Asianet Suvarna News Asianet Suvarna News

ಸುಲಿಗೆ ವಿಡಿಯೋ ವೈರಲ್‌: ಆರೋಪಿ ಸೆರೆ

ಸಾರ್ವಜನಿಕರನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದ ವಿಡಿಯೋ ವೈರಲ್‌| ಆರೋಪಿ ಬಂಧನ| 100 ಗ್ರಾಂ ತೂಕದ ಗಾಂಜಾ, ಡ್ರ್ಯಾಗರ್‌ ಹಾಗೂ ಒಂದು ಮಚ್ಚು ಜಪ್ತಿ| ಮತ್ತೊಬ್ಬ ಆರೋಪಿ ಪರಾರಿ| 

Accused Arrested for Crime Case in Bengaluru grg
Author
Bengaluru, First Published Oct 24, 2020, 8:14 AM IST

ಬೆಂಗಳೂರು(ಅ.24): ಚಿಕ್ಕಪೇಟೆ ಮೆಟ್ರೋ ಸ್ಟೇಷನ್‌ ಸಮೀಪ ಹಾಡಹಗಲೇ ಸಾರ್ವಜನಿಕರನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದ ವಿಡಿಯೋ ವೈರಲ್‌ ಆಗಿದ್ದ ಬೆನ್ನಲ್ಲೇ ಆರೋಪಿಯೊಬ್ಬನನ್ನು ಸಿಟಿ ಮಾರ್ಕೆಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅಜಾದ್‌ನಗರ ಜಾನಿ ನಿವಾಸಿ (22) ಬಂಧಿತ. ಮತ್ತೊಬ್ಬ ಆರೋಪಿ ಬಗ್ಗೆ ಸುಳಿವು ಪತ್ತೆಯಾಗಿದ್ದು, ಶೀಘ್ರ ಬಂಧಿಸಲಾಗುವುದು ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್‌ ಎಂ.ಪಾಟೀಲ್‌ ಹೇಳಿದ್ದಾರೆ.

ಆರೋಪಿಯಿಂದ 100 ಗ್ರಾಂ ತೂಕದ ಗಾಂಜಾ, ಡ್ರ್ಯಾಗರ್‌ ಹಾಗೂ ಒಂದು ಮಚ್ಚು ಜಪ್ತಿ ಮಾಡಲಾಗಿದೆ. ಆರೋಪಿ ಜಾನಿ ಕಳೆದ ವರ್ಷ ಬ್ಯಾಟರಾಯನಪುರದಲ್ಲಿ ಚಾಕು ತೋರಿಸಿ ಚಿನ್ನದ ಸರ ಕಸಿದಿದ್ದ ಪ್ರಕರಣದಲ್ಲಿ ಜೈಲು ಸೇರಿದ್ದ. ನಾಲ್ಕು ತಿಂಗಳು ಜೈಲಿನಲ್ಲಿದ್ದ ಆರೋಪಿ ಮಾರ್ಚ್‌ನಲ್ಲಿ ಬಿಡುಗಡೆ ಹೊಂದಿದ್ದ.

ಪತ್ನಿಯೊಂದಿಗೆ ಸಲುಗೆ ಬೇಡ ಎಂದಿದ್ದಕ್ಕೆ ಸಿಲಿಂಡರ್‌ ಎತ್ತಿಹಾಕಿ ಹತ್ಯೆಗೈದ ಗೆಳೆಯ..!

ಆರೋಪಿ ಕೂಲಿ ಕೆಲಸ ಮಾಡಿಕೊಂಡಿದ್ದು, ಪುನಃ ಮತ್ತೆ ಹಳೇ ಚಾಳಿ ಮುಂದುವರೆಸಿದ್ದ. ಚಿಕ್ಕಪೇಟೆ ಮೆಟ್ರೋ ನಿಲ್ದಾಣದ ಬಳಿ ಇಬ್ಬರು ಆರೋಪಿಗಳು ದಾರಿಹೋಕನೊಬ್ಬನನ್ನು ಅಡ್ಡಹಾಕಿ ಚಾಕುವಿನಿಂದ ಬೆದರಿಸಿ ಸುಲಿಗೆ ಮಾಡಿದ್ದರು. ಈ ಸುಲಿಗೆ ಮಾಡುವ ವಿಡಿಯೊವನ್ನು ಲಾರಿ ಚಾಲಕನೊಬ್ಬ ಸೆರೆ ಹಿಡಿದಿದ್ದು, ಎಲ್ಲೆಡೆ ವೈರಲ್‌ ಆಗಿತ್ತು. ವಿಡಿಯೋ ವೈರಲ್‌ ಆಗುತ್ತಿದ್ದಂತೆ ಡಿಸಿಪಿ ಅವರು ಆರೋಪಿಗಳ ಬಂಧನಕ್ಕೆ ತಂಡ ರಚಿಸಿದ್ದರು. ಇನ್ನೊಬ್ಬ ಆರೋಪಿ ಬಗ್ಗೆ ಮಾಹಿತಿ ಸಿಕ್ಕಿದ್ದು, ಶೀಘ್ರವೇ ಬಂಧಿಸಲಾಗುವುದು ಎಂದು ಡಿಸಿಪಿ ಹೇಳಿದ್ದಾರೆ.
 

Follow Us:
Download App:
  • android
  • ios