*  ಎಂ.ಎಸ್‌.ರಾಮಯ್ಯ ಆಸ್ಪತ್ರೆ ಹಿಂಭಾಗದ ಗೇಟ್‌ ಬಳಿ ಘಟನೆ*  ಕೊಲೆಗೆ ಯತ್ನ, ಹಲ್ಲೆ ಹಾಗೂ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲು*  ರಿವಾಲ್ವಾರ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸಿ ಪರಾರಿಯಾಗಿದ್ದ ಆರೋಪಿ 

ಬೆಂಗಳೂರು(ಅ.16): ಕಾರಿಗೆ ಬೈಕ್‌ ತಾಕಿದ ವಿಷಯಕ್ಕೆ ಜಗಳ ನಡೆದು ಅಡಿ ಕಾರು ಮಾಲೀಕ ಬೈಕ್‌ ಸವಾರನ ಮೇಲೆ ಎರಡು ಸುತ್ತು ಗುಂಡು(Firing) ಹಾರಿಸಿ ಪರಾರಿಯಾಗಿದ್ದ ಘಟನೆ ನಡೆದಿದ್ದು, ಆರೋಪಿಯನ್ನು ಯಶವಂತಪುರ ಠಾಣೆ ಪೊಲೀಸರು(Police) ಬಂಧಿಸಿದ್ದಾರೆ.

ರವೀಶ್‌ಗೌಡ (44) ಬಂಧಿತ(Arrest). ಕೊಲೆಗೆ(Murder) ಯತ್ನ, ಹಲ್ಲೆ(Assault) ಹಾಗೂ ಅಕ್ರಮ ಶಸ್ತ್ರಾಸ್ತ್ರ(Illegal Weapons) ಕಾಯ್ದೆಯಡಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿ ಮಹಾಲಕ್ಷ್ಮಿ ಲೇಔಟ್‌ನಲ್ಲಿ ಹೋಟೆಲ್‌ ನಡೆಸುತ್ತಿದ್ದಾನೆ. ಅ.13ರಂದು ರಾತ್ರಿ 9.25ರ ಸುಮಾರಿಗೆ ಆರೋಪಿ ಕೃತ್ಯ ಎಸಗಿದ್ದ. ಬೈಕ್‌ ಚಾಲಕ ಸುನೀಲ್‌ ಎಂಬುವರು ಕೊಟ್ಟದೂರಿನ ಮೇರೆಗೆ ಬಂಧಿಸಿ, ಜೈಲಿಗಟ್ಟಲಾಗಿದೆ(Jail) ಎಂದು ಪೊಲೀಸರು ಹೇಳಿದ್ದಾರೆ.

ತಾಯಿ, ತಂಗಿಯನ್ನೆ ಹತ್ಯೆ ಮಾಡಿ ನೀಚ ಕೃತ್ಯ ಎಸಗಿದ

ಎಂ.ಎಸ್‌.ರಾಮಯ್ಯ ಆಸ್ಪತ್ರೆ ಆ್ಯಂಬುಲೆನ್ಸ್‌(Ambulance) ಚಾಲಕ ಸುನೀಲ್‌ ಮೇಲೆ ಕೊಲೆ ಯತ್ನ ನಡೆದಿದ್ದು, ಈ ಕೃತ್ಯ ಎಸಗಿ ಪರಾರಿಯಾಗಿರುವ ಆರೋಪಿ ಪತ್ತೆಗೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಮತ್ತಿಕೆರೆಯ ಎಂ.ಎಸ್‌.ರಾಮಯ್ಯ ಆಸ್ಪತ್ರೆಯ ಹಿಂಭಾಗದ ಗೇಟ್‌ ಬಳಿ ಈ ಘಟನೆ ನಡೆದಿದೆ ಎಂದು ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಮೀನಾ(Dharmendra Meena) ತಿಳಿಸಿದ್ದಾರೆ.

ಸುನೀಲ್‌ ಎಂ.ಎಸ್‌.ರಾಮಯ್ಯ ಆಸ್ಪತ್ರೆ(Hospital) ಆ್ಯಂಬುಲೆನ್ಸ್‌ ಚಾಲಕರಾಗಿದ್ದಾರೆ. ಅ.13ರಂದು ಕೆಲಸ ಮುಗಿಸಿ ಸುನೀಲ್‌ ಮನೆಗೆ ಮರಳುತ್ತಿದ್ದರು. ಆ ವೇಳೆ ಹಿಂದಿನಿಂದ ಕಾರು ಬೈಕ್‌ಗೆ ಗುದ್ದಿದೆ. ಆಗ ಕಾರಿನ ಮಾಲೀಕನನ್ನು ಸುನೀಲ್‌ ಪ್ರಶ್ನಿಸಿದ್ದಾರೆ. ಆದರೆ ತನ್ನ ಕಾರಿಗೆ ನೀನೇ ಅಡ್ಡ ಬಂದಿದ್ದು ಎಂದು ಹೇಳಿ ಆರೋಪಿ ಗಲಾಟೆ ಶುರು ಮಾಡಿದ್ದಾನೆ. ಆಗ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಸಿಟ್ಟಿಗೆದ್ದ ಆರೋಪಿ ರವೀಶ್‌ ತನ್ನ ಕಾರಿನಲ್ಲಿ ರಿವಾಲ್ವಾರ್‌ನಿಂದ(Revolver) ಗಾಳಿಯಲ್ಲಿ ಗುಂಡು ಹಾರಿಸಿ ಪರಾರಿಯಾಗಿದ್ದ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.