Asianet Suvarna News Asianet Suvarna News

ಹೆಸರಿಗೆ ಪೊಲೀಸ್ ಇನ್ಫಾರ್ಮರ್, ಮಾಡ್ತಿದ್ದು ಮನೆ ಕಳ್ಳತನ: ಖತರ್ನಾಕ್‌ ಖದೀಮ ಅರೆಸ್ಟ್‌

ಬೆಂಗಳೂರು ನಗರದ ಕೆಲವು ಠಾಣೆ ಪೊಲೀಸರಿಗೆ ಇನ್ಫಾರ್ಮರ್ ಆಗಿದ್ದ ಬಂಧಿತ ಆರೋಪಿ 

Accused Arrested For House Theft Cases in Bengaluru grg
Author
First Published Oct 27, 2022, 10:56 AM IST

ಬೆಂಗಳೂರು(ಅ.27):  ಪೊಲೀಸ್ ಇನ್ಫಾರ್ಮರ್ ಅನ್ನೋ ಹೆಸರನ್ನೇ ಬಂಡವಾಳ ಮಾಡಿಕೊಂಡು ಮನೆ ಕಳ್ಳತನ ಮಾಡುತ್ತಿದ್ದ ಖತರ್ನಾಕ್‌ ಕಳ್ಳನನ್ನ ಹುಳಿಮಾವು ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನ  ರಾಜಾ ಅಲಿಯಾಸ್ ಜಪಾನ್ ರಾಜಾ ಅಂತ ಗುರುತಿಸಲಾಗಿದೆ. 

ಯಾವುದೇ ಡೌಟ್‌ ಬರಲ್ಲ ಅಂತ ಜಪಾನ್ ರಾಜಾ ರಾಜಾರೋಷವಾಗಿ ಕಳ್ಳತನ ಮಾಡುತ್ತಿದ್ದ. ಆದ್ರೆ ಹಣೆಬರಹ ಕೆಟ್ಟು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಇನ್ಫಾರ್ಮರ್ ಆಗಿದ್ದವನೇ ಪೊಲೀಸರ ಬಲೆಗೆ ಬಿದ್ದಿದ್ದಾನೆ.  ಈ ಅಸಾಮಿ ನಗರದ ಕೆಲವು ಠಾಣೆ ಪೊಲೀಸರಿಗೆ ಇನ್ಫಾರ್ಮರ್ ಆಗಿದ್ದನಂತೆ. ಮನೆ ಕಳ್ಳತನ ಸೇರಿ ಹಲವು ಪ್ರಕರಣಗಳ ಬಗ್ಗೆ ಮಾಹಿತಿ ನೀಡುತ್ತಿದ್ದನಂತೆ ಈತ. ಆದ್ರೆ ಈ ಗ್ಯಾಪಲ್ಲಿ ತಾನೇ ಕೈಚಳಕ ತೋರಿಸಲು ಮುಂದಾಗಿದ್ದನಂತೆ. ಹಗಲು ವೇಳೆ ಯಾರು ಇಲ್ಲದ ಮನೆಗಳಲ್ಲಿ ಜಪಾನ್ ರಾಜಾ ಕಳ್ಳತನ ಮಾಡುತ್ತಿದ್ದನು. 

Davanagere: ಸಾಮಾಜಿಕ ಜಾಲತಾಣಗಳಲ್ಲಿ ಕಿರಿಕಿರಿ ಮಾಡುತ್ತಿದ್ದ ಮೂವರ ಬಂಧನ

ಬಂಧಿತ ಜಪಾನ್ ರಾಜಾ ಪಶ್ಚಿಮ ವಿಭಾಗದ ಪೊಲೀಸರಿಗೆ ಹಲವು ಪ್ರಕರಣಗಳಲ್ಲಿ ಮಾಹಿತಿದಾರನಾಗಿದ್ದನು. ಆದ್ರೆ ಇತ್ತೀಚಿಗೆ ನಾಗ ಎಂಬಾತನನ್ನ ಪೊಲೀಸರು ಬಂಧಿಸಿದ್ದರು. ಪೊಲೀಸರ ವಿಚಾರಣೆ ವೇಳೆ ನಾಗ ಇನ್ಫಾರ್ಮರ್ ರಾಜಾನ ಬಗ್ಗೆ ಬಾಯ್ಬಿಟ್ಟಿದ್ದನು. ಬಳಿಕ ರಾಜಾ ಅಲಿಯಾಸ್ ಜಪಾನ್ ರಾಜಾನನ್ನ‌ ಖೆಡ್ಡಾಕ್ಕೆ ಬೀಳಿಸಿದ್ದಾರೆ ಪೊಲೀಸರು.

ಜಪಾನ್ ರಾಜಾ ಕೆ.ಪಿ ಅಗ್ರಹಾರ, ವಿಜಯನಗರ, ಕೆಂಗೇರಿ ಸೇರಿದಂತೆ ಹಲವು ಪೊಲೀಸರಿಗೆ ಬೇಕಾಗಿದ್ದನು. ಒಂದೇ ತಿಂಗಳಲ್ಲಿ ಹತ್ತಾರು ಮನೆಗೆ ಕನ್ನ ಹಾಕಿ ಖಾಕಿ ಇದೀಗ ಪೊಲೀಸರು ಬಲೆಗೆ ಬಿದ್ದಿದ್ದಾನೆ. ಜಪಾನ್ ರಾಜಾನಿಂದ 400 ಗ್ರಾಂ ಚಿನ್ನಾಭರಣವನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹುಳಿಮಾವು ಠಾಣೆ ಪೊಲೀಸರಿಂದ ತನಿಖೆಯನ್ನ ಮುಂದುವರಿಸಿದ್ದಾರೆ. ಈ ಸಂಬಂಧ ಹುಳಿಮಾವು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
 

Follow Us:
Download App:
  • android
  • ios