Asianet Suvarna News Asianet Suvarna News

ಬೆಂಗಳೂರು: ಅಮಲಿನಲ್ಲಿ ಪತ್ನಿ, ಮಗಳ ಬಗ್ಗೆ ನಿಂದಿಸಿದ ಸ್ನೇಹಿತನ ಹತ್ಯೆಗೈದಿದ್ದವ ಅರೆಸ್ಟ್‌

ಕೆಂಗೇರಿ ಉಪನಗರ ನಿವಾಸಿ ಆರ್.ಮಾದೇಶ್ ಬಂಧಿತ. ಆರೋಪಿ ನ.7ರಂದು ಕೆಂಗೇರಿ ನಿವಾಸಿ ರಾಜಕುಮಾರ್ ಎಂಬಾತನನ್ನು ಚಾಕುವಿನಿಂದ ಇರಿದು ಕೊಲೆಗೈದಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.

Accused Arrested For Murder Case in Bengaluru grg
Author
First Published Nov 12, 2023, 6:26 AM IST

ಬೆಂಗಳೂರು(ನ.11): ಮದ್ಯ ಅಮಲಿನಲ್ಲಿ ಪತ್ನಿ ಮತ್ತು ಮಗಳ ಬಗ್ಗೆ ಕೆಟ್ಟದಾಗಿ ನಿಂದಿಸಿದ ಎಂಬ ಕಾರಣಕ್ಕೆ ಸ್ನೇಹಿತನನ್ನೇ ಚಾಕುವಿನಿಂದ ಇರಿದು ಕೊಲೆಗೈದಿದ್ದ ಆರೋಪಿಯನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೆಂಗೇರಿ ಉಪನಗರ ನಿವಾಸಿ ಆರ್.ಮಾದೇಶ್ (36) ಬಂಧಿತ. ಆರೋಪಿ ನ.7ರಂದು ಕೆಂಗೇರಿ ನಿವಾಸಿ ರಾಜಕುಮಾರ್ (34) ಎಂಬಾತನನ್ನು ಚಾಕುವಿನಿಂದ ಇರಿದು ಕೊಲೆಗೈದಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.

ಆರೋಪಿ ಮಾದೇಶ್ ಮತ್ತು ಕೊಲೆಯಾದ ರಾಜಕುಮಾರ್ ಬಾಲ್ಯ ಸ್ನೇಹಿತರು. ಇಬ್ಬರು ಕ್ಯಾಬ್ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ಮಾದೇಶ್ ಮತ್ತು ರಾಜಕುಮಾರ್ ನಡುವೆ ಕ್ಷುಲ್ಲಕ ವಿಚಾರಕ್ಕೆ ಜಗಳವಾಗಿತ್ತು. ಈ ಸಂದರ್ಭದಲ್ಲಿ ಸ್ನೇಹಿತರು ಮಧ್ಯಪ್ರವೇಶಿಸಿ ರಾಜಿಸಂಧಾನ ಮಾಡಿಸಿದ್ದರು.

ಬೆಂಗಳೂರು: ಅಕ್ರಮ ಸಂಬಂಧ ಪ್ರಶ್ನಿಸಿದ ಪತ್ನಿಯ ಕೊಂದು ಆತ್ಮಹತ್ಯೆ ಕಥೆ ಕಟ್ಟಿದ್ದ ಪತಿ ಸೆರೆ

ಪತ್ನಿ, ಮಗಳ ಬಗ್ಗೆ ನಿಂದಿಸಿದ್ದಕ್ಕೆ ಕೊಲೆ:

ಮಾದೇಶ್ ಮತ್ತು ರಾಜಕುಮಾರ್ ನ.6ರಂದು ರಾತ್ರಿ ಕೆಂಗೇರಿ ಉಪನಗರದ ಮಾನಸ ಲೇಔಟ್ ಬಳಿ ಮದ್ಯ ಸೇವಿಸುತ್ತಿದ್ದರು. ವೇಳೆ ರಾಜಕುಮಾರ್ ಹಿಂದಿನ ಗಲಾಟೆ ಬಗ್ಗೆ ಪ್ರಸ್ತಾಪಿಸಿ ಮಾದೇಶನ ಪತ್ನಿ ಮತ್ತು ಮಗಳ ಬಗ್ಗೆ ಕೆಟ್ಟದಾಗಿ ನಿಂದಿಸಿದ್ದಾನೆ. ಇದರಿಂದ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಮಾದೇಶ್‌, ಚಾಕುವಿನಿಂದ ರಾಜಕುಮಾರ್‌ನ ಹೊಟ್ಟೆಗೆ ಇರಿದು ಕೊಲೆಗೈದು ಪರಾರಿಯಾಗಿದ್ದ. ಈ ಸಂಬಂಧ ಮೃತ ಸಹೋದರ ರವಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಲಿಸಿಕೊಂಡು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಸಿದ್ದಾರೆ.

Follow Us:
Download App:
  • android
  • ios