* ಬೈಕ್‌, 2 ಮೊಬೈಲ್‌ ಸೇರಿದಂತೆ 17,15,500 ರು. ಮೌಲ್ಯದ ವಸ್ತು ವಶ* ಮಂಗಳೂರು ನಗರ, ಕಾಸರಗೋಡು, ಗೋವಾಕ್ಕೂ ಡ್ರಗ್ಸ್‌ ಮಾರಾಟ * ಕೇರಳ ಮೂಲದ ಆರೋಪಿ ಬಂಧನ  

ಮಂಗಳೂರು(ಜೂ.12): ಮಂಗಳೂರಲ್ಲಿ ಸಾರ್ವಜನಿಕರಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ನಿಷೇಧಿತ ಮಾದಕ ವಸ್ತು ಎಲ್‌ಎಸ್‌ಡಿ(Lysergic acid diethylamide(LSD) ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಕೇರಳ ಮೂಲದ ಆರೋಪಿಯನ್ನು ಬಂಧಿಸಲಾಗಿದೆ. 

ಮೂಲತಃ ಕೇರಳ ಕ್ಯಾಲಿಕಟ್‌ ಮುಟ್ಟಂಗಲ್‌ ನಿವಾಸಿ, ಪ್ರಸ್ತುತ ಕದ್ರಿಯ ಪಿಜಿಯಲ್ಲಿ ವಾಸಿಸುತ್ತಿರುವ ಮೊಹಮ್ಮದ್‌ ಅಜಿನಾಸ್‌ (25) ಬಂಧಿತ ಆರೋಪಿ. ಈತನಿಂದ 16.80 ಲಕ್ಷ ರು. ಮೌಲ್ಯದ ಒಟ್ಟು 15 ಗ್ರಾಂ, 15 ಮಿಲಿ ಗ್ರಾಂ ತೂಕವಿರುವ 840 ಎಲ್‌ಎಸ್‌ಡಿ ಸ್ಟ್ರಿಫ್ಸ್‌ ವಶಪಡಿಸಿಕೊಳ್ಳಲಾಗಿದೆ.

ಬೆಂಗ್ಳೂರಲ್ಲಿ ಅಂಬರ್ ಗ್ರೀಸ್ ಮಾರಾಟ ಜಾಲ, ವೀರ್ಯ ತಿಮಿಂಗಿಲದ ವಾಂತಿಗೆ ಎಂಥಾ ಬೆಲೆ!

ಬೈಕ್‌, 2 ಮೊಬೈಲ್‌ ಸೇರಿದಂತೆ 17,15,500 ರು. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಮಂಗಳೂರು ನಗರ, ಕಾಸರಗೋಡು, ಗೋವಾಕ್ಕೂ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.