*  ಬೀಗದ ಕೀ ಹುಡುಕಿ ಹಾಡಹಗಲೇ ಕಳವು ಮಾಡುತ್ತಿದ್ದ ಕಳ್ಳಿ*  ಚಪ್ಪಲಿ ಸ್ಟ್ಯಾಂಡ್‌, ಸಜ್ಜಾ, ರಂಗೋಲಿ ಡಬ್ಬಿಯಲ್ಲಿ ಕೀಗಾಗಿ ಹುಡುಕಾಟ*  75 ಗ್ರಾಂ ಚಿನ್ನಾಭರಣ, 638 ಗ್ರಾಂ ಬೆಳ್ಳಿ ಅಭರಣ ಜಪ್ತಿ  

ಬೆಂಗಳೂರು(ಮಾ.25): ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕೀ ಹುಡುಕಿ ಬಾಗಿಲು ತೆರೆದು ಹಾಡಹಗಲೇ ಕಳವು(Theft) ಮಾಡಿ ಪರಾರಿಯಾಗುತ್ತಿದ್ದ ಖತರ್ನಾಕ್‌ ಕಳ್ಳಿಯೊಬ್ಬಳನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು(Police) ಬಂಧಿಸಿದ್ದಾರೆ.

ಕಾವಲು ಬೈರಸಂದ್ರದ ಜಯಂತಿ ಅಲಿಯಾಸ್‌ ಕುಟ್ಟಿಯಮ್ಮ(31) ಬಂಧಿತ ಕಳ್ಳಿ. ಈಕೆ ನೀಡಿದ ಮಾಹಿತಿ ಮೇರೆಗೆ 75 ಗ್ರಾಂ ಚಿನ್ನಾಭರಣ, 638 ಗ್ರಾಂ ಬೆಳ್ಳಿ ಅಭರಣಗಳನ್ನು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಬೈರಪ್ಪ ಗಾರ್ಡನ್‌ ಮತ್ತು ಎಎಂಎಸ್‌ ಲೇಔಟ್‌ನ ಎರಡು ಮನೆಗಳಲ್ಲಿ ಹಾಡಹಗಲೇ ಮನೆಗಳ್ಳತನ(House Theft) ನಡೆದಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು(Accused) ಬಂಧಿಸಲಾಗಿದೆ(Arrest) ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Bengaluru Crime: ಆಂಧ್ರದಿಂದ ಬಂದು ಬೆಂಗ್ಳೂರಲ್ಲಿ ಮನೆಗಳವು ಮಾಡುತ್ತಿದ್ದವ ಅರೆಸ್ಟ್‌

ಆರೋಪಿ ಜಯಂತಿ ವೃತ್ತಿಪರ ಕಳ್ಳಿಯಾಗಿದ್ದು, ವಿದ್ಯಾರಣ್ಯಪುರ, ಡಿ.ಜೆ.ಹಳ್ಳಿ ಸೇರಿದಂತೆ ನಗರದ ವಿವಿಧ ಪೊಲೀಸ್‌ ಠಾಣೆಗಳಲ್ಲಿ 23 ವಿವಿಧ ಅಪರಾಧ ಪ್ರಕರಣಗಳು ದಾಖಲಾಗಿವೆ. ಕೆಲ ಪ್ರಕರಣಗಳಲ್ಲಿ ಬಂಧನಕ್ಕೆ ಒಳಗಾಗಿ ಜೈಲು ಸೇರಿದ್ದ ಈಕೆ, ಜಾಮೀನು(Bail) ಪಡೆದು ಹೊರಬಂದ ಬಳಿಕವೂ ತನ್ನ ಕೆಟ್ಟಚಾಳಿ ಮುಂದುವರಿಸಿದ್ದಳು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.

ಬೀಗ ಕೀ ಸಿಕ್ಕರಷ್ಟೇ ಕಳವು!: 

ಹಗಲು ಹೊತ್ತಿನಲ್ಲಿ ಬೀದಿ ಬೀದಿ ಸುತ್ತುತ್ತಿದ್ದ ಆರೋಪಿ ಜಯಂತಿ, ಜನ ಸಂಚಾರ ಕಡಿಮೆ ಇರುವ ಬೀದಿಗಳಲ್ಲಿ ಕೆಲ ಮನೆಗಳನ್ನು ಟಾರ್ಗೆಟ್‌ ಮಾಡುತ್ತಿದ್ದಳು. ಮೊದಲಿಗೆ ಕಾಲಿಂಗ್‌ ಬೆಲ್‌ ಒತ್ತಿ ಮನೆಯಲ್ಲಿ ಯಾರಾದರೂ ಇದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಿದ್ದಳು. ಯಾರು ಇಲ್ಲದಿರುವುದು ಖಚಿತವಾದಾಗ ಮನೆಯ ಹೊರಗೆ ಚಪ್ಪಲಿ ಸ್ಟ್ಯಾಂಡ್‌, ಸಜ್ಜಾ, ರಂಗೋಲಿ ಡಬ್ಬಿ, ಗಿಡದ ಪಾಟ್‌ ಇತರೆಡೆ ಮನೆ ಕೀ ಇರಿಸಿದ್ದಾರೆಯೇ ಎಂಬುದನ್ನು ಹುಡುಕುತ್ತಿದ್ದಳು. ಕೀ ಸಿಕ್ಕರೆ ಸೀದಾ ಬೀಗ ತೆರೆದು ಒಳಗೆ ನುಗ್ಗಿ ನಗದು, ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದಳು. ಕೀ ಸಿಗದಿದ್ದರೆ ಬೇರೆ ಕಡೆ ಹೋಗುತ್ತಿದ್ದಳು ಎಂದು ತಿಳಿದು ಬಂದಿದೆ.

