ಅಲೇನಾಯಕನಹಳ್ಳಿ ಗ್ರಾಮದ ಶಿವಕುಮಾರ್‌ ಖಾಸಗಿ ಶಾಲೆಯಲ್ಲಿ ಹತ್ತನೇ ತರಗತಿಯ ಅಪ್ರಾಪ್ತೆಯನ್ನು ಪುಸಲಾಯಿಸಿ ಅತ್ಯಾಚಾರವೆಸಗಿದ್ದ. 

ದಾಬಸ್‌ಪೇಟೆ(ಜೂ.09): ತಂದೆಗೆ ಪರಿಚಿತನಾಗಿ ಆಗಿಂದಾಗ್ಗೆ ಮನೆಗೆ ಬರುತ್ತಿದ್ದ ಅಂಗಡಿಗಳಿಗೆ ತರಕಾರಿ ಸರಬರಾಜು ಮಾಡುತ್ತಿದ್ದ ತ್ಯಾಮಗೊಂಡ್ಲು ಹೋಬಳಿ ಅಲೇನಾಯಕನಹಳ್ಳಿ ಗ್ರಾಮದ ಶಿವಕುಮಾರ್‌ ಪಟ್ಟಣದ ಖಾಸಗಿ ಶಾಲೆಯಲ್ಲಿ ಹತ್ತನೇ ತರಗತಿಯ ಅಪ್ರಾಪ್ತೆಯನ್ನು ಪುಸಲಾಯಿಸಿ ಅತ್ಯಾಚಾರವೆಸಗಿರುವ ಪ್ರಕರಣ ಬೆಳಕಿಗೆ ಬಂದಿದೆ. 

Add Asianetnews Kannada as a Preferred SourcegooglePreferred

ಆರೋಪಿ ಶಿವಕುಮಾರ್‌ಗೆ ಈಗಾಗಲೇ ಮದುವೆಯಾಗಿದ್ದರೂ ಅಪ್ರಾಪ್ತಗೆ ಮದುವೆಯ ಆಮಿಷವೊಡ್ಡಿ ಅಪ್ರಾಪ್ತೆ ಮನೆಗೆ ಆಗಿಂದಾಗ್ಗೆ ಹೋಗಿ ಬರುತ್ತಿದ್ದ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಹೋಗಿ ಅವಳೊಂದಿಗೆ ಸಲುಗೆ ಬೆಳೆಸಿಕೊಂಡಿದ್ದ. ಅಪ್ರಾಪ್ತೆ ಪ್ರತಿರೋಧ ತೋರಿದರೂ ಬಲವಂತವಾಗಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದು, ಈ ವಿಷಯ ಯಾರಿಗಾದರೂ ತಿಳಿಸಿದರೆ ನಿನ್ನ ತಂದೆ ತಾಯಿಯ ಕೊಲೆ ಮಾಡುತ್ತೇನೆಂದು ಬೆದರಿಸಿದ್ದರಿಂದ ಆಕೆ ಹೆದರಿಕೆಯಿಂದ ಯಾರಿಗೂ ತಿಳಿಸಿರಲಿಲ್ಲ. ಹಾಗೆಯೇ ಬೆದರಿಸಿ ಹಲವು ಬಾರಿ ಅತ್ಯಾಚಾರವೆಸಗುತ್ತಿದ್ದ. 

ಲವ್‌ ಮಾಡ್ತಿದ್ದ ಹುಡ್ಗಿನ ಬೆಂಗ್ಳೂರಿಗೆ ಕರೆಸಿ, ಸ್ನೇಹಿತನೊಂದಿಗೆ ಸೇರಿ ಅತ್ಯಾಚಾರ ಮಾಡಿದ ಪ್ರಿಯಕರ

ಮತ್ತೊಮ್ಮೆ ಮಗಳನ್ನು ಶಾಲೆಯ ಬಳಿ ಕರೆದೊಯ್ಯಲು ಹೊಂಚು ಹಾಕುತ್ತಿದ್ದ ವೇಳೆ, ಅಪ್ರಾಪ್ತೆ ತಂದೆಗೆ ವಿಚಾರ ತಿಳಿದು ವಿಚಾರಿಸಿದಾಗ ಎಲ್ಲಾ ವಿಷಯ ತಿಳಿಸಿದ್ದಾಳೆ. ಬಾಲಕಿ ತಂದೆ ದಾಬಸ್‌ಪೇಟೆ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ದಾಬಸ್‌ಪೇಟೆ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.