ಬೆಳಗಾವಿ: ಪಿಎಸ್‌ಐ ಹೆಸರಲ್ಲಿ ನಕಲಿ ಇನ್ಸ್ಟಾಗ್ರಾಮ್ ಖಾತೆ ತೆರೆದು 50 ಜನ‌ ಮಹಿಳೆಯರಿಗೆ ವಂಚನೆ

ಬಂಧಿತ ಆರೋಪಿ ವಿಜಯ ಕುಮಾರ್ ಬರಲಿ ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ಅನಿಲ್ ಕುಮಾರ್ ಕಂಬಾರ್ ಹೆಸರಿನಲ್ಲಿ ನಕಲಿ ಇನ್ಸ್ಟಾಗ್ರಾಮ್ ಖಾತೆ ತೆರೆದಿದ್ದನು. ನಕಲಿ ಖಾತೆಗೆ 1.20 ಲಕ್ಷ ಫಾಲೋವರ್ಸ್ ಹೊಂದಿದ್ದನು. 

Accused Arrested For Cheated to 50 Women in Belagavi grg

ಬೆಳಗಾವಿ(ಜ.27):  ಪಿಎಸ್‌ಐ ಹೆಸರಲ್ಲಿ ನಕಲಿ ಇನ್ಸ್ಟಾಗ್ರಾಮ್ ಖಾತೆ ತೆರೆದು 50 ಜನ‌ ಮಹಿಳೆಯರಿಗೆ ವಂಚಿಸಿದ ಘಟನೆ ನಗರದಲ್ಲಿ ನಡೆದಿದೆ. ಮಹಿಳೆಯರಿಗೆ ಆಮಿಷವೊಡ್ಡಿ ನಾಲ್ಕು ಲಕ್ಷ ರೂಪಾಯಿ ವಂಚಿಸಿದ ಆರೋಪಿಯನ್ನ ಬೆಳಗಾವಿ ಸಿಇಎನ್ ಪೊಲೀಸರು ಬಂಧಿಸಿದ್ದಾರೆ. ವಿಜಯ ಕುಮಾರ್ ಬರಲಿ(28) ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ. 

ಬಂಧಿತ ಆರೋಪಿ ವಿಜಯ ಕುಮಾರ್ ಬರಲಿ ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ಅನಿಲ್ ಕುಮಾರ್ ಕಂಬಾರ್ ಹೆಸರಿನಲ್ಲಿ ನಕಲಿ ಇನ್ಸ್ಟಾಗ್ರಾಮ್ ಖಾತೆ ತೆರೆದಿದ್ದನು. ನಕಲಿ ಖಾತೆಗೆ 1.20 ಲಕ್ಷ ಫಾಲೋವರ್ಸ್ ಹೊಂದಿದ್ದನು. 

ರಾಜ್ಯದಲ್ಲಿ ಮತ್ತೊಂದು ಪೋನ್ಝಿ ಮೋಸದ ಜಾಲ ಬಯಲು: ಹಣ ಡೆಪಾಸಿಟ್‌ ಮಾಡಿದವರಿಗೆ ಪಂಗನಾಮ

ಆರೋಪಿ ವಿಜಯ ಕುಮಾರ್ ಬರಲಿ ಇದೇ ತರಹ 9 ನಕಲಿ ಐಡಿ‌ ಹೊಂದಿದ್ದಾನೆ. ನಕಲಿ ಖಾತೆ ಸೃಷ್ಟಿ ಬಗ್ಗೆ ಪಿಎಸ್‌ಸೈ ಅನಿಲ್ ಕುಮಾರ್ ಕಂಬಾರ್ ದೂರು ನೀಡಿದ್ದರು. ಸದ್ಯ ಆರೋಪಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ  ಸಿಇಎನ್ ಪೊಲೀಸರು. 

ಪಿಎಸ್ಐ ಹೆಸರಿನಲ್ಲಿ ನಕಲಿ‌ ಖಾತೆ ಸೃಷ್ಟಿಸಿ ಮಕ್ಮಲ್ ಟೋಪಿ ಹಾಕಿದ್ದವ ಅಂದರ್

ಬೆಳಗಾಗಿ ಸಿಇಎಸ್ ಪೊಲೀಸರ ಕಾರ್ಯಾಚರಣೆಯಲ್ಲಿ ಆಸಾಮಿ ಬಲೆಗೆ ಬಿದ್ದಿದ್ದಾನೆ. ಅಥಣಿ ಮೂಲದ ವಿಜಯ್ ಬರಲಿ(28) ಬಂಧಿತ ಯುವಕನಾಗಿದ್ದಾನೆ. ಬಂಧಿತ ಯುವಕ ನಿಪ್ಪಾಣಿ ಪಿಎಸ್ಐ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಹಣ ದೋಚುತ್ತಿದ್ದನು. ಉದ್ಯೋಗದ ಆಮಿಷ ತೋರಿಸಿ ಪಿಎಸ್ಐ ಹೆಸರು ದುರ್ಬಳಕೆ ಮಾಡಿ ಹಣಕ್ಕೆ ಬೇಡಿಕೆ ಇಡುತ್ತಿದ್ದ, ಸುಮಾರು 50 ಕ್ಕೂ ಹೆಚ್ಚು ಮಹಿಳೆಯಿಂದ 4 ಲಕ್ಷಕ್ಕೂ ಅಧಿಕ ಹಣ ಪಡೆದು ಪಂಗನಾಮ ಹಾಕಿದ್ದ. 

Latest Videos
Follow Us:
Download App:
  • android
  • ios