ವಿಮಾನದಲ್ಲಿ ಬೆಂಗ್ಳೂರಿಗೆ ಬಂದು ಕಳ್ಳತನ: ನಾಲ್ವರ ಬಂಧನ

ಬೆಂಗಳೂರು(ಮಾ.19): ಹೊರರಾಜ್ಯದಿಂದ ವಿಮಾನದಲ್ಲಿ(Flight) ನಗರಕ್ಕೆ ಬಂದು ಮನೆಗಳವು ಮಾಡಿ ಪರಾರಿಯಾಗುತ್ತಿದ್ದ ಮೂವರು ಖತರ್ನಾಕ್‌ಗಳನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳದ ಹರಿದಾಸ್‌ ಬರಾಯಿ (37) ಮತ್ತು ಪಾರ್ಥ ಹಲ್ದಾರ್‌ (32) ಹಾಗೂ ರತನ್‌ ಸಾಹಾ (52) ಬಂಧಿತರು. ಆರೋಪಿಗಳಿಂದ(Accused) 38 ಲಕ್ಷ ಮೌಲ್ಯದ 745 ಗ್ರಾಂ ತೂಕದ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. 

Byadarahalli Family Suicide: ಐವರು ಆತ್ಮಹತ್ಯೆಗೆ ಶರಣಾದ ಮನೆಯಲ್ಲಿ ಅಮಾವಾಸ್ಯೆ ರಾತ್ರಿ ಬೆಳಕು: ಬೆಚ್ಚಿಬಿದ್ದ ಜನ!

ಪಶ್ಚಿಮ ಬಂಗಾಳದಿಂದ(West Bengal) ನಗರಕ್ಕೆ ವಿಮಾನದಲ್ಲಿ ಬರುತ್ತಿದ್ದ ಆರೋಪಿಗಳು ಬಳಿಕ ಲಾಡ್ಜ್‌ನಲ್ಲಿ ಉಳಿದುಕೊಳ್ಳುತ್ತಿದ್ದರು. ರಾತ್ರಿ ವೇಳೆ ನಗರದ ವಿವಿಧೆಡೆ ಸುತ್ತಾಡಿ ಬೀಗ ಹಾಕಿದ ಮನೆಗಳನ್ನು ಗುರುತಿಸಿಕೊಂಡು ನಿಗಾವಹಿಸುತ್ತಿದ್ದರು. ಮನೆ ಎದುರು, ಕಸ, ಹಾಲು, ನ್ಯೂಸ್‌ ಪೇಪರ್‌ ಬಿದ್ದಿರುವುದನ್ನು ಗಮನಿಸಿ, ಮನೆಯಲ್ಲಿ ಯಾರು ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಿದ್ದರು. ಬಳಿಕ ತಡರಾತ್ರಿ ಬೀಗ ಮೀಟಿ ಕಳವು ಮಾಡಿ ರೈಲಿನಲ್ಲಿ ಪಶ್ಚಿಮ ಬಂಗಾಳಕ್ಕೆ ಪರಾರಿಯಾಗುತ್ತಿದ್ದರು.

ಫೆ.12ರಂದು ಬಾಣಸವಾಡಿಯ ಮನೆಯೊಂದರಲ್ಲಿ ಚಿನ್ನಾಭರಣ(Gold) ಕಳುವಾಗಿತ್ತು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಾಗ ಆರೋಪಿಗಳ ಪಶ್ಚಿಮ ಬಂಗಾಳದಲ್ಲಿ ಆರೋಪಿಗಳಿರುವ ಸುಳಿವು ಸಿಕ್ಕಿತು. ಹೀಗಾಗಿ ಪೊಲೀಸರ ವಿಶೇಷ ತಂಡ ಪಶ್ಚಿಮ ಬಂಗಾಳಕ್ಕೆ ತೆರಳಿ ಆರೋಪಿಗಳನ್ನು ಬಂಧಿಸಿ ನಗರಕ್ಕೆ ಕರೆತಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.