅಸಹನೆ ಮೂಡಿತ್ತು. ಇನ್ನೊಂದೆಡೆ ಹಣಕಾಸು ವಿಚಾರವಾಗಿ ಸಹ ಅವರಲ್ಲಿ ಭಿನ್ನಾಭಿಪ್ರಾಯವಾಗಿತ್ತು. ಈ ವಿರೋಧ ಹಿನ್ನೆಲೆಯಲ್ಲಿ ಗುಣಶೇಖರನ ಕೊಲೆಗೆ ಬ್ರಿಜೇಶ್ ನಿರ್ಧರಿಸಿದ್ದ.
ಅತ್ತಿಗೆ ಮೈದುನ ಅಕ್ರಮ ಸಂಬಂಧ; ಅಡ್ಡಿಯಾಗಿದ್ದ ಅಣ್ಣನನ್ನೇ ಮಸಣ ಸೇರಿಸಿದ ತಮ್ಮ!
ನಾಡ ಬಂದೂಕಿನಿಂದ ಹೊಡೆದು ಕೊಲೆ:
ಗೆಳೆಯನ ಆಹ್ವಾನದ ಮೇರೆಗೆ ಜ.10 ರಂದು ಪ್ರೆಸ್ಟೀಜ್ ಅಪಾರ್ಟ್ ಮೆಂಟ್‌ನಲ್ಲಿದ್ದ ಬ್ರಿಜೇಶ್ ಫ್ಯಾಟ್‌ಗೆ ಗುಣಶೇಖರ್ ತೆರಳಿದ್ದ. ಆ ವೇಳೆ ಗೆಳೆಯರ ಮಧ್ಯೆ. ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ವೇಳೆ ಗುಣಶೇಖರನ ಮೇಲೆ ಎರಡು ಬಾರಿ ತನ್ನ ಬಂದೂಕಿನಿಂದ ಬ್ರಿಜೇಶ್ ಗುಂಡು ಹಾರಿಸಿದ್ದಾನೆ. ಆದರೆ ಗುಂಡೇಟಿನಿಂದ ಆತ ತಪ್ಪಿಸಿಕೊಂಡಿದ್ದಾನೆ. ಈ ಹಂತದಲ್ಲಿ ಗುಣಶೇಖರನ ತಲೆಗೆ ಬಂದೂಕಿನಿಂದ ಬ್ರಿಜೇಶ್ ಹೊಡೆದಿದ್ದಾನೆ. ಈ ಪೆಟ್ಟಿನಿಂದ ಕೆಳಗೆ ಬಿದ್ದ ಆತನ ಮೇಲೆ ಮನಬಂದಂತೆ ಹಲ್ಲೆ ನಡೆಸಿ ಬ್ರಿಜೇಶ್ ಕೊಂದಿದ್ದ.
5 ದಿನ ಕಾದರೂ ತಂದೆ ಅಂತ್ಯಕ್ರಿಯೆಗೆ ಬರಲಿಲ್ಲ
ಹತ್ಯೆ ಕೃತ್ಯ ನಡೆದ ಮರುದಿನವೇ ಅನಾರೋಗ್ಯದಿಂದ ಬ್ರಿಜೇಶ್ ತಂದೆ ಮೃತಪಟ್ಟಿದ್ದರು. ಬಳಿಕ ಬ್ರಿಜೇಶ್‌ಗಾಗಿ 5 ದಿನ ಆತನ ತಂದೆ ಮೃತದೇಹದ ಅಂತ್ಯಕ್ರಿಯೆ ನಡೆಸದೇ ಕುಟುಂಬದವರು ಕಾದಿದ್ದರು. ಆದರೆ ಬಂಧನ ಭೀತಿಯಿಂದ ತಂದೆ ಅಂತ್ಯಸಂಸ್ಕಾರಕ್ಕೂ ಸಹ ಆರೋಪಿ ಬಂದಿರಲಿಲ್ಲ. ಅಲ್ಲದೆ ಗುಣಶೇಖರ್ ಹತ್ಯೆ ನಡೆಯುವ ಮೂರು ದಿನಗಳ ಹಿಂದಷ್ಟೇ ಆಸ್ಪತ್ರೆಯಲ್ಲಿ ತಂದೆಯನ್ನು ಭೇಟಿಯಾಗಿ ಚಿಕಿತ್ಸೆಗೆ 3 ಲಕ್ಷ ರು. ಹಣವನ್ನು ಬ್ರಿಜೇಶ್ ನೀಡಿದ್ದ ಎಂದು ಮೂಲಗಳು ಹೇಳಿವೆ.
