Asianet Suvarna News Asianet Suvarna News

ರಾಯಚೂರು: ಪತ್ನಿ, ಅತ್ತೆ, ನಾದಿನಿಯನ್ನು ಕೊಂದು ಪರಾರಿಯಾಗಿದ್ದ ಅಳಿಯ ಅರೆಸ್ಟ್

* ಒಂದೇ ಕುಟುಂಬದ ಮೂವರನ್ನ ಕೊಂದು ಪರಾರಿಯಾಗಿದ್ದ ಆರೋಪಿ ಅರೆಸ್ಟ್
* ಪತ್ನಿ, ಅತ್ತೆ, ನಾದಿನಿಯನ್ನು ಕೊಂದು ಪರಾರಿಯಾಗಿದ್ದ ಅಳಿಯ
* ಘಟನೆ ನಡೆದ 48 ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿದ ಪೊಲೀಸ್ರು
 

accused arrested In Hyderabad Who Killed wife sister and mother in law at raichur rbj
Author
Bengaluru, First Published Oct 2, 2021, 9:37 PM IST
  • Facebook
  • Twitter
  • Whatsapp

ರಾಯಚೂರು, (ಅ.02): ರಾಯಚೂರಿನ ಯರಮರಸ್ ಕ್ಯಾಂಪ್ ನ ಒಂದೇ ಕುಟುಂಬದ ಮೂವರನ್ನ ಕೊಂದು ಪರಾರಿಯಾಗಿದ್ದ ಆರೋಪಿಯನ್ನು  48  ಗಂಟೆಗಳಲ್ಲಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಆರೋಪಿ ಸಾಯಿ ಅಲಿಯಾಸ್ ಸೌರಭ್ ಎನ್ನುವಾತನನ್ನು ಇಂದು (ಅ.02) ಹೈದ್ರಾಬಾದ್‌ನಲ್ಲಿ ಬಂಧಿಸಲಾಗಿದೆ.  ಸೆಪ್ಟೆಂಬರ್ 29 ರಂದು ಪತ್ನಿ, ಅತ್ತೆ, ಪತ್ನಿ ತಂಗಿಯನ್ನ ಕೊಲೆ ಮಾಡಿ ಪರಾರಿಯಾಗಿದ್ದ. ಘಟನೆ‌ ಕಾರಣರಾದ ಇನ್ನೂ ಇಬ್ಬರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ರಾಯಚೂರು: ಪತ್ನಿ, ನಾದಿನಿ, ಅತ್ತೆಯನ್ನ ಕೊಂದ ಅಳಿಯ, ಕಾರಣ?

ಕೌಟುಂಬಿಕ ಕಲಹ ಹಿನ್ನೆಲೆ ಸಂತೋಷಿ, ವೈಷ್ಣವಿ ಮತ್ತು ಆರತಿ ಎಂಬುವವರ ಕೊಲೆ ನಡೆದಿತ್ತು. ಈ ಬಗ್ಗೆ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳ ಪತ್ತೆಗೆ ನಾಲ್ಕು ವಿಶೇಷ ಪೊಲೀಸ್ ತಂಡ ರಚಿಸಲಾಗಿತ್ತು.

ಘಟನೆ ನಡೆದ 48 ಗಂಟೆಯಲ್ಲಿಯೇ ಆರೋಪಿಯನ್ನ ಪೊಲೀಸರು ಸೆರೆ ಹಿಡಿದಿದ್ದು, ನಿಜಕ್ಕೂ ಶ್ಲಾಘನೀಯ.

Follow Us:
Download App:
  • android
  • ios