ಆರೋಪಿ ಉಮೇಶ್ ಹೊಸಗುಡ್ಡದಹಳ್ಳಿಯ ಕಲಾ ವೈನ್ಸ್‌ ಶಾಪ್‌ನಲ್ಲಿ ಭಾನುವಾರ ರಾತ್ರಿ ಈ ಸ್ನೇಹಿತರ ಮಧ್ಯೆ ನಡೆದಿದೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ವೇಳೆ ಗೆಳೆಯನಿಗೆ ಬಿಯರ್‌ಬಾಟಲ್‌ನಿಂದ ಹಲ್ಲೆ ನಡೆಸಿ ಉಮೇಶ್ ಹತ್ಯೆಗೈದಿದ್ದಾನೆ. 

ಬೆಂಗಳೂರು(ಅ.15): ಮದ್ಯದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಟ್ರಾವೆಲ್ಸ್ನ ಇಬ್ಬರು ಬಸ್ ಚಾಲಕರ ನಡುವೆ ಉಂಟಾದ ಜಗಳವು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಭಾನುವಾರ ರಾತ್ರಿ ಬ್ಯಾಟರಾಯನಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಸ್ತೂರಿ ಬಾ ನಗರದ ನಿವಾಸಿ ಯೋಗೇಂದ್ರ ಸಿಂಗ್ (26) ಮೃತ ದುರ್ದೈವಿ. 

ಮೃತನ ಸ್ನೇಹಿತ ಮಂಡ್ಯ ಜಿಲ್ಲೆ ಕೆ.ಆ‌ರ್. ಪೇಟೆ ತಾಲೂಕಿನ ಉಮೇಶ್‌ನನ್ನು ಮೈಸೂರು ರಸ್ತೆಯ ಸ್ಯಾಟ ಲೈಟ್ ಬಸ್ ನಿಲ್ದಾಣದ ಬಳಿ ಪೊಲೀಸರು ಬಂಧಿಸಿದ್ದಾರೆ. 

ಪ್ರೀತಿ, ಸುಳ್ಳು & ಕೊಲೆ; ಅಮಾಯಕ ಭಿಕ್ಷುಕನ ಸಾವಿಗೆ ಕಾರಣವಾಯ್ತು ಯುವತಿಯ ಪರಸಂಗದ ಪ್ರೇಮದಾಟ

ಆರೋಪಿ ಉಮೇಶ್ ಹೊಸಗುಡ್ಡದಹಳ್ಳಿಯ ಕಲಾ ವೈನ್ಸ್‌ ಶಾಪ್‌ನಲ್ಲಿ ಭಾನುವಾರ ರಾತ್ರಿ ಈ ಸ್ನೇಹಿತರ ಮಧ್ಯೆ ನಡೆದಿದೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ವೇಳೆ ಗೆಳೆಯನಿಗೆ ಬಿಯರ್‌ಬಾಟಲ್‌ನಿಂದ ಹಲ್ಲೆ ನಡೆಸಿ ಉಮೇಶ್ ಹತ್ಯೆಗೈದಿದ್ದಾನೆ. 

ತಮ್ಮ ತಂದೆ-ತಾಯಿ ಜತೆ ಕಸ್ತೂರಿ ಬಾ ನಗರದಲ್ಲಿ ನೆಲೆಸಿದ್ದ ಯೋಗೇಂದ್ರ ಸಿಂಗ್, ಕೋಲಾರ ಜಿಲ್ಲೆ ನರಸಾಪುರದ ಖಾಸಗಿ ಕಂಪನಿಯಲ್ಲಿ ಚಾಲಕನಾಗಿದ್ದ. ಉಮೇಶ್ ಕೂಡ ಚಾಲಕನಾಗಿದ್ದ. ಹೀಗಾಗಿ ಒಂದೇ ಪ್ರದೇಶದ ನಿವಾಸಿಗಳಾಗಿದ್ದರಿಂದ ಹಲವು ವರ್ಷಗಳಿಂದ ಇಬ್ಬರು ಆತ್ಮೀಯ ಸ್ನೇಹಿತರಾಗಿದ್ದರು. ದಸರಾ ರಜೆ ಹಿನ್ನೆಲೆ ಮನೆಗೆ ಬಂದಿದ್ದ ಯೋಗೇಂದ್ರ, ಭಾನುವಾರ ರಾತ್ರಿ ಗೆಳೆಯ ಉಮೇಶ್ ಜತೆ ಕಲಾ ವೈನ ನೈನ್ಸ್‌ಗೆ ತೆರಳಿದ್ದಾನೆ. ಆ ವೇಳೆ ಕುಡಿದ ಮತ್ತಿನಲ್ಲಿ ಸ್ನೇಹಿತರ ಮಧ್ಯೆ ನಡೆದ ಜಗಳವು ಕೊನೆಗೆ ಕೊಲೆಯಲ್ಲಿ ಅಂತ್ಯ ಗೊಂಡಿದೆ.