ಜ್ಞಾನ ಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ದಿನೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನ 24 ಗಂಟೆಯೊಳಗೆ ಬಂಧಿಸಿದ ಪೊಲೀಸರು.
ಬೆಂಗಳೂರು(ಫೆ.23): ನಗರದ ಜ್ಞಾನ ಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ದಿನೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನ 24 ಗಂಟೆಯೊಳಗೆ ಪೊಲೀಸರು ಬಂಧಿಸಿದ್ದಾರೆ. ಅರುಣ್ ಕುಮಾರ್ (33) ಬಂಧಿತ ಆರೋಪಿಯಾಗಿದ್ದಾನೆ.
ಅರುಣ್ ಹೆಂಡತಿ ಬಗ್ಗೆ ಕೆಟ್ಟದಾಗಿ ಹೇಳಿದ್ದಕ್ಕೆ ದಿನೇಶ್ ಹತ್ಯೆ ನಡೆದಿದೆ ಅಂತ ತಿಳಿದು ಬಂದಿದೆ. ಬಂಧಿತ ಆರೋಪಿ ಅರುಣ್ ದಿನೇಶ್ ಬಳಿ 1 ಲಕ್ಷ ಸಾಲ ಪಡೆದಿದ್ದನು. ಸಾಲವನ್ನ ವಾಪಸ್ಸು ಕೇಳಿದಾಗ ಕೊಡದೆ ಅರುಣ್ ಸತಾಯಿಸುತ್ತಿದ್ದನಂತೆ. ನಿನ್ನ ಹೆಂಡತಿಯನ್ನ ವೇಶ್ಯಾವಟಿಕೆಗೆ ತಳ್ಳಿಯಾದ್ರೂ ನನ್ನ ಹಣ ಕೊಡು ಎಂದಿದ್ದ ದಿನೇಶ್.
40ಕ್ಕೂ ಹೆಚ್ಚು ಮಹಿಳೆಯರಿಗೆ ಅಶ್ಲೀಲ ವಿಡಿಯೋ ಕರೆ ಮಾಡಿದ್ದ ಡೆಲಿವರಿ ಬಾಯ್ ಅರೆಸ್ಟ್!
ದಿನೇಶ್‌ನ ಈ ಮಾತಿನಿಂದ ಅರುಣ್ ಅವಮಾನಕ್ಕೆ ಒಳಗಾಗಿದ್ದನು. ಹಣ ವಾಪಸ್ಸು ಕೊಡುವುದಾಗಿ ಹೇಳಿ ದಿನೇಶ್ ನನ್ನ ಕರೆಸಿಕೊಂಡಿದ್ದ, ದಿನೇಶ್ ಬರುತ್ತಿದ್ದಂತೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದ ಅರುಣ್. ಆರೋಪಿಯನ್ನ ಬಂಧಿಸಿದ ಜ್ಞಾನ ಭಾರತಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
