*   ಚಿನ್ನದ ವ್ಯಾಪಾರಿಗೇ ಟೋಪಿ ಹಾಕಿದ್ದ ಬರೋಡಾ ಮೂಲದ ಇಲಿಯಾಸ್‌*  ಕೆ.ರಾಹುಲ್‌ ಕುಮಾರ್‌ ಎಂಬುವರಿಗೆ ಟೋಪಿ ಹಾಕಿದ್ದ ಆರೋಪಿ *  ಮೊಬೈಲ್‌ ಕರೆಗಳು ಮಾಹಿತಿ ಆಧರಿಸಿ ಆರೋಪಿ ಬಂಧನ 

ಬೆಂಗಳೂರು(ಅ.17):  ಕೆಲ ದಿನಗಳ ಹಿಂದೆ ಅಸಲಿ ಚಿನ್ನವೆಂದು ನಂಬಿಸಿ ಚಿನ್ನಾಭರಣ ಮಾಲೀಕನಿಗೆ ನಕಲಿ ಚಿನ್ನದ(Fake Gold) ಬಿಸ್ಕತ್‌ ಕೊಟ್ಟು 1.30 ಕೋಟಿ ವಂಚಿಸಿದ್ದ(Fraud) ಚಾಲಾಕಿ ಮೋಸಗಾರನೊಬ್ಬ ಕೊನೆಗೂ ಎಸ್‌.ಜೆ.ಪಾರ್ಕ್ ಠಾಣೆ ಪೊಲೀಸರು(Police) ಸೆರೆ ಹಿಡಿದಿದ್ದಾರೆ.

ಗುಜರಾತ್‌(Gujrat) ರಾಜ್ಯದ ಬರೋಡಾ(Baroda) ಮೂಲದ ಇಲಿಯಾಸ್‌ ಖಾನ್‌.ಎಸ್‌.ಅಜ್ಮೀರಿ ಬಂಧಿತನಾಗಿದ್ದು)Arrest), ಆರೋಪಿಯಿಂದ(Accused) ಹಣ ಜಪ್ತಿ ಮಾಡಲಾಗಿದೆ. ಕೆಲ ದಿನಗಳ ಹಿಂದೆ ನಗರತ್‌ ಪೇಟೆಯ ಕೆಂಪಣ್ಣ ಲೇನ್‌ನಲ್ಲಿರುವ ಕೆಸಿಆರ್‌ ಜ್ಯುವೆಲ​ರ್ಸ್‌ ಅ್ಯಂಡ್‌ ಬುಲಿಯನ್‌ ಮಳಿಗೆ ಮಾಲೀಕ ಕೆ.ರಾಹುಲ್‌ ಕುಮಾರ್‌ ಅವರಿಗೆ ಆರೋಪಿ ಟೋಪಿ ಹಾಕಿದ್ದ. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಮೊಬೈಲ್‌ ಕರೆಗಳು(Mobile Calls) ಮಾಹಿತಿ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಿ ನಗರಕ್ಕೆ(Bengaluru) ಕರೆ ತಂದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಶಂಕರ್ ಬಿದರಿಗೆ ಸೈಬರ್ ವಂಚಕರ ಗಾಳ.. 89 ಸಾವಿರ ಕಳಕೊಂಡ ನಿವೃತ್ತ ಅಧಿಕಾರಿ

ಮೊದಲಿನಿಂದಲೂ ಸಗಟು ಚಿನ್ನದ ವ್ಯಾಪಾರಿ ರಾಹುಲ್‌ ಹಾಗೂ ಆರೋಪಿ ಇಲಿಯಾಸ್‌ ನಡುವೆ ವ್ಯವಹಾರಿಕ ನಂಟು ಇತ್ತು. ಕಳೆದ ಏಳೆಂಟು ತಿಂಗಳಿಂದ ಇಲಿಯಾಸ್‌ನಿಂದ ಚಿನ್ನದ ಬಿಸ್ಕತ್‌ ಖರೀದಿಸುತ್ತಿದ್ದ ರಾಹುಲ್‌, ಬಳಿಕ ಆ ಬಿಸ್ಕತ್‌ಗಳನ್ನು ಕರಗಿಸಿ ಆಭರಣ ತಯಾರಿಸುತ್ತಿದ್ದರು. ಅಂತೆಯೇ ಜುಲೈ 20ರಂದು ರಾಹುಲ್‌ಗೆ ಕರೆ ಮಾಡಿ ನನ್ನ ಬಳಿ 3 ಕೆಜಿ ಚಿನ್ನದ ಬಿಸ್ಕೆತ್‌ ಇದೆ. ಅದನ್ನು .1.30 ಕೋಟಿಗೆ ಮಾರುವುದಾಗಿ ಹೇಳಿದ್ದ. ಈ ಮಾತಿಗೆ ಒಪ್ಪಿದ ರಾಹುಲ್‌, ಜು.26 ರಂದು ಚಿನ್ನದ ಬಿಸ್ಕತ್‌ ಖರೀದಿಸುವುದಾಗಿ ಹೇಳಿದ್ದರು. ಅಂತೆಯೇ ಆ ದಿನ ರಾಹುಲ್‌ ಅವರಿಗೆ ಚಿನ್ನದ ಬಿಸ್ಕತ್‌ ಎಂದು ಹೇಳಿ ನಕಲಿ ಚಿನ್ನ ಕೊಟ್ಟು .1.30 ಕೋಟಿ ಪಡೆದು ಆರೋಪಿ ಕಾಲ್ಕಿತ್ತಿದ್ದ. ಇದಾದ ನಂತರ ಸೆ.16ರಂದು ಆ ಚಿನ್ನದ ಬಿಸ್ಕತ್‌ಗಳನ್ನು ಮತ್ತೊಬ್ಬರಿಗೆ ಮಾರಾಟ ಮಾಡಲು ರಾಹುಲ್‌ ಯತ್ನಿಸಿದಾಗಲೇ ನಕಲಿ ಎಂಬುದು ಗೊತ್ತಾಗಿದೆ. ಈ ಬಗ್ಗೆ ಎಸ್‌.ಜೆ.ಪಾರ್ಕ್ ಠಾಣೆ ಪೊಲೀಸರಿಗೆ ರಾಹುಲ್‌ ದೂರು ನೀಡಿದ್ದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.