ಕುಮಟಾ: ನಕಲಿ ಆಧಾರ್-ಪಾನ್‌ಕಾರ್ಡ್ ತಯಾರಿಸಿ ದುರ್ಬಳಕೆ, ವ್ಯಕ್ತಿ ವಶಕ್ಕೆ
ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲೂಕಿನ ದಿಲೀಪ ರಾಜೇಗೌಡ ಬಂಧಿತ ಆರೋಪಿ. ತಾಲೂಕಿನ ಹೆಗಡೆಯ ಮಚಗೋಣ ನಿವಾಸಿ ಸುಬ್ರಾಯ ಕಡೆಕೋಡಿ ತಮ್ಮ ಮೃತ ಪುತ್ರ ಶಮಂತಕ ಕಡೆಕೋಡಿ ಅವರ ಹೆಸರಿನ ಆಧಾರ್ ಕಾರ್ಡ್‌ನ ದಾಖಲೆಗಳನ್ನು ತಿದ್ದಿ, ಗೋವಾದ ಕ್ರೋಮಾದಲ್ಲಿ ಐಫೋನ್ ಖರೀದಿಸಿ ಕಂತು ತುಂಬದೇ ಯಾರೋ ಮೋಸ ಮಾಡಿರುವ ಬಗ್ಗೆ ದೂರು ನೀಡಿದ್ದರು.
ಕುಮಟಾ(ಜು.09): ಸಾಫ್ಟ್‌ವೇರ್ ಬಳಸಿ ನಕಲಿ ಆಧಾರ್ ಮತ್ತು ಪಾನ್‌ಕಾರ್ಡ್ ತಯಾರಿಸಿ ದುರ್ಬಳಕೆ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಕುಮಟಾ ಠಾಣೆ ಪೊಲೀಸರು ಶನಿವಾರ ವಶಕ್ಕೆ ಪಡೆದಿದ್ದಾರೆ.
ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲೂಕಿನ ದಿಲೀಪ ರಾಜೇಗೌಡ (32) ಬಂಧಿತ. ತಾಲೂಕಿನ ಹೆಗಡೆಯ ಮಚಗೋಣ ನಿವಾಸಿ ಸುಬ್ರಾಯ ಕಡೆಕೋಡಿ ತಮ್ಮ ಮೃತ ಪುತ್ರ ಶಮಂತಕ ಕಡೆಕೋಡಿ ಅವರ ಹೆಸರಿನ ಆಧಾರ್ ಕಾರ್ಡ್‌ನ ದಾಖಲೆಗಳನ್ನು ತಿದ್ದಿ, ಗೋವಾದ ಕ್ರೋಮಾದಲ್ಲಿ ಐಫೋನ್ ಖರೀದಿಸಿ ಕಂತು ತುಂಬದೇ ಯಾರೋ ಮೋಸ ಮಾಡಿರುವ ಬಗ್ಗೆ ದೂರು ನೀಡಿದ್ದರು.
ಕಾಣೆಯಾಗಿದ್ದ ಜೈನ ಮುನಿ ಬರ್ಬರ ಹತ್ಯೆ: ಇಬ್ಬರ ಬಂಧನ, ಸಿಗದ ಮೃತದೇಹ
ಪ್ರಕರಣ ಕೈಗೆತ್ತಿಕೊಂಡ ಪಿಎಸ್‌ಐ ನವೀನ ನಾಯ್ಕ ನೇತೃತ್ವದ ತಂಡ ತನಿಖೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದೆ. ಆರೋಪಿ ತನ್ನದೇ ಸಾಫ್ಟ್‌ವೇರ್ ಬಳಸಿ ಮೃತ ವ್ಯಕ್ತಿಯ, ಇತರರ ಆಧಾರ್ ಕಾರ್ಡ್ ಮತ್ತು ಪಾನ್‌ಕಾರ್ಡ್‌ಗಳನ್ನು ಫೋರ್ಜರಿ ಮಾಡಿ ಆಗಾಗ ತನ್ನ ಚಹರೆಗಳನ್ನು ಸಹ ಬದಲಾಯಿಸಿ, ಬೆಂಗಳೂರು, ಗೋವಾ, ತುಮಕೂರು, ಹಾಸನ ಮುಂತಾದ ಕಡೆಗಳಲ್ಲಿ ಇಂತಹದೇ ಕೃತ್ಯ ನಡೆಸಿದ ಬಗ್ಗೆ ತಿಳಿದುಬಂದಿದೆ.
ಇನ್‌ಕಮ್ ಟ್ಯಾಕ್ಸ್ ವೆಬ್‌ಸೈಟ್‌ನ್ನು ಸಹ ಹ್ಯಾಕ್ ಮಾಡಿ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣ ಬೆಂಗಳೂರು ಸಿಓಡಿಯಲ್ಲಿ ಈಗಾಗಲೇ ದಾಖಲಾಗಿ ಬಂಧಿತನಾಗಿದ್ದ ಆರೋಪಿಯನ್ನು ಪರಪ್ಪನ ಅಗ್ರಹಾರದಿಂದ ಕುಮಟಾ ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ. ತನಿಖೆಯಲ್ಲಿ ಸಿಬ್ಬಂದಿ ಗಣೇಶ ನಾಯ್ಕ, ಗುರು ನಾಯಕ, ಪ್ರದೀಪ ನಾಯಕ ತಂಡ ಭಾಗಿಯಾಗಿತ್ತು ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.