ರಾಜ್ಯದಲ್ಲಿ ಮತ್ತೊಂದು ಪೋನ್ಝಿ ಮೋಸದ ಜಾಲ ಬಯಲು: ಹಣ ಡೆಪಾಸಿಟ್ ಮಾಡಿದವರಿಗೆ ಪಂಗನಾಮ
ಬೆಂಗಳೂರು ಮಹಾನಗರದಲ್ಲಿ ಮತ್ತೊಂದು ಪೋನ್ಝಿ ಕೇಸ್ (Ponzi Case) ಪತ್ತೆಯಾಗಿದೆ. ಇಂಟಲಿಜೆನ್ಸ್ ಬ್ಯೂರೋ ಸಿಬ್ಬಂದಿಯಿಂದ ಈ ಪೋನ್ಝಿ ಕೇಸ್ ಬಯಲಾಗಿದೆ. ಪಿರಮಿಡ್ ರೀತಿಯಲ್ಲಿ ಗ್ರಾಹಕರಿಂದ ಹಣ ಡೆಪಾಸಿಟ್ ಮಾಡಿಸಿಕೊಂಡು ವಂಚನೆ ಮಾಡುತ್ತಿದ್ದ ನಾಲ್ವರು ಆರೋಪಿಗಳ ಬಂಧನವಾಗಿದೆ.
ಬೆಂಗಳೂರು (ಜ.26): ಐಟಿ-ಬಿಟಿ ಸಿಟಿ ಬೆಂಗಳೂರು ಮಹಾನಗರದಲ್ಲಿ ಮತ್ತೊಂದು ಪೋನ್ಝಿ ಕೇಸ್ (Ponzi Case) ಪತ್ತೆಯಾಗಿದೆ. ಇಂಟಲಿಜೆನ್ಸ್ ಬ್ಯೂರೋ ಸಿಬ್ಬಂದಿಯಿಂದ ಈ ಪೋನ್ಝಿ ಕೇಸ್ ಬಯಲಾಗಿದೆ. ಪಿರಮಿಡ್ ರೀತಿಯಲ್ಲಿ ಗ್ರಾಹಕರಿಂದ ಹಣ ಡೆಪಾಸಿಟ್ ಮಾಡಿಸಿಕೊಂಡು ವಂಚನೆ ಮಾಡುತ್ತಿದ್ದ ನಾಲ್ವರು ಆರೋಪಿಗಳ ಬಂಧನವಾಗಿದೆ.
ಫಿರಮಿಡ್ ರೀತಿಯಲ್ಲಿ ಮಲ್ಟಿಲೆವೆಲ್ ಮನಿ ಮಾರ್ಕೆಟಿಂಗ್ ಸ್ಕೀಮ್ ರಚಿಸಿ ಮಾರ್ಕೆಟಿಂಗ್ ಮಾಡುತ್ತಿದ್ದರು. ಗ್ರಾಹಕರು ಇಂತಿಷ್ಟು ಹಣವನ್ನು ಡೆಪಾಸಿಟ್ ಮಾಡಿ, ಅದಕ್ಕೆ ಇನ್ನಷ್ಟು ಜನರಿಂದ ಹಣವನ್ನು ಡೆಪಾಸಿಟ್ ಮಾಡಿಸಿ ಕೆಲವು ಮ್ಯಾಗ್ನೆಟಿಕ್ ವಸ್ತುಗಳನ್ನು ಮಾರಾಟ ಮಾಡಿದರೆ ಭಾರಿ ಪ್ರಮಾಣದ ಲಾಭ ಗಳಿಸಬಹುದು ಎಂದು ಜಾಹೀರಾತು ನೀಡುತ್ತಿದ್ದರು. ಸುಲಭವಾಗಿ ಹಣ ಗಳಿಸುವ ಮಾರ್ಗವನ್ನು ಹುಡುಕುವ ಜನರು ಇವರ ಮಾರ್ಕೆಟಿಂಗ್ ನೋಡಿ ಕರೆ ಮಾಡುತ್ತಿದ್ದರು. ಹೀಗೆ ಕರೆ ಮಾಡಿದವರಿಗೆ ಮೊದಲು ಸುಲಭವಾಗಿ ಹಣ ಗಳಿಸುವ ಮಾರ್ಗ ಇದೆ ಎಂದು ಸುಳ್ಳು ಭರವಸೆ ನೀಡುತ್ತಿದ್ದರು.
ಬೆಂಗಳೂರು: ಬಿಬಿಎಂಪಿ ಹೆಸರಲ್ಲಿ ಕರೆ ಮಾಡಿ ಸ್ನೇಹಿತರಿಗೇ ವಂಚನೆ..!
ಗುಂಪಿನ ಸಹಚರರಿಗೆ ಸನ್ಮಾನ: ಜೊತೆಗೆ, ಈಗಾಗಲೇ 10 ಲಕ್ಷ ರೂ.ವರೆಗೆ ಕೆಲವರು ಸಂಪಾದನೆ ಮಾಡಿದ್ದಾರೆ ಎಂದು ತಮ್ಮ ಗುಂಪಿನ ಸಹಚರರ ಮೊಬೈಲ್ ಸಂಖ್ಯೆಯನ್ನು ನೀಡುತ್ತಿದ್ದರು. ಕೊನೆಗೆ, ಹಣ ಡೆಪಾಸಿಟ್ ಮಾಡಿ ಕಡಿಮೆ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡಲು ಡೆಪಾಸಿಟ್ ಮಾಡಿ ನೋಂದಣಿ ಆಗುವಂತೆ ತಿಳಿಸುತ್ತಿದ್ದರು. ಇನ್ನೂ ಹೆಚ್ಚಿನ ಪ್ರಮಾಣದ ಕಮಿಷನ್ ಬೇಕಾದಲ್ಲಿ ಡೆಪಾಸಿಟ್ ಹೆಚ್ಚಿನ ಜನರನ್ನು ಹಣ ಡೆಪಾಸಿಟ್ ಮಾಡುವುದಕ್ಕೆ ಸೂಚನೆ ನೀಡುತ್ತಿದ್ದರು. ಆದರೆ, ಹೀಗೆ ಹಣ ಡೆಪಾಸಿಟ್ ಮಾಡಿಸಿಕೊಂಡು ಎಲ್ಲರಿಗೂ ವಂಚನೆ ಮಾಡುವುದನ್ನೇ ತಮ್ಮ ಕಾಯಕವನ್ನಾಗಿಸಿಕೊಂಡಿದ್ದರು.
ನಾಲ್ವರ ಹೆಡೆಮುರಿ ಕಟ್ಟಿದ ಪೊಲೀಸರು: ಫೋನ್ಝಿ ಹಗರಣದಲ್ಲಿ ಭಾಗಿಯಾಗಿರುವ ಶೇಕ್ ಸಾಧಿಕ್, ಯೋಗೇಶ್, ಪ್ರಮೋದ್ ಹಾಗೂ ಸುನೀಲ್ ಜೋಷಿ ಎಂಬ ನಾಲ್ವರು ಆರೋಪಿಗಳನ್ನು ಹೈಗ್ರೌಂಡ್ಸ್ ಪೊಲೀಸರು ಬಂಧಿಸಿದ್ದಾರೆ. ಈಗಾಗಲೇ ಹಲವು ಚೈನ್‌ಲಿಂಕ್ ಮಾದರಿಯ ಕಂಪನಿಗಳು ಲಕ್ಷಾಂತರ ಸಾರ್ವಜನಿಕರಿಗೆ ಮೋಸ ಮಾಡಿರುವುದು ಬಯಲಿಗೆ ಬಂದಿವೆ. ಆದರೂ, ಹೊಸ ಯೋಜನೆಯನ್ನು ಸೃಷ್ಟಿಸಿಕೊಂಡು ಫಿರಮಿಡ್ ಮಾದರಿಯ ಯೋಜನೆ ರೂಪಿಸಿ ವಂಚನೆ ಮಾಡಲು ಮುಂದಾಗಿದ್ದಾರೆ. ಈ ಪ್ರಕರಣ ಮತ್ತೊಂದು ರೀತಿಯ ವಂಚನೆ ಪ್ರಕರಣವಾಗಿದೆ ಎಂದು ರಾಜ್ಯ ಗುಪ್ತ ವಾರ್ತೆ ಸಿಬ್ಬಂದಿ ದೂರು ನೀಡಿದ್ದರು. ಇದನ್ನು ಆಧರಿಸಿ ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
31 ಸಾವಿರ ಕೋಟಿ ದೋಚಿ ‘ಕ್ರಿಪ್ಟೋಕ್ವೀನ್’ ಪರಾರಿ: ಇದು ಜಗತ್ತಿನ ಅತಿ ದೊಡ್ಡ ಕ್ರಿಪ್ಟೋಕರೆನ್ಸಿ ವಂಚನೆ..!
ಹಣ ಡೆಪಾಸಿಟ್‌ಗಾಗಿ ಕಾರ್ಯಕ್ರಮ ಆಯೋಜನೆ: ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿ ಅಲ್ಲಿ ಸಾವಿರಾರು ಗ್ರಾಹಕರನ್ನು ಸೇರಿಸಿ ವಂಚನೆ ಮಾಡುತ್ತಿದ್ದರು. ವಂಚನೆ ಮಾಡಲಿಕ್ಕಾಗಿಯೇ ಇ-ಬಯೋಮೆಟ್ರಿಕ್ ಎವಾಲ್ಯೂಷನ್ ಎಂಬ ಕಂಪನಿಯ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಗ್ರಾಹರಿಂದ ಡೆಪಾಸಿಟ್ ಮಾಡಿಕೊಂಡು ಹೆಚ್ಚಿನ ಹಣದ ಆಮೀಷ ಒಡ್ಡುತ್ತಿದ್ದರು. ಇನ್ನು ಮಲ್ಟಿ ಲೆವೆಲ್ ಮನಿ ಮಾರ್ಕೆಟಿಂಗ್ ಸ್ಕೀಮ್ ನಡೆಸಲು ಜಾಹೀರಾತು ನೀಡುತ್ತಿದ್ದರು. ಮ್ಯಾಗ್ನೇಟಿಕ್ ಉತ್ಪನ್ನಗಳ ಮಾರಾಟದ ಬಗ್ಗೆ ಮಾತುಕತೆ ನಡೆಸಿ ಈಗಾಗಲೇ ಹಲವರು 10 ಲಕ್ಷದವರೆಗೂ ಸಂಪಾದನೆ ಮಾಡಿದ್ದಾರೆಂದು ಕೆಲವರಿಗೆ ಸನ್ಮಾನ ಮಾಡಿ ಹಣ ಹೂಡಲು ಪ್ರಚೋದನೆ ನೀಡುತ್ತಿದ್ದರು